Pro Kabaddi League 9 : ರಾಕೇಶ್ ಗೌಡನನ್ನು ಭರ್ಜರಿಯಾಗಿ ಸ್ವಾಗತಿಸಿದ ಬೆಂಗಳೂರು ಬುಲ್ಸ್ ಟೀಂ!

ಈ ಸಂಬಂಧದ ವಿಡಿಯೋವನ್ನು ಬೆಂಗಳೂರು ಬುಲ್ಸ್ ಬಹುಭಾಷಿಕ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಕನ್ನಡದ ಕೂಸು ರಾಕೇಶ್ ಈಗ ನಮ್ಮವ ಎಂದು ರಾಕೇಶ್ ಗೌಡ ಅವರಿಗೆ ಸ್ವಾಗತ ಕೋರಿದೆ.   

Written by - Channabasava A Kashinakunti | Last Updated : Sep 23, 2022, 05:44 PM IST
  • ಅಕ್ಟೋಬರ್ ನಿಂದ ನಡೆಯುವ ಪ್ರೋ ಕಬ್ಬಡಿ ಲೀಗ್ 9
  • ರಾಕೇಶ್ ಗೌಡ ಬರಮಾಡಿಕೊಂಡ ಬೆಂಗಳೂರು ಬುಲ್ಸ್ ತಂಡ
  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೋ ಕಬ್ಬಡಿ ಲೀಗ್ ಆರಂಭ
Pro Kabaddi League 9 : ರಾಕೇಶ್ ಗೌಡನನ್ನು ಭರ್ಜರಿಯಾಗಿ ಸ್ವಾಗತಿಸಿದ ಬೆಂಗಳೂರು ಬುಲ್ಸ್ ಟೀಂ! title=

ಬೆಂಗಳೂರು : ಅಕ್ಟೋಬರ್ ನಿಂದ ನಡೆಯುವ ಪ್ರೋ ಕಬ್ಬಡಿ ಲೀಗ್ ಗೆ ಬೆಂಗಳೂರು ಬುಲ್ಸ್ ತಂಡ ರಾಕೇಶ್ ಗೌಡ ಅವರನ್ನು ತಂಡಕ್ಕೆ ಬರಮಾಡಿಕೊಂಡಿದೆ.

ಈ ಸಂಬಂಧದ ವಿಡಿಯೋವನ್ನು ಬೆಂಗಳೂರು ಬುಲ್ಸ್ ಬಹುಭಾಷಿಕ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಕನ್ನಡದ ಕೂಸು ರಾಕೇಶ್ ಈಗ ನಮ್ಮವ ಎಂದು ರಾಕೇಶ್ ಗೌಡ ಅವರಿಗೆ ಸ್ವಾಗತ ಕೋರಿದೆ. 

ಇದನ್ನೂ ಓದಿ : Pro Kabaddi League : ಪ್ರೊ ಕಬಡ್ಡಿ ಸೀಸನ್ 9 ವೇಳಾಪಟ್ಟಿ, ಸಮಯ, ಸ್ಥಳ, ಟಿಕೆಟ್‌ ವಿವರ ಇಲ್ಲಿದೆ ನೋಡಿ

ಅಕ್ಟೋಬರ್ 7 ಬೆಂಗಳೂರಿನ ಕಂಠೀರವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೋ ಕಬ್ಬಡಿ ಲೀಗ್ ಆರಂಭವಾಗಲಿದ್ದು, ಎರಡು ಹಂತಗಳಲ್ಲಿ ನಡೆಯಲಿದೆ. ಈ ಬಾರಿ ಪ್ರೇಕ್ಷಕರಿಗೂ ಆಹ್ವಾನ ಸಿಕ್ಕಿರುವುದು ಕಬ್ಚಡಿ ಆಟದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ. 

ಇದೀಗ 9ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೊದಲಾರ್ಧದ ವೇಳಾಪಟ್ಟಿ ಪ್ರಕಟಗೊಂಡಿದೆ. ಅಕ್ಟೋಬರ್ 7 ರಿಂದ ಕಬಡ್ಡಿ ಲೀಗ್ ಟೂರ್ನಿ ಆರಂಭಗೊಳ್ಳುತ್ತಿದೆ. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಟೂರ್ನಿ ಉದ್ಘಾಟನೆಗೊಳ್ಳಲಿದೆ. ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಬಳಿಕ ಪುಣೆಯ ಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌‌ಗೆ ಸ್ಥಳಾಂತರಗೊಳ್ಳಲಿದೆ.

ಅದ್ಧೂರಿಯಾಗಿ ಲೀಗ್ ಉದ್ಘಾಟನೆಗೊಳ್ಳಲಿದ್ದು, ಮೂರು ದಿನಗಳ ಕಾಲ ಪ್ರತಿ ದಿನ ಮೂರು ಪಂದ್ಯಗಳು ನಡೆಯಲಿದೆ. 66 ಪಂದ್ಯಗಳಿಂದ ಕೂಡಿದ ವೇಳಾಪಟ್ಟಿಯಲ್ಲಿ ಪ್ರತಿಯೊಂದು ಪಂದ್ಯ ವಿಭಿನ್ನವಾಗಿದ್ದು, ಮೊದಲ 2 ದಿನಗಳೊಳಗೆ ಕಬಡ್ಡಿ ಅಭಿಮಾನಿಗಳು ಎಲ್ಲ 12 ತಂಡಗಳ ಆಟವನ್ನು ವೀಕ್ಷಿಸಬಹುದು. ಪಿಕೆಎಲ್‌ 9ನೇ ಋತುವಿನಲ್ಲಿ ಲೀಗ್‌ ಹಂತದಲ್ಲಿ  ಪ್ರತಿ ಶುಕ್ರವಾರ ಮತ್ತು ಭಾನುವಾರ ಕಬಡ್ಡಿ ಅಭಿಮಾನಿಗಳು ಮೂರು ಪಂದ್ಯಗಳ ಸಂಭ್ರಮವನ್ನು ಸವಿಯಬಹುದು.

ಇದನ್ನೂ ಓದಿ : Ind vs Aus : ವರ್ಕ್ ಔಟ್ ಆಗುತ್ತಿಲ್ಲ ರೋಹಿತ್- ದ್ರಾವಿಡ್  Playing 11

ಅಕ್ಟೋಬರ್‌ 7ರಂದು ನಡೆಯುವ 9ನೇ ಸೀಸನ್ ಮೊದಲ ಪಂದ್ಯದಲ್ಲಿ 8ನೇ ಋತುವಿನ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಕೆ.ಸಿ. ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯು-ಮುಂಬಾ ವಿರುದ್ಧ ಸೆಣಸಲಿದೆ. ನಂತರ ನಡೆಯುವ ಲೀಗ್‌ನ ದಕ್ಷಿಣದ ಡರ್ಬಿಯಲ್ಲಿ ಬೆಂಗಳೂರು ಬುಲ್ಸ್‌ ಮತ್ತು ತೆಲುಗು ಟೈಟಾನ್ಸ್‌ ತಂಡಗಳು ಸೆಣಸಲಿದೆ. ಆರಂಭಿಕ ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಯು.ಪಿ. ಯೋಧಾಸ್‌ ವಿರುದ್ಧ ಹೋರಾಟ ನಡೆಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News