Vastu Tips: ತುಳಸಿ ಗಿಡ ಅಷ್ಟೇ ಅಲ್ಲ ಮನೆಯಲ್ಲಿನ ಈ ಗಿಡಗಳು ಒಣಗಿದರೂ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ!

Plant Vastu Tips: ಸಾಮಾನ್ಯವಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗಲು ಕೆಲ ಮಹತ್ವದ ಗಿಡಗಳನ್ನು ನೆಡಲಾಗುತ್ತದೆ. ಈ ಗಿಡಗಳನ್ನು ಪೂಜಿಸುವುದರಿಂದ ಆಯಾ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ಆದರೆ ಹಲವು ಬಾರಿ ವಿಶೇಷ ಕಾಳಜಿ ವಹಿಸಿದರೂ ಕೂಡ ಈ ಗಿಡಗಳು ಒಣಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಅವು ಸೂಚನೆಗಳನ್ನು ನೀಡುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ, ಬನ್ನಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ. (Spiritual News In Kannada)  

Written by - Nitin Tabib | Last Updated : Mar 31, 2024, 11:20 PM IST
  • ಸಕಾರಾತ್ಮಕತೆಗಾಗಿ ಮನೆಯ ಅಂಗಳದಲ್ಲಿ ಅಶೋಕ ವೃಕ್ಷವನ್ನು ನೆಡಲಾಗುತ್ತದೆ.
  • ಈ ಮರ ಒಣಗಿ ಹೋದರೆ ಮನೆಯ ನೆಮ್ಮದಿ ಹಾಳಾಗುವ ಲಕ್ಷಣ. ಇಂತಹ ಪರಿಸ್ಥಿತಿಯಲ್ಲಿ, ಅಶೋಕ ವೃಕ್ಷವನ್ನು ಚೆನ್ನಾಗಿ ನೋಡಿಕೊಳ್ಳಿ.
  • ಯಾವುದೇ ಕಾರಣಕ್ಕೂ ಅದನ್ನು ಒಣಗಲು ಬಿಡಬೇಡಿ. ಒಂದು ವೇಳೆ ಒಣಗಿದ್ದರೆ, ತಕ್ಷಣ ಅದನ್ನು ಬದಲಾಯಿಸಿ.
Vastu Tips: ತುಳಸಿ ಗಿಡ ಅಷ್ಟೇ ಅಲ್ಲ ಮನೆಯಲ್ಲಿನ ಈ ಗಿಡಗಳು ಒಣಗಿದರೂ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ! title=

Plant Releted Vastu Tips: ಹಿಂದೂ ಧರ್ಮದಲ್ಲಿ ಅನೇಕ ಸಸ್ಯಗಳ ಉಲ್ಲೇಖವಿದ್ದು, ಅವುಗಳಿಗೆ ಪೂಜನೀಯ ಸ್ಥಾನ ನೀಡಲಾಗಿದೆ. ಹಲವು ಬಾರಿ ಈ ಗಿಡಗಳ ಬಗ್ಗೆ ಕಾಳಜಿ ವಹಿಸದೆ ಹೋದರೆ ಅಥವಾ ನೀರುಣಿಸದೇ ಇರುವ ಕಾರಣ ಗಿಡಗಳು ಒಣಗುತ್ತವೆ. ಈ ಈ ಸಷ್ಯಗಳ ಒಣಗುವಿಕೆ ಕೆಲವು ಅಹಿತಕರ ಸಂಕೇತಗಳನ್ನು ನೀಡುತ್ತವೆ. ಭವಿಷ್ಯದಲ್ಲಿ ಎದುರಾಗಲಿರುವ ಘಟನೆಗಳ ಬಗ್ಗೆ ಅವು ಸೂಚನೆಯನ್ನು ನೀಡುತ್ತವೆ. ಅಂತಹ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

ತುಳಸಿ ಒಣಗುವಿಕೆ- ಮನೆಯಲ್ಲಿ ಸ್ವಲ್ಪ ಮೈಮರೆತರೂ ಕೂಡ ಮನೆಯಲ್ಲಿನ ಗಿಡಗಳು ಒಣಗುತ್ತವೆ. ಆದರೆ ಕೆಲವೊಮ್ಮೆ ಸಸ್ಯಗಳ ಸಂಪೂರ್ಣ ಆರೈಕೆ ಮಾಡಿದ ನಂತರವೂ ಅವು ಒಣಗುತ್ತವೆ. ತುಳಸಿ ಗಿಡದ ವಿಷಯದಲ್ಲಿ ಹೀಗಾದರೆ, ತಾಯಿ ಲಕ್ಷ್ಮಿ ನಿಮ್ಮ ಮೇಲೆ ಮುನಿಸಿಕೊಳ್ಳಬಹುದು. ಇದು ಹಣದ ನಷ್ಟದ ಸಂಕೇತವಾಗಿದೆ. ತುಳಸಿ ಗಿಡವನ್ನು ತಾಯಿ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ವಿಷ್ಣುವಿಗೆ ತುಂಬಾ ಪ್ರೀಯವಾದ ಸಸ್ಯ. ಹೀಗಾಗಿ ತುಳಸಿ ಗಿಡದ ಬಗ್ಗೆ ವಿಶೇಷ ಕಾಳಜಿ ವಹಿಸಿ(Tulsi Plant Related Vastu Tips).

ಮನಿ ಪ್ಲಾಂಟ್ ಒಣಗುವಿಕೆ- ವಾಸ್ತು ಪ್ರಕಾರ ಮನಿ ಪ್ಲಾಂಟ್‌ನ ಸಸ್ಯವನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಶುಭ. ಗಣೇಶ್ ಈ ದಿಕ್ಕಿನಲ್ಲಿ ನೆಲೆಸಿದ್ದಾನೆ ಮತ್ತು ಇದರಿಂದ ಮನೆಯಲ್ಲಿ ಹಣದ ಮುಗ್ಗಟ್ಟು ಎದುರಾಗುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ. ಆದರೆ ನೀವು ನೆಟ್ಟ ಮನಿ ಪ್ಲಾಂಟ್ ಒಣಗಿ ಹೋದರೆ, ಅದು ಹಣಕಾಸಿನ ವಿಷಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅದು ಮನೆಯಲ್ಲಿ ಹಣದ ಕೊರತೆಯನ್ನು ಸೂಚಿಸುತ್ತದೆ.(Money plant related vastu tips)

ಶಮಿ ಗಿಡದ ಒಣಗುವಿಕೆ- ಶಮಿ ವೃಕ್ಷದ ಒಣಗುವಿಕೆ ಒಂದು ಅಶುಭ ಸಂಕೇತವಾಗಿದೆ. ಶನಿ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಶಮಿ ವೃಕ್ಷವನ್ನು ಪೂಜಿಸಲಾಗುತ್ತದೆ. ಆದರೆ ನಿಮ್ಮ ಹಸಿರು ಶಮಿ ವೃಕ್ಷವು ಹಠಾತ್ತನೆ ಒಣಗಿದರೆ, ಅದು ಶನಿಯ ಕೆಟ್ಟ ಸ್ಥಿತಿ ಮತ್ತು ಶಿವನ ಕೋಪದ ಸಂಕೇತವಾಗಿದೆ. ಹೀಗಾದಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗುತ್ತವೆ.(Shami Plant Related Vastu tips)

ಅಶೋಕ ವೃಕ್ಷ ಒಣಗುವಿಕೆ- ಸಕಾರಾತ್ಮಕತೆಗಾಗಿ ಮನೆಯ ಅಂಗಳದಲ್ಲಿ ಅಶೋಕ ವೃಕ್ಷವನ್ನು ನೆಡಲಾಗುತ್ತದೆ. ಈ ಮರ ಒಣಗಿ ಹೋದರೆ ಮನೆಯ ನೆಮ್ಮದಿ ಹಾಳಾಗುವ ಲಕ್ಷಣ. ಇಂತಹ ಪರಿಸ್ಥಿತಿಯಲ್ಲಿ, ಅಶೋಕ ವೃಕ್ಷವನ್ನು ಚೆನ್ನಾಗಿ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಅದನ್ನು ಒಣಗಲು ಬಿಡಬೇಡಿ. ಒಂದು ವೇಳೆ ಒಣಗಿದ್ದರೆ, ತಕ್ಷಣ ಅದನ್ನು ಬದಲಾಯಿಸಿ.(Ashok Tree Related vastu tips)

ಇದನ್ನೂ ಓದಿ-Malavya Rajyog: ಶೀಘ್ರದಲ್ಲೇ ಶುಕ್ರನ ಕೃಪೆಯಿಂದ ಮಾಲವ್ಯ ರಾಜಯೋಗ ರಚನೆ, ಈ ಜನರ ಮನೆಗೆ ಸಾಕ್ಷಾತ್ ಲಕ್ಷ್ಮಿ ಪ್ರವೇಶ!

ಮಾವಿನ ಮರ ಒಣಗುವಿಕೆ- ಮಾವಿನ ಮರವನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಮಾವಿನ ಎಲೆಗಳನ್ನು ಪೂಜಾ ವಿಧಿಗಳಲ್ಲಿಯೂ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಾವಿನ ಮರ ಒಣಗುವುದು ಭವಿಷ್ಯದಲ್ಲಿ ಬರಲಿರುವ ತೊಂದರೆಗಳ ಮುನ್ಸೂಚನೆಯಾಗಿದೆ. ನಿಮ್ಮ ವಿಷಯದಲ್ಲಿಯೂ ಈ ರೀತಿ ಸಂಭವಿಸಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. (mango tree related vastu tips) 

ಇದನ್ನೂ ಓದಿ-Vastu Tips: ಮನೆಯ ಈ ಭಾಗದಲ್ಲಿ ಹಲ್ಲಿ ಕಂಡರೆ, ಶೀಘ್ರದಲ್ಲೇ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುತ್ತಾಳೆ ಎಂಬುದರ ಸಂಕೇತ!

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News