ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಪಾಕ್ ನಿಂದ ದುಬೈಗೆ ಶಿಫ್ಟ್...! ಏನು ಹೇಳಿದ್ರು ಗಂಗೂಲಿ?

ಮುಂದಿನ ಏಷ್ಯಾಕಪ್ ದುಬೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಹೇಳಿದ್ದಾರೆ, ಇದರಿಂದಾಗಿ ಭಾರತ ಮತ್ತು ಪಾಕಿಸ್ತಾನ ಎರಡೂ ಖಂಡಾಂತರ ಪಂದ್ಯಾವಳಿಯಲ್ಲಿ ಭಾಗವಹಿಸಲು ದಾರಿ ಮಾಡಿಕೊಟ್ಟಿದೆ.

Last Updated : Feb 28, 2020, 09:59 PM IST
ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಪಾಕ್ ನಿಂದ ದುಬೈಗೆ ಶಿಫ್ಟ್...! ಏನು ಹೇಳಿದ್ರು ಗಂಗೂಲಿ? title=
file photo

ನವದೆಹಲಿ: ಮುಂದಿನ ಏಷ್ಯಾಕಪ್ ದುಬೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಹೇಳಿದ್ದಾರೆ, ಇದರಿಂದಾಗಿ ಭಾರತ ಮತ್ತು ಪಾಕಿಸ್ತಾನ ಎರಡೂ ಖಂಡಾಂತರ ಪಂದ್ಯಾವಳಿಯಲ್ಲಿ ಭಾಗವಹಿಸಲು ದಾರಿ ಮಾಡಿಕೊಟ್ಟಿದೆ.

ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಟೂರ್ನಮೆಂಟ್‌ಗೆ ಪಾಕಿಸ್ತಾನವು ಗೊತ್ತುಪಡಿಸಿದ ಆತಿಥೇಯರಾಗಿದ್ದರೂ, ಭದ್ರತಾ ಕಾರಣಗಳಿಂದಾಗಿ ಭಾರತ ತಂಡವು ನೆರೆಯ ದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ್ದರಿಂದ,ಈ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಲಾಗಿದೆ.

ಮಾರ್ಚ್ 3 ರಂದು ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಗಾಗಿ ದುಬೈಗೆ ತೆರಳುವ ಮೊದಲು 'ಏಷ್ಯಾ ಕಪ್ ದುಬೈನಲ್ಲಿ ನಡೆಯಲಿದೆ ಮತ್ತು ಭಾರತ ಮತ್ತು ಪಾಕಿಸ್ತಾನ ಎರಡೂ ಆಡಲಿವೆ' ಎಂದು ಗಂಗೂಲಿ ಈಡನ್ ಗಾರ್ಡನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ, ಪಾಕಿಸ್ತಾನವು ಪಂದ್ಯಾವಳಿಯನ್ನು ಆತಿಥ್ಯ ವಹಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ ಎಂದು ಬಿಸಿಸಿಐ ಹೇಳಿತ್ತು, ಈಗ ಅದನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುತ್ತದೆ.ಸೀಮಿತ ಓವರ್‌ಗಳ ಸರಣಿಗಾಗಿ ಪಾಕಿಸ್ತಾನ ದೇಶಕ್ಕೆ ಭೇಟಿ ನೀಡಿದ 2012-13 ರ ನಂತರ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಉಭಯ ದೇಶಗಳ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ, ಭಾರತ ಮತ್ತು ಪಾಕಿಸ್ತಾನವು 2013 ರ ಆರಂಭದಿಂದಲೂ ಪ್ರಮುಖ ಐಸಿಸಿ ಸ್ಪರ್ಧೆಗಳಲ್ಲಿ ಮಾತ್ರ ಭೇಟಿಯಾಗಿವೆ.

 

Trending News