ಕ್ರಿಕೆಟ್ ಜಗತ್ತಿಗೆ ಆಘಾತ.. ರಾಜಸ್ಥಾನದ ಮಾಜಿ ಆಟಗಾರ ರೋಹಿತ್ ಶರ್ಮಾ ನಿಧನ!

Rohit Sharma Death: ಕ್ರಿಕೆಟ್ ಜಗತ್ತಿಗೆ ದೊಡ್ಡ ಆಘಾತ ಉಂಟಾಗಿದೆ.. ರಾಜಸ್ಥಾನದ ಮಾಜಿ ಆರಂಭಿಕ ಆಟಗಾರ ರೋಹಿತ್ ಶರ್ಮಾ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ..    

Written by - Savita M B | Last Updated : Mar 3, 2024, 11:40 AM IST
  • ಕ್ರಿಕೆಟ್ ಜಗತ್ತಿಗೆ ದೊಡ್ಡ ಆಘಾತ ಉಂಟಾಗಿದೆ
  • ರಾಜಸ್ಥಾನದ ಮಾಜಿ ಆರಂಭಿಕ ಆಟಗಾರ ರೋಹಿತ್ ಶರ್ಮಾ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ..
  • ಶರ್ಮಾ ಅವರು 2004 ರ ರಣಜಿ ಟ್ರೋಫಿಯಲ್ಲಿ ರಾಜಸ್ಥಾನ ತಂಡಕ್ಕೆ ಪಾದಾರ್ಪಣೆ ಮಾಡಿದರು.
 ಕ್ರಿಕೆಟ್ ಜಗತ್ತಿಗೆ ಆಘಾತ.. ರಾಜಸ್ಥಾನದ ಮಾಜಿ ಆಟಗಾರ ರೋಹಿತ್ ಶರ್ಮಾ ನಿಧನ!  title=

ರಾಜಸ್ಥಾನದ ಮಾಜಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಮ್ಮ 40ನೇ ವಯಸ್ಸಿನಲ್ಲಿ  ನಿಧನರಾಗಿದ್ದಾರೆ. ವಾಸ್ತವವಾಗಿ ಇವರು ಬಹಳ ದಿನಗಳಿಂದ ಲೀವರ್‌ ಸಮಸ್ಯೆಯಿಂದ ಬಳಲುತ್ತಿದ್ದು... ಚೇತರಿಸಿಕೊಳ್ಳಲು ಸಾಧ್ಯವಾಗದೇ ಇಂದು ನಮ್ಮನ್ನಗಲಿದ್ದಾರೆ.. ವರದಿಗಳ ಪ್ರಕಾರ ಕಳೆದ 4, 5 ದಿನಗಳಿಂದ ರೋಹಿತ್ ಅವರಿಗೆ ಲೀವರ್‌ ತೊಂದರೆ ಹೆಚ್ಚಾಗಿದ್ದು.. ವೈದ್ಯರಿಂದಲೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.. 

ಇದನ್ನೂ ಓದಿ-T20 WC: ಟಿ20 ವಿಶ್ವಕಪ್’ಗೆ ಭಾರತ ತಂಡ… ಅಂದು ಏಕದಿನದಲ್ಲಿ ಮಿಂಚಿದ್ದ ಮೂವರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ!

ರಾಜಸ್ಥಾನದ ಮಾಜಿ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಒಟ್ಟು 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ.. 166 ರನ್ ಗಳಿಸಿದ್ದರು.. ಇದಲ್ಲದೆ, ಇವರು 28 ಲಿಸ್ಟ್ ಎ ಪಂದ್ಯಗಳನ್ನು ಸಹ ಆಡಿ.. 35.41 ಸರಾಸರಿಯಲ್ಲಿ 850 ರನ್ ಗಳಿಸಿದ್ದರು.. ಈ ಬಲಗೈ ಬ್ಯಾಟ್ಸ್‌ಮನ್ 4 ಟಿ-20 ಪಂದ್ಯಗಳಲ್ಲಿ ಭಾಗವಹಿಸಿ 32.75 ಸರಾಸರಿಯಲ್ಲಿ 131 ರನ್ ಗಳಿಸಿದ್ದಾರೆ.

ಇದನ್ನೂ ಓದಿ- T20 WC: ಟಿ20 ವಿಶ್ವಕಪ್’ಗೆ ಭಾರತ ತಂಡ… ಅಂದು ಏಕದಿನದಲ್ಲಿ ಮಿಂಚಿದ್ದ ಮೂವರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ!

ಶರ್ಮಾ ಅವರು 2004 ರ ರಣಜಿ ಟ್ರೋಫಿಯಲ್ಲಿ ರಾಜಸ್ಥಾನ ತಂಡಕ್ಕೆ ಪಾದಾರ್ಪಣೆ ಮಾಡಿದರು. ನಂತರ ಈ ಆಟಗಾರ 2014 ರಲ್ಲಿ ರೈಲ್ವೇಸ್ ವಿರುದ್ಧ ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ತಂಡಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ್ದರು. ಇದಾದ ನಂತರ ಅವರಿಗೆ ಆಡಲು ಅವಕಾಶ ಸಿಗಲಿಲ್ಲ ಹೀಗಾಗಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.. ಇದಾದ ನಂತರವೇ ಆರ್ ಎಸ್ ಹೆಸರಿನ ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸಿ ಯುವ ಆಟಗಾರರಿಗೆ ಕ್ರಿಕೆಟ್ ತರಬೇತಿ ನೀಡಲು ಆರಂಭಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News