KL Rahul Tattoos: ಕೆಎಲ್ ರಾಹುಲ್ ದೇಹದಲ್ಲಿದೆ 9 ಟ್ಯಾಟೂಗಳು: ಒಂದೊಂದಕ್ಕೂ ಇದೆಯಂತೆ ವಿಭಿನ್ನ ಅರ್ಥ!

Meaning Of Tattoos On KL Rahul Body: ಇಂದು ನಾವು ಈ ವರದಿಯಲ್ಲಿ ಕೆ ಎಲ್ ರಾಹುಲ್ ಅವರ ದೇಹದಲ್ಲಿರುವ ಒಂಬತ್ತು ಟ್ಯಾಟೂಗಳ ಬಗ್ಗೆ ಮಾತನಾಡಲಿದ್ದೇವೆ.  ರಾಹುಲ್ ಅವರು ಮೂಲತಃ ಮಂಗಳೂರಿನವರು. ಕಡಲತೀರದಲ್ಲಿಯೇ ಬೆಳೆದ ರಾಹುಲ್, ತಮ್ಮ ಕೈಯಲ್ಲಿ ಲೈಟ್ ಹೌಸ್ ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಬಾಲ್ಯದ ನೆನಪು ಎಂದು ಈ ಹಚ್ಚೆ ಹಾಕಿಸಿಕೊಂಡಿದ್ದು, ಎಡಗೈನ ಮುಂದೋಳಿನ ಮೇಲೆ ಇದೆ.

Written by - Bhavishya Shetty | Last Updated : Jan 22, 2023, 03:42 PM IST
    • ಕೆ ಎಲ್ ರಾಹುಲ್ ಅವರ ದೇಹದಲ್ಲಿರುವ ಒಂಬತ್ತು ಟ್ಯಾಟೂಗಳ ಬಗ್ಗೆ ಮಾತನಾಡಲಿದ್ದೇವೆ
    • ಕಡಲತೀರದಲ್ಲಿಯೇ ಬೆಳೆದ ರಾಹುಲ್, ತಮ್ಮ ಕೈಯಲ್ಲಿ ಲೈಟ್ ಹೌಸ್ ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ
    • ಕೆಎಲ್ ರಾಹುಲ್ ಜನಿಸಿದ್ದು 11 ಗಂಟೆಗೆ. ಹೀಗಾಗಿ ಅವರ ಎಡಭಾಗದ ತೋಳಿನಲ್ಲಿ ಗಡಿಯಾರದ ಹಚ್ಚೆ ಹಾಕಿಸಿಕೊಂಡಿದ್ದಾರೆ
KL Rahul Tattoos: ಕೆಎಲ್ ರಾಹುಲ್ ದೇಹದಲ್ಲಿದೆ 9 ಟ್ಯಾಟೂಗಳು: ಒಂದೊಂದಕ್ಕೂ ಇದೆಯಂತೆ ವಿಭಿನ್ನ ಅರ್ಥ! title=
KL Rahul

KL Rahul Tattoos: ಕನ್ನಡಿಗ ಕೆಎಲ್ ರಾಹುಲ್ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು, ಬಾಲಿವುಡ್ ಸೂಪರ್ ಸ್ಟಾರ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು. ಇವರ ಮದುವೆ, ಕಾರ್ಯಕ್ರಮದ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಮಾಹಿತಿ ಬಿಚ್ಚಿಟ್ಟಿಲ್ಲ. ಆದರೆ ಶೀಘ್ರದಲ್ಲೇ ಹಸೆಮಣೆ ಏರುವುದು ಖಂಡಿತ ಎಂದು ಹೇಳಲಾಗುತ್ತದೆ.

ಇಂದು ನಾವು ಈ ವರದಿಯಲ್ಲಿ ಕೆ ಎಲ್ ರಾಹುಲ್ ಅವರ ದೇಹದಲ್ಲಿರುವ ಒಂಬತ್ತು ಟ್ಯಾಟೂಗಳ ಬಗ್ಗೆ ಮಾತನಾಡಲಿದ್ದೇವೆ.  ರಾಹುಲ್ ಅವರು ಮೂಲತಃ ಮಂಗಳೂರಿನವರು. ಕಡಲತೀರದಲ್ಲಿಯೇ ಬೆಳೆದ ರಾಹುಲ್, ತಮ್ಮ ಕೈಯಲ್ಲಿ ಲೈಟ್ ಹೌಸ್ ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಬಾಲ್ಯದ ನೆನಪು ಎಂದು ಈ ಹಚ್ಚೆ ಹಾಕಿಸಿಕೊಂಡಿದ್ದು, ಎಡಗೈನ ಮುಂದೋಳಿನ ಮೇಲೆ ಇದೆ.

ಇದನ್ನೂ ಓದಿ: Shubman Gill Net Worth: 23 ವರ್ಷಕ್ಕೆ ಕೋಟ್ಯಾಧಿಪತಿಯಾದ ಶುಭ್ಮನ್: ರನ್ ಜೊತೆ ಏರುತ್ತಲೇ ಇದೆ ಗಿಲ್ ವಾರ್ಷಿಕ ಆದಾಯ!

ಇನ್ನು ಕೆಎಲ್ ರಾಹುಲ್ ಜನಿಸಿದ್ದು 11 ಗಂಟೆಗೆ. ಹೀಗಾಗಿ ಅವರ ಎಡಭಾಗದ ತೋಳಿನಲ್ಲಿ ಗಡಿಯಾರದ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದರಲ್ಲಿ ಆ ಕ್ಷಣವನ್ನು ಚಿತ್ರಿಸಲಾಗಿದೆ. ಗಡಿಯಾರದ ಕೆಳಗೆ, "ವೇಣಿ, ವಿದಿ, ವಿಸಿ" ಎಂಬ ಲ್ಯಾಟಿನ್ ಪದವನ್ನು ಬರೆಯಲಾಗಿದೆ. ಇದು ‘ಕೆಎಲ್ ರಾಹುಲ್ ಅವರ ಸಮಯ ಈಗಾಗಲೇ ಪ್ರಾರಂಭವಾಗಿದೆ. ಅವರು ಜಗತ್ತನ್ನು ಆಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸೂಚಿಸುತ್ತದೆ.

ರಾಹುಲ್ ತಮ್ಮ ಬಲ ಮುಂದೋಳಿನ ಮೇಲೆ "ದೇಶಿ ಬಸರ" ಎಂಬ ಪದವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದರರ್ಥ "ಎದ್ದೇಳಲು". 2012 ರ ಬ್ಯಾಟ್‌ಮ್ಯಾನ್ ಚಲನಚಿತ್ರ ದಿ ಡಾರ್ಕ್ ನೈಟ್ ರೈಸಸ್ ಆಧರಿಸಿ ಇದನ್ನು ಮಾಡಲಾಗಿದೆ.

ಅವರ ದೇಹದ ಬಲಭಾಗದಲ್ಲಿ, ಟೆಸ್ಟ್ ಕ್ಯಾಪ್ ಸಂಖ್ಯೆಯನ್ನು ಸೂಚಿಸುವ "284" ಮತ್ತು "11" ರೋಮನ್ ಅಂಕಿಗಳನ್ನು ಟ್ಯಾಟೂ ಮಾಡಿ ಹಾಕಲಾಗಿದೆ. ಅವರು ಭಾರತದ 284ನೇ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ.

ಕೆಎಲ್ ರಾಹುಲ್ ಅವರು ತಮ್ಮ ನಾಯಿ ಸಿಂಬಾವನ್ನು ತುಂಬಾ ಪ್ರೀತಿಸುತ್ತಾರೆ. ಹೀಗಾಗಿ 2017 ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿರುವಾಗ ತಮ್ಮ ಬೆನ್ನಿನ ಮೇಲೆ ತಮ್ಮ ನೆಚ್ಚಿನ ನಾಯಿಯ ಹಚ್ಚೆ ಹಾಕಿಸಿದ್ದರು.

ತಮ್ಮ ಟ್ಯಾಟೂಗಳ ಬಗ್ಗೆ ಅಸಮಾಧಾನಗೊಂಡ ಹೆತ್ತವರನ್ನು ಸಮಾಧಾನಪಡಿಸಲು ಮಣಿಕಟ್ಟಿನ ಮೇಲೆ, ತಂದೆ ತಾಯಿ ಹೆಸರನ್ನು ಹಚ್ಚೆ ಹಾಕಿಸಿದ್ದಾರೆ. ಎಡ ಮಣಿಕಟ್ಟಿನ ಮತ್ತು ಬಲ ಮಣಿಕಟ್ಟಿನ ಮೇಲೆ ಕ್ರಮವಾಗಿ "ರಾಜೇಶ್ವರಿ" ಮತ್ತು "ಲೋಕೇಶ್" ಎಂದು ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ.

ಅವರ ಎಡಗೈಯಲ್ಲಿ ಕೆಎಲ್ ರಾಹುಲ್ ಅವರು ಕ್ರಿಕೆಟ್ ಆಡುವಾಗ ಎದುರಾಳಿಗಳನ್ನು ಸೋಲಿಸಬೇಕು ಎಂಬ ಬುದ್ಧಿವಂತಿಕೆ ಮತ್ತು ತಿಳುವಳಿಕೆಯ ಸಂಕೇತವಾಗಿ ಗೂಬೆಯ ಚಿತ್ರವನ್ನು ಒಳಗೊಂಡ ಕಲಾಕೃತಿಯನ್ನು ಟ್ಯಾಟೂ ಆಗಿ ಹಾಕಿಸಿಕೊಂಡಿದ್ದಾರೆ.

ಕೆಎಲ್ ರಾಹುಲ್ ಅವರ ಎಡ ಮುಂದೋಳಿನ ಮೇಲೆ ಟಗರಿನ ಕೊಂಬುಗಳ ಟ್ಯಾಟೂ ಹಾಕಲಾಗಿದೆ. ರಾಹುಲ್ ಅವರದ್ದು, ಮೇಷ ರಾಶಿಯಾದ್ದರಿಂದ ಈ ಹಚ್ಚೆಯಲ್ಲಿ ಅದು ಪ್ರತಿಫಲಿಸುತ್ತದೆ.

ಇದನ್ನೂ ಓದಿ: ಸೇಮ್ MS Dhoni ಥರನೇ ಕ್ರಿಕೆಟ್ ಆಡ್ತಾರಂತೆ ಈ ಸ್ಟಾರ್ ಕ್ರಿಕೆಟಿಗನ ಮಗ: Team India ಕ್ಯಾಪ್ಟನ್ ಆಗ್ತಾರಾ?

ಅವನ ಎಡ ತೋಳಿನಲ್ಲಿ ತೆರೆದ ಕಣ್ಣುಗಳ ಟ್ಯಾಟೂ ಇದೆ. ಇದು ಹಿರಿಯರು ಯಾವಾಗಲೂ ರಾಹುಲ್ ಜೊತೆಗೆ ನಿಂತಿರುತ್ತಾರೆ ಎಂಬುದನ್ನು ಸೂಚಿಸುತ್ತದೆ. ಕೆಎಲ್ ರಾಹುಲ್ ಅವರಿಗೆ ತನ್ನ ಅಜ್ಜ ಅಜ್ಜಿ ಎಂದರೆ ಬಹಳ ಪ್ರೀತಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News