“ಭಾರತೀಯರು ವಿದೇಶಿ ಕ್ರಿಕೆಟ್ ಲೀಗ್ ಗಳಲ್ಲಿ ಆಡುವುದಿಲ್ಲ”: BCCI ಮಹತ್ವದ ಹೇಳಿಕೆ

IPL Biggest Sporting League: ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು “ಹೊಸ ಯೋಜನೆಯೊಂದಿಗೆ ಮುಂದುವರಿಯುವುದು ಸಮಯ ಬಂದಿದೆ. ಹೀಗಿರುವಾಗತ್ತು ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲು ಬೇರೆ ಯಾವುದೇ ಕಾರಣದ ಅಗತ್ಯವಿಲ್ಲ” ಎಂದು ಹೇಳಿದರು. ಐಪಿಎಲ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಯೋಜನೆ ಏನು ಎಂದು ಅರುಣ್ ಧುಮಾಲ್ ಅವರನ್ನು ಕೇಳಿದಾಗ, 'ಐಪಿಎಲ್ ಈಗಿರುವುದಕ್ಕಿಂತ ದೊಡ್ಡದಾಗಿರುತ್ತದೆ ಮತ್ತು ಇದು ವಿಶ್ವದ ನಂಬರ್ 1 ಕ್ರೀಡಾ ಲೀಗ್ ಆಗಲಿದೆ' ಎಂದರು.

Written by - Bhavishya Shetty | Last Updated : Nov 8, 2022, 03:40 PM IST
    • ಮುಂದಿನ ಐದು ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲಿದೆ
    • ಪಂದ್ಯದ ಮೌಲ್ಯದ ದೃಷ್ಟಿಯಿಂದ ವಿಶ್ವದ ಎರಡನೇ ಅತ್ಯಮೂಲ್ಯ ಕ್ರೀಡಾ ಲೀಗ್ ಆಗಿದೆ
    • ಐಪಿಎಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಅರುಣ್ ಧುಮಾಲ್ ಹೇಳಿಕೆ
“ಭಾರತೀಯರು ವಿದೇಶಿ ಕ್ರಿಕೆಟ್ ಲೀಗ್ ಗಳಲ್ಲಿ ಆಡುವುದಿಲ್ಲ”: BCCI ಮಹತ್ವದ ಹೇಳಿಕೆ title=
IPL

IPL Biggest Sporting League: ಮುಂದಿನ ಐದು ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಅರುಣ್ ಧುಮಾಲ್ ನಂಬಿದ್ದಾರೆ. ಐಪಿಎಲ್ 2023-2027 ರ ಋತುಗಳಿಗೆ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂ.ಗೆ ಮಾರಾಟ ಮಾಡಿದೆ.  ಇದು ಪ್ರತಿ ಪಂದ್ಯದ ಮೌಲ್ಯದ ದೃಷ್ಟಿಯಿಂದ ವಿಶ್ವದ ಎರಡನೇ ಅತ್ಯಮೂಲ್ಯ ಕ್ರೀಡಾ ಲೀಗ್ ಆಗಿದೆ. ಎರಡೂವರೆ ತಿಂಗಳಲ್ಲಿ ಐಪಿಎಲ್ ನಲ್ಲಿ 10 ತಂಡಗಳ ನಡುವೆ 94 ಪಂದ್ಯಗಳನ್ನು ಆಯೋಜಿಸುವ ಯೋಜನೆ ಇದೆ ಎಂದರು.

ಇದನ್ನೂ ಓದಿ: T20 World Cup: ಸೆಮಿಫೈನಲ್ ಪಂದ್ಯದ ‘ಅಂಪೈರ್’ ಪಟ್ಟಿ ಘೋಷಿಸಿದ ಐಸಿಸಿ

“ಐಪಿಎಲ್ ವಿಶ್ವದ ಅತಿ ದೊಡ್ಡ ಲೀಗ್ ಆಗಲಿದೆ”

ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು “ಹೊಸ ಯೋಜನೆಯೊಂದಿಗೆ ಮುಂದುವರಿಯುವುದು ಸಮಯ ಬಂದಿದೆ. ಹೀಗಿರುವಾಗತ್ತು ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲು ಬೇರೆ ಯಾವುದೇ ಕಾರಣದ ಅಗತ್ಯವಿಲ್ಲ” ಎಂದು ಹೇಳಿದರು. ಐಪಿಎಲ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಯೋಜನೆ ಏನು ಎಂದು ಅರುಣ್ ಧುಮಾಲ್ ಅವರನ್ನು ಕೇಳಿದಾಗ, 'ಐಪಿಎಲ್ ಈಗಿರುವುದಕ್ಕಿಂತ ದೊಡ್ಡದಾಗಿರುತ್ತದೆ ಮತ್ತು ಇದು ವಿಶ್ವದ ನಂಬರ್ 1 ಕ್ರೀಡಾ ಲೀಗ್ ಆಗಲಿದೆ' ಎಂದರು.

ಬಿಸಿಸಿಐನಿಂದ ಮಹತ್ವದ ಹೇಳಿಕೆ:

“ನಾವು ಖಂಡಿತವಾಗಿಯೂ ಇದಕ್ಕೆ ಕೆಲ ವಿಷಯಗಳನ್ನು ಸೇರಿಸಲು ಚಿಂತಿಸುತ್ತೇವೆ. ಈ ಮೂಲಕ ಐಪಿಎಲ್ ಗೆ ಹೆಚ್ಚು ಅಭಿಮಾನಿ ಬರಬಹುದು. ಟಿವಿಯಲ್ಲಿ ನೋಡುವವರಿಗೆ ಮತ್ತು ಕ್ರೀಡಾಂಗಣದಲ್ಲಿ ಬಂದು ನೋಡುವವರಿಗೆ ಉತ್ತಮ ಅನುಭವವನ್ನು ನೀಡಲು ನಾವು ಬಯಸುತ್ತೇವೆ. ನಾವು ಐಪಿಎಲ್ ವೇಳಾಪಟ್ಟಿಯನ್ನು ಸಾಕಷ್ಟು ಮುಂಚಿತವಾಗಿ ಸಿದ್ಧಪಡಿಸಿದರೆ, ಪ್ರಪಂಚದಾದ್ಯಂತದ ಅಭಿಮಾನಿಗಳು ಅದಕ್ಕೆ ಅನುಗುಣವಾಗಿ ತಮ್ಮ ಪ್ರವಾಸವನ್ನು ಮಾಡಬಹುದು” ಎಂದರು.

“ತಂಡಗಳ ಸಂಖ್ಯೆ 10ರಲ್ಲಿ ಉಳಿಯುತ್ತದೆ. ಸಂಖ್ಯೆ ಹೆಚ್ಚಾದರೆ ಒಟ್ಟಾಗಿ ಟೂರ್ನಿ ಆಯೋಜಿಸುವುದು ಕಷ್ಟವಾಗುತ್ತದೆ. ನಾವು ಮೊದಲ ಎರಡು ಸೀಸನ್‌ಗಳಲ್ಲಿ 74 ಪಂದ್ಯಗಳನ್ನು ಮತ್ತು ನಂತರ 84 ಪಂದ್ಯಗಳನ್ನು ಆಯೋಜಿಸಲು ನೋಡುತ್ತಿದ್ದೇವೆ ಮತ್ತು ವಿಷಯಗಳು ಸರಿಯಾಗಿ ನಡೆದರೆ ಐದನೇ ವರ್ಷದಲ್ಲಿ 94 ಪಂದ್ಯಗಳನ್ನು ಆಯೋಜಿಸಬಹುದು” ಎಂದರು.

“ನಾವು ಫುಟ್‌ಬಾಲ್ ಅಥವಾ ವಿಶ್ವದ ಇತರ ಕ್ರೀಡಾ ಲೀಗ್‌ಗಳೊಂದಿಗೆ ನಮ್ಮನ್ನು ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಕ್ರಿಕೆಟ್‌ನ ಅವಶ್ಯಕತೆಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಆರು ತಿಂಗಳ ಕಾಲ ಒಂದೇ ಪಿಚ್‌ನಲ್ಲಿ ಆಡಲು ಸಾಧ್ಯವಿಲ್ಲ. ವಿಶ್ವದಾದ್ಯಂತ ಟಿ20 ಲೀಗ್‌ಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ತನ್ನ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡುವಂತೆ ಒತ್ತಡ ಹೆಚ್ಚುತ್ತಿದೆ. ದಕ್ಷಿಣ ಆಫ್ರಿಕಾದ ಹೊಸ ಲೀಗ್‌ನ ಎಲ್ಲಾ ಆರು ತಂಡಗಳನ್ನು ಐಪಿಎಲ್ ಮಾಲೀಕರು ಖರೀದಿಸಿದ್ದಾರೆ ಮತ್ತು ಈ ತಂಡಗಳಲ್ಲಿ ಭಾರತೀಯ ಆಟಗಾರರ ಉಪಸ್ಥಿತಿಯನ್ನು ಅವರು ಬಯಸುವುದು ಸಹಜ” ಎಂದರು.

ಇದನ್ನೂ ಓದಿ: T20 World Cup 2022:13 ವರ್ಷಗಳ ಸೇಡು ತೀರಿಸಿಕೊಳ್ಳಲು ಅಡಿಲೇಡ್ ತಲುಪಿದ ಟೀಂ ಇಂಡಿಯಾ! ಚುಕ್ತಾ ಆಗುತ್ತಾ ಲೆಕ್ಕ?

“ಭಾರತೀಯರು ವಿದೇಶಿ ಲೀಗ್‌ಗಳಲ್ಲಿ ಆಡುವುದಿಲ್ಲ”

ತನ್ನ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡುವ ಉದ್ದೇಶ ಬಿಸಿಸಿಐಗೆ ಇಲ್ಲ ಎಂದು ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ. ಅರುಣ್ ಧುಮಾಲ್, 'ನಮ್ಮ ಗುತ್ತಿಗೆ ಹೊಂದಿರುವ ಆಟಗಾರರು ಇತರ ಲೀಗ್‌ಗಳಲ್ಲಿ ಆಡುವಂತಿಲ್ಲ ಎಂದು ಬಿಸಿಸಿಐ ನಿರ್ಧರಿಸಿದೆ. ಅವರ ಯೋಗಕ್ಷೇಮಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ನಾವು ಈಗ ಅದಕ್ಕೆ ಬದ್ಧವಾಹಿ ನಿಂತಿದ್ದೇವೆ. ಗುತ್ತಿಗೆ ರಹಿತ ಆಟಗಾರರು ಕೂಡ ಭಾರತ ಪರ ಆಡಲು ಉತ್ಸುಕರಾಗಿದ್ದಾರೆ” ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News