WTC Final: ಟೀಂ ಇಂಡಿಯಾದ ಈ ಅಪಾಯಕಾರಿ ಬ್ಯಾಟ್ಸ್’ಮನ್ WTC ಫೈನಲ್’ನಿಂದ ಔಟ್! ಮುಂದೇನು?

Team India Cricketer Ruled Out: ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೆಎಲ್ ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಕೆಎಲ್ ರಾಹುಲ್ ಗಾಯಗೊಂಡ ನಂತರ ಅವರ ಸ್ಥಾನಕ್ಕೆ ಯಾರನ್ನು ಬದಲಿಯಾಗಿ ತರಬೇಕು ಎಂಬ ಆಲೋಚನೆಯಲ್ಲಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ.

Written by - Bhavishya Shetty | Last Updated : May 5, 2023, 12:24 PM IST
    • ಗಾಯದ ಕಾರಣದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಫೈನಲ್‌ನಿಂದ ಹೊರಗುಳಿಯಲಿದ್ದಾರೆ
    • ಕೆಎಲ್ ರಾಹುಲ್ ಅವರ ಸ್ಥಾನಕ್ಕೆ ಯಾರನ್ನು ಬದಲಿಯಾಗಿ ತರಬೇಕು ಎಂಬ ಆಲೋಚನೆಯಲ್ಲಿದೆ ಬಿಸಿಸಿಐ
    • ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗೂ ಪ್ರಾರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ
WTC Final: ಟೀಂ ಇಂಡಿಯಾದ ಈ ಅಪಾಯಕಾರಿ ಬ್ಯಾಟ್ಸ್’ಮನ್ WTC ಫೈನಲ್’ನಿಂದ ಔಟ್! ಮುಂದೇನು?  title=
KL Rahul

Team India Cricketer Ruled Out: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಅಂತಿಮ ಪಂದ್ಯವು ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್‌ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ. ಆದರೆ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗೂ ಪ್ರಾರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ.

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಒಬ್ಬರು ಗಾಯದ ಕಾರಣದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಫೈನಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ಮೂಲಗಳು ಮಾಹಿತಿಯನ್ನು ನೀಡಿವೆ.

ಇದನ್ನೂ ಓದಿ: Viral Video: ಅಪ್ಪನ ಮುಂದೆಯೇ ಸಿಗರೇಟ್ ಹಚ್ಚಿ ಅವಾಜ್‌ ಹಾಕಿದ ಮಗ.. ಹೇಗ್‌ ಬಿತ್ತು ನೋಡಿ ಒದೆ!

ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೆಎಲ್ ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಕೆಎಲ್ ರಾಹುಲ್ ಗಾಯಗೊಂಡ ನಂತರ ಅವರ ಸ್ಥಾನಕ್ಕೆ ಯಾರನ್ನು ಬದಲಿಯಾಗಿ ತರಬೇಕು ಎಂಬ ಆಲೋಚನೆಯಲ್ಲಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಇನ್‌ ಸೈಡ್‌ ಸ್ಪೋರ್ಟ್‌’ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, 'ಕೆಎಲ್ ರಾಹುಲ್ ಅವರಿಗೆ ಇನ್ನೂ ಊತ ಕಡಿಮೆಯಾಗಿಲ್ಲ. ಇದು ಗಂಭೀರವಾದ ವಿಷಯವಾಗಿದೆ. ಊತವನ್ನು ಕಡಿಮೆ ಮಾಡಲು ಅವರಿಗೆ ಔಷಧಗಳನ್ನು ನೀಡಲಾಗಿದೆ. ಊತ ಕಡಿಮೆಯಾದ ನಂತರವಷ್ಟೇ ಸ್ಕ್ಯಾನ್ ಮಾಡುತ್ತಾರೆ. ಸ್ಕ್ಯಾನ್ ವರದಿ ಬಂದ ನಂತರವೇ ಮುಂದೇನಾಗುತ್ತದೆ ಎಂಬುದು ತಿಳಿಯಲಿದೆ” ಎಂದು ಹೇಳಿದ್ದಾರೆ.

ಬಿಸಿಸಿಐನ ಮತ್ತೊಬ್ಬ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದು, 'ಕೆ ಎಲ್ ರಾಹುಲ್ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ನಲ್ಲಿ ಆಡುತ್ತಾರೆ ಎಂದು ನಾವು ಇನ್ನೂ ನಿರೀಕ್ಷಿಸುತ್ತಿದ್ದೇವೆ, ಏಕೆಂದರೆ ನಮಗೆ ಇನ್ನೂ ಒಂದು ತಿಂಗಳು ಉಳಿದಿದೆ. ಆದರೆ ಕೆಎಲ್ ರಾಹುಲ್ ಆಡಲು ಸಾಧ್ಯವಾಗದಿದ್ದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಬದಲಿಯಾಗಿ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಆದರೆ ಈಗ ಏನನ್ನೂ ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ.

ಜೂನ್ 7 ರಿಂದ 11 ರವರೆಗೆ ಲಂಡನ್‌ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗೆ ಹಿರಿಯ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ರಾಹುಲ್ ಅವರನ್ನು ಸಿದ್ಧಪಡಿಸುವುದು ಬಿಸಿಸಿಐ ವೈದ್ಯಕೀಯ ತಂಡಕ್ಕೆ ಕಷ್ಟಕರವಾಗಲಿದೆ. ಮಾರ್ಕಸ್ ಸ್ಟೊಯಿನಿಸ್ ಬೌಂಡರಿ ಬಳಿ ಫಾಫ್ ಡು ಪ್ಲೆಸಿಸ್ ಅವರ ಕವರ್ ಡ್ರೈವ್ ಅನ್ನು ತಡೆಯಲು ಪ್ರಯತ್ನಿಸುತ್ತಿರುವಾಗ ರಾಹುಲ್ ಅವರ ಬಲ ತೊಡೆಗೆ ಈ ಗಾಯವಾಗಿತ್ತು.

ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ಏಳಲಿದೆ 2023ರ ಮೊದಲ ಚಂಡಮಾರುತ 'ಮೋಚಾ' ! IMD ಎಚ್ಚರಿಕೆ

2023ರ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನ್ಕತ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News