ಈ ಮೂರು ರಾಶಿಯವರು ವಿವಾದಕ್ಕೆ ಇಳಿದರೆ ಶನಿ ದೇವನ ಕಾಟ ತಪ್ಪಿದ್ದಲ್ಲ

Shani Vakri Effect : ಶನಿದೇವ  ನವೆಂಬರ್ 4 ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರುತ್ತಾನೆ. ಈ ಸಂದರ್ಭದಲ್ಲಿ 3 ರಾಶಿಯವರು ಎದುರಾಗುವ ಕಷ್ಟ ನಷ್ಟದಿಂದ ಬಚಾವಾಗಲು ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ.   

Written by - Ranjitha R K | Last Updated : Jul 3, 2023, 04:06 PM IST
  • ನವೆಂಬರ್ 4 ರವರೆಗೆ ಶನಿಯ ಹಿಮ್ಮುಖ ಚಲನೆ
  • ಮೂರು ರಾಶಿಯವರಿಗೆ ಎದುರಾಗುವುದು ಕಷ್ಟ
  • ಇಡಬೇಕು ಎಚ್ಚರಿಕೆಯ ಹೆಜ್ಜೆ
ಈ ಮೂರು ರಾಶಿಯವರು ವಿವಾದಕ್ಕೆ ಇಳಿದರೆ ಶನಿ ದೇವನ ಕಾಟ ತಪ್ಪಿದ್ದಲ್ಲ   title=

ಬೆಂಗಳೂರು : ಹಿಮ್ಮುಖ ಚಲನೆಯಲ್ಲಿರುವ ಶನಿಯು ತುಲಾ, ವೃಶ್ಚಿಕ ಮತ್ತು ಧನು ರಾಶಿಯ ವ್ಯಾಪಾರಿಗಳು ದುರಹಂಕಾರದಿಂದ ದೂರವಿರುವಂತೆ ಎಚ್ಚರಿಸುತ್ತಾನೆ. ನಡತೆ ಮತ್ತು ಸ್ವಭಾವದಲ್ಲಿ ನಮ್ರತೆ ತ ರುವ ಮುನ್ಸೂಚನೆಯನ್ನು ಶನಿ ನೀಡುತ್ತಿದ್ದಾನೆ. ಶನಿದೇವ  ನವೆಂಬರ್ 4 ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರುತ್ತಾನೆ. ಈ ಸಂದರ್ಭದಲ್ಲಿ 3 ರಾಶಿಯವರು ಎದುರಾಗುವ ಕಷ್ಟ ನಷ್ಟದಿಂದ ಬಚಾವಾಗಲು ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ. 

ತುಲಾ ರಾಶಿ :
ತುಲಾ ರಾಶಿಯ ವ್ಯಾಪಾರ ವರ್ಗದ ಜನರು ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಹೊಸ ಆಲೋಚನೆಗಳೊಂದಿಗೆ ಮುಂದುವರೆಯುವಿರಿ. ಆದರೆ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ತಮ್ಮ ಸಂಬಂಧಗಳನ್ನು ಬಹಳ ಎಚ್ಚರಿಕೆಯಿಂದ ರಕ್ಷಿಸಿಕೊಳ್ಳಬೇಕು. ಏಕೆಂದರೆ ಶನಿದೇವನ ಹಿಮ್ಮುಖ ಚಲನೆಯ ಪರಿಣಾಮ ಘರ್ಷಣೆ ಉಂಟಾಗಬಹುದು. ಆದ್ದರಿಂದ ವಿನಯ ಮತ್ತು ತಾಳ್ಮೆಯನ್ನು ಬಿಡಬೇಡಿ. ಸಂಗಾತಿ ನಿಮಗಿಂತ ದೊಡ್ಡ ಸ್ಥಾನದಲ್ಲಿದ್ದರೆ ಅವರನ್ನು ಮನಸಾರೆ ಗೌರವಿಸಿ. 

ಇದನ್ನೂ ಓದಿ : Shubh Yoga: ದೇವಗುರು ಬೃಹಸ್ಪತಿ ಹಾಗೂ ಸೇನಾಪತಿ ಮಂಗಳನ ಕೃಪೆಯಿಂದ ನವಪಂಚಮ ಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಯೋಗ!

ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ ಉದ್ಯಮಿಗಳು ಯಾರೊಂದಿಗೂ ವಾದ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ಸರ್ಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ವಿವಾದ ಮಾಡಿಕೊಂಡರೆ ದೊಡ್ಡ ಮಟ್ಟದ ಬೆಲೆ ತೆರಬೇಕಾಗಿ ಬರಬಹುದು. ಯಾವುದೇ ರೀತಿಯ ತೆರಿಗೆಯು ಬಾಕಿಯಿದ್ದರೆ, ಅದನ್ನು ಸಮಯಕ್ಕೆ ಸರಿಯಾಗಿ ಜಮಾ ಮಾಡಿ. ಇಲ್ಲದಿದ್ದರೆ ಕಾನೂನು ಕ್ರಮವನ್ನು ಎದುರಿಸಬೇಕಾಗಬಹುದು.  

ಧನು ರಾಶಿ : 
ಧನು ರಾಶಿಯ ಉದ್ಯಮಿಗಳಿಗೆ ಸಮಯ ಉತ್ತಮವಾಗಿದೆ. ನೆಟ್‌ವರ್ಕ್ ಬಗ್ಗೆ ಗಮನ ಹರಿಸಬೇಕು. ವ್ಯಾಪಾರವನ್ನು ವಿಸ್ತರಿಸಲು ಜಾಹೀರಾತು ಸಹ ಅಗತ್ಯ.  ನಿಮ್ಮ ಗಳಿಕೆಯ ಸ್ವಲ್ಪ ಭಾಗವನ್ನು  ಜಾಹಿರಾತಿಗಾಗಿ ಮೀಸಲಿಡಿ.  ಅಗತ್ಯವಿದ್ದರೆ, ವ್ಯಾಪಾರ ಪ್ರವಾಸವನ್ನು ಸಹ ಮಾಡಿ. ಕಷ್ಟಪಟ್ಟು ಕೆಲಸ ಮಾಡಿದರೆ ಶ್ರಮದ ಫಲವನ್ನು ಶನಿದೇವರು ನೀಡುತ್ತಾರೆ. ಆದರೆ ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸಿದರೆ ಒಳ್ಳೆಯದಲ್ಲ, ವ್ಯವಹಾರದ ಮೇಲೆ ನಿಮ್ಮ ಗಮನವನ್ನು ಇರಿಸಿ.

ಇದನ್ನೂ ಓದಿ : ಗುರು ಪೂರ್ಣಿಮೆಯ ದಿನ ನಿಮ್ಮ ರಾಶಿಗನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿದರೆ ಸಂಪತ್ತು ವೃದ್ಧಿ

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3COfPCC 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News