Rahul Dravid: ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಎಂದು ಹೇಳಿದ ಬಾಲಿವುಡ್ ನಟಿ ಯಾರು ಗೊತ್ತೇ?

ರಾಹುಲ್ ದ್ರಾವಿಡ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿರಬಹುದು, ಆದರೆ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿಯೊಬ್ಬರು ರಾಹುಲ್ ದ್ರಾವಿಡ್ ಅವರ ಮೊದಲ ಪ್ರೀತಿ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Written by - Yashaswini V | Last Updated : Nov 23, 2021, 01:28 PM IST
  • ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು
  • ರಾಹುಲ್ ದ್ರಾವಿಡ್ ಭಾರತದ ಪರ 164 ಟೆಸ್ಟ್ ಪಂದ್ಯಗಳಲ್ಲಿ 13288 ರನ್ ಮತ್ತು 344 ಏಕದಿನ ಪಂದ್ಯಗಳಲ್ಲಿ 10889 ರನ್ ಗಳಿಸಿದ್ದಾರೆ
  • ಇತ್ತೀಚೆಗಷ್ಟೇ ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ನೇಮಕಗೊಂಡಿದ್ದಾರೆ
Rahul Dravid: ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಎಂದು ಹೇಳಿದ ಬಾಲಿವುಡ್ ನಟಿ ಯಾರು ಗೊತ್ತೇ? title=
Rahul Dravid is my first love

ನವದೆಹಲಿ: ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಟೀಮ್ ಇಂಡಿಯಾದ ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿರಬಹುದು, ಆದರೆ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.  ಇತ್ತೀಚೆಗೆ ಬಾಲಿವುಡ್ ನಟಿಯೊಬ್ಬರು ರಾಹುಲ್ ದ್ರಾವಿಡ್ ಅವರ ಮೊದಲ ಪ್ರೀತಿ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಬಾಲಿವುಡ್ ನಟಿಯ ಬಹಿರಂಗ ಘೋಷಣೆ:
ವಾಸ್ತವವಾಗಿ, ಬಾಲಿವುಡ್ ನಟಿ ರಿಚಾ ಚಡ್ಡಾ (Richa Chadha) ಅವರು ರಾಹುಲ್ ದ್ರಾವಿಡ್ ಅವರನ್ನು ತಮ್ಮ ಮೊದಲ ಪ್ರೀತಿ ಎಂದು ಬಣ್ಣಿಸಿದ್ದಾರೆ. ಖಾಸಗಿ ವಾಹಿನಿಯೊಂದಿಗಿನ ಸಂಭಾಷಣೆಯಲ್ಲಿ ರಿಚಾ ಚಡ್ಡಾ ಅವರು ನಾನು ಹೆಚ್ಚು ಕ್ರಿಕೆಟ್ ಅಭಿಮಾನಿಯಲ್ಲ, ಆದರೆ ಕೆಲವೊಮ್ಮೆ ರಾಹುಲ್ ದ್ರಾವಿಡ್ ಅವರನ್ನು ನೋಡಲು ಮಾತ್ರ ಪಂದ್ಯಗಳನ್ನು ನೋಡುತ್ತಿದ್ದೆ ಎಂದಿದ್ದಾರೆ.

ಇದನ್ನೂ ಓದಿ- Women Cricket: ತಾಲಿಬಾನಿಗಳ ಹಸ್ತಕ್ಷೇಪ, ಅಫ್ಘನ್ ಕ್ರಿಕೆಟ್ ಮಂಡಳಿಯನ್ನು ನಿಷೇಧಿಸಲಾಗುತ್ತದೆಯೇ?

ರಾಹುಲ್ ದ್ರಾವಿಡ್ ನನ್ನ ಮೊದಲ ಪ್ರೀತಿ:
ರಾಹುಲ್ ದ್ರಾವಿಡ್ (Rahul Dravid) ನಿವೃತ್ತರಾದಾಗಿನಿಂದ ತಾವು ಕ್ರಿಕೆಟ್ ನೋಡುವುದನ್ನು ನಿಲ್ಲಿಸಿರುವುದಾಗಿ ತಿಳಿಸಿರುವ ನಟಿ ರಿಚಾ ಚಡ್ಡಾ, ಟಿವಿಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತಿದ್ದ ಕಾಲವೊಂದಿತ್ತು. ನನ್ನ ಸಹೋದರ ಕ್ರಿಕೆಟ್ ಆಡುತ್ತಿದ್ದರು. ನನ್ನ ಬಾಲ್ಯದ ದಿನಗಳಲ್ಲಿ ನಾನು ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾಗಿರಲಿಲ್ಲ. ಆದರೆ, ನಾನು ರಾಹುಲ್ ದ್ರಾವಿಡ್ ಆಟವನ್ನು ನೋಡುವುದನ್ನು ಇಷ್ಟಪಡುತ್ತಿದ್ದೆ.. ಅವರು ತಂಡವನ್ನು ತೊರೆದಾಗ, ನಾನು ಕ್ರಿಕೆಟ್ ಅನ್ನು ಅನುಸರಿಸುವುದನ್ನು ನಿಲ್ಲಿಸಿದೆ. ನನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- ಆರ್‌ಸಿಬಿಯಲ್ಲಿ ಡಿವಿಲಿಯರ್ಸ್ ಬದಲಿಗೆ ಯಾರು?: ಈ 3 ಬಲಿಷ್ಠ ಆಟಗಾರರು ರೇಸ್ ನಲ್ಲಿದ್ದಾರೆ..!

ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್:
ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ರಾಹುಲ್ ದ್ರಾವಿಡ್ ಭಾರತದ ಪರ 164 ಟೆಸ್ಟ್ ಪಂದ್ಯಗಳಲ್ಲಿ 13288 ರನ್ ಮತ್ತು 344 ಏಕದಿನ ಪಂದ್ಯಗಳಲ್ಲಿ 10889 ರನ್ ಗಳಿಸಿದ್ದಾರೆ. ಇತ್ತೀಚೆಗಷ್ಟೇ ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ನೇಮಕಗೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News