ಒಂದೇ ಓವರ್ ನಲ್ಲಿ 7 ಸಿಕ್ಸ್!, ಋತುರಾಜ್ ಗಾಯಕ್ವಾಡ್ ವಿಶ್ವ ದಾಖಲೆ ಸರಿಗಟ್ಟಿದ 21 ವರ್ಷದ ಆಟಗಾರ!

Cricket News In Kannada: ಕಾಬೂಲ್ ಪ್ರೀಮಿಯರ್ ಲೀಗ್ ನಲ್ಲಿ 21ರ ಹರೆಯದ ಬ್ಯಾಟ್ಸ್ ಮನ್ ವೊಬ್ಬರು ಒಂದೇ ಓವರ್ ನಲ್ಲಿ 7 ಸಿಕ್ಸರ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೂ ಮುನ್ನ ಭಾರತದ ರಿತುರಾಜ್ ಗಾಯಕ್ವಾಡ್ ಈ ಸಾಧನೆ ಮಾಡಿದ್ದರು.  

Written by - Nitin Tabib | Last Updated : Jul 30, 2023, 05:16 PM IST
  • ಶನಿವಾರದಂದು ಕಾಬೂಲ್ ಪ್ರೀಮಿಯರ್ ಲೀಗ್‌ನಲ್ಲಿ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಸೇದಿಕುಲ್ಲಾ ಅಟಲ್
  • ಒಂದು ಓವರ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಬಾರಿಸಿ ಈ ಸಾಧನೆ ಮಾಡಿದ್ದಾರೆ.
  • ಎಡಗೈ ಸ್ಪಿನ್ನರ್ ಅಮೀರ್ ಜಜೈ ಅವರ ಓವರ್‌ನಲ್ಲಿ ಅಟಲ್ ತಮ್ಮ ತಂಡ ಶಾಹೀನ್ ಹಂಟರ್ಸ್‌ನ ಇನಿಂಗ್ಸ್‌ನ
  • 19 ನೇ ಓವರ್‌ನಲ್ಲಿ 48 ರನ್ ಗಳಿಸಿದ್ದಾರೆ. ಈ ವೇಳೆ ಸೇದಿಕುಲ್ಲಾ ಅಟಲ್ ಅವರ ಬ್ಯಾಟ್‌ನಿಂದ 7 ಸಿಕ್ಸರ್‌ಗಳು ಸಿಡಿದಿವೆ.
ಒಂದೇ ಓವರ್ ನಲ್ಲಿ 7 ಸಿಕ್ಸ್!, ಋತುರಾಜ್ ಗಾಯಕ್ವಾಡ್ ವಿಶ್ವ ದಾಖಲೆ ಸರಿಗಟ್ಟಿದ 21 ವರ್ಷದ ಆಟಗಾರ! title=

Cricket News In Kannada: ಕಳೆದ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ್ದರು. ಈ ಮೂಲಕ ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ರಿತುರಾಜ್ ಗಾಯಕ್ವಾಡ್ ಅವರಂತೆಯೇ ಇದೀಗ ಅಫ್ಘಾನಿಸ್ತಾನದ ಯುವ ಬ್ಯಾಟ್ಸ್‌ಮನ್ ಕೂಡ ಈ ಸಾಧನೆಯನ್ನು ಪುನರಾವರ್ತಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಾಬೂಲ್ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಈ ದೃಶ್ಯ ಕಂಡುಬಂದಿದೆ.

21 ವರ್ಷದ ಬ್ಯಾಟ್ಸ್‌ಮನ್ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ
ಶನಿವಾರದಂದು ಕಾಬೂಲ್ ಪ್ರೀಮಿಯರ್ ಲೀಗ್‌ನಲ್ಲಿ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಸೇದಿಕುಲ್ಲಾ ಅಟಲ್ ಒಂದು ಓವರ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಬಾರಿಸಿ ಈ ಸಾಧನೆ ಮಾಡಿದ್ದಾರೆ. ಎಡಗೈ ಸ್ಪಿನ್ನರ್ ಅಮೀರ್ ಜಜೈ ಅವರ ಓವರ್‌ನಲ್ಲಿ ಅಟಲ್ ತಮ್ಮ ತಂಡ ಶಾಹೀನ್ ಹಂಟರ್ಸ್‌ನ ಇನಿಂಗ್ಸ್‌ನ 19 ನೇ ಓವರ್‌ನಲ್ಲಿ 48 ರನ್ ಗಳಿಸಿದ್ದಾರೆ. ಈ ವೇಳೆ ಸೇದಿಕುಲ್ಲಾ ಅಟಲ್ ಅವರ ಬ್ಯಾಟ್‌ನಿಂದ 7 ಸಿಕ್ಸರ್‌ಗಳು ಸಿಡಿದಿವೆ. ಕಾಬೂಲ್ ಪ್ರೀಮಿಯರ್ ಲೀಗ್‌ನ 10ನೇ ಪಂದ್ಯದಲ್ಲಿ ಅಬಾಸಿನ್ ಡಿಫೆಂಡರ್ಸ್ ಮತ್ತು ಶಾಹೀನ್ ಹಂಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸೇದಿಕುಲ್ಲಾ ಅಟಲ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ-ಇಲ್ಲಿ ಹೆಣ ಬಲವಂತವಾಗಿ ಹಣ ಕೇಳುತ್ತೇ, ಕೊಡದೆ ಹೋದ್ರೆ...!

ಸ್ಪಿನ್ನರ್ ಅಮೀರ್ ಜಝೈ ಕ್ಲಾಸ್ ತೆಗೆದು ಕೊಂದ ಬ್ಯಾಟ್ಸ್ ಮನ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಂಟರ್ಸ್ 19 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ತಂಡದ ನಾಯಕರಾಗಿದ್ದ ಅಟಲ್ 43 ಎಸೆತಗಳಲ್ಲಿ 71 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅಬಾಸಿನ್ ಡಿಫೆಂಡರ್‌ಗಳಿಂದ 19ನೇ ಓವರ್‌ಗೆ ಜಜೈ ಕ್ರೀಸ್‌ಗೆ ಬಂದರು. ಅವರು ತಮ್ಮ ಮೊದಲ ಮೂರು ಓವರ್‌ಗಳಲ್ಲಿ 31 ರನ್‌ಗಳಿಗೆ 1 ವಿಕೆಟ್ ಪಡೆದಿದ್ದರು. ಅಟಲ್ ಜಜೈ ಅವರ ಮೊದಲ ಎಸೆತವನ್ನು ಸಿಕ್ಸರ್‌ಗೆ ಹೊಡೆದರು, ಅದನ್ನು ನೋ ಬಾಲ್ ಎಂದು ಘೋಷಿಸಲಾಯಿತು. ಜಜೈ ಅವರ ಮುಂದಿನ ಬಾಲ್ ವೈಡ್ ಬಾಲ್ ಆಗಿತ್ತು  ಇದಾದ ಬಳಿಕ ಅಟಲ್ ಎಲ್ಲಾ 6 ಎಸೆತಗಳನ್ನು ಬೌಂಡರಿ ದಾಟಿದರು ಮತ್ತು ಈ ಓವರ್‌ನಲ್ಲಿ ಒಟ್ಟು 48 ರನ್ ಗಳಿಸಿದರು.

ಇದನ್ನೂ ಓದಿ-ವಿಜ್ಞಾನಿಗಳಿಗೂ ಭೇಧಿಸಲು ಸಾಧ್ಯವಾಗಿಲ್ಲ ಈ ಶಿವಾಲಯದ ರಹಸ್ಯ!

ಶತಕ ಬಾರಿಸಿ ತಂಡವನ್ನು ಗೆಲ್ಲಿಸಿದ ಅಟಲ್ 
ಈ ದೊಡ್ಡ ಓವರ್‌ನೊಂದಿಗೆ ತಂಡ 200 ರನ್‌ಗಳ ಗಡಿ ದಾಟಿತು ಮತ್ತು ಅಟಲ್ ಕೂಡ ಕೇವಲ 48 ಎಸೆತಗಳಲ್ಲಿ ಶತಕ ದಾಖಲಿಸಿದರು. ಅಟಲ್ ಅವರ 56 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಹತ್ತು ಸಿಕ್ಸರ್‌ಗಳ ನೆರವಿನಿಂದ  ಅಜೇಯ 118 ರನ್ ಗಳಿಸುವುದರೊಂದಿಗೆ ಅವರ ತಂಡ ಹಂಟರ್ಸ್ ಆರು ವಿಕೆಟ್‌ಗೆ 213 ರನ್ ಗಳಿಸಿತು. ಎಡಗೈ ಬ್ಯಾಟ್ಸ್‌ಮನ್ ಅಟಲ್ ಈ ವರ್ಷದ ಮಾರ್ಚ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನದ ಪರವಾಗಿ ಒಂದೇ ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. ಉತ್ತರವಾಗಿ, ಡಿಫೇಂಡರ್ಸ್ 18.3 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಗಿದೆ ಮತ್ತು ಹಂಟರ್ಸ್ ತಂಡ 92 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News