Shani Vakri: ಶನಿವಾರದಂದೇ ಶನಿಯ ಹಿಮ್ಮುಖ ಚಲನೆ ಆರಂಭ- ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ

Shani Vakri: ಇಂದು ಶನಿವಾರ. ಈ ಶನಿವಾರವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳ ಮುಖ್ಯವಾದ ದಿನ. ಏಕೆಂದರೆ ಇಂದು ನ್ಯಾಯದ ದೇವರು ಎಂದು ಪರಿಗಣಿಸಲ್ಪಡುವ ಶನಿ ದೇವನ ಹಿಮ್ಮುಖ ಚಲನೆ ಆರಂಭವಾಗಲಿದೆ. ಶನಿವಾರದಂದೇ ಶನಿ ದೇವನ ಹಿಮ್ಮುಖ ಚಲನೆ ಆರಂಭವಾಗುತ್ತಿರುವುದು ಕೆಲವು ರಾಶಿಯವರ ದೃಷ್ಟಿಯಿಂದ ಅಷ್ಟು ಶುಭಕರ ಎಂದು ಪರಿಗಣಿಸಲಾಗುವುದಿಲ್ಲ. 

Written by - Yashaswini V | Last Updated : Jun 17, 2023, 10:21 AM IST
  • ಇಂದು ಶನಿವಾರ 17 ಜೂನ್ 2023ರಂದು ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ.
  • ಶನಿ ದೇವನು 4 ನವೆಂಬರ್ 2023 ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ.
  • ಈ ದಿನ ಆರಂಭವಾಗಲಿರುವ ಶನಿಯ ವಕ್ರ ನಡೆಯು ಎಲ್ಲಾ ರಾಶಿಯವರ ಮೇಲೂ ಗಮನಾರ್ಹ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಮೂರು ರಾಶಿಯವರ ದೃಷ್ಟಿಯಿಂದ ಅತ್ಯಂತ ಅಶುಭಕರ ಸಮಯ ಎಂದು ಹೇಳಲಾಗುತ್ತಿದೆ.
Shani Vakri: ಶನಿವಾರದಂದೇ ಶನಿಯ ಹಿಮ್ಮುಖ ಚಲನೆ ಆರಂಭ- ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ  title=

Shani Vakri Effect: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಶನಿ ಗ್ರಹವನ್ನು ನ್ಯಾಯದ ದೇವರು, ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿ ವಾರವೂ ಒಂದೊಂದು ದೇವ-ದೇವತೆಗಳಿಗೆ ಮೀಸಲಿದ್ದು, ಶನಿದೇವರಿಗೆ ಶನಿವಾರವನ್ನು ಮೀಸಲಿಡಲಾಗಿದೆ. ಹಾಗಾಗಿಯೇ, ಶನಿ ಮಹಾತ್ಮನನ್ನು ಮೆಚ್ಚಿಸಲು ಶನಿವಾರವನ್ನು ಬಹಳ ವಿಶೇಷ ಎಂದು ಪರಿಗಣಿಸಲಾಗುತ್ತದೆ. 

ಇಂದು ಶನಿವಾರ 17 ಜೂನ್ 2023ರಂದು ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶನಿ ದೇವನು  4 ನವೆಂಬರ್ 2023 ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಈ ದಿನ ಆರಂಭವಾಗಲಿರುವ ಶನಿಯ ವಕ್ರ ನಡೆಯು ಎಲ್ಲಾ ರಾಶಿಯವರ ಮೇಲೂ ಗಮನಾರ್ಹ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಮೂರು ರಾಶಿಯವರ ದೃಷ್ಟಿಯಿಂದ ಅತ್ಯಂತ ಅಶುಭಕರ ಸಮಯ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಶನಿಯು ಈ ಮೂರು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Guru Chandal Rajyoga: ಅಕ್ಟೋಬರ್ 30ರವರೆಗೆ ಈ ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ

ಈ 3 ರಾಶಿಯವರ ಜೀವನದಲ್ಲಿ ವಿನಾಶವನ್ನೇ ಸೃಷ್ಟಿಸಲಿದ್ದಾನೆ ವಕ್ರೀ ಶನಿ : 
ಸಿಂಹ ರಾಶಿ: 

17 ಜೂನ್ 2023ರಿಂದ  4 ನವೆಂಬರ್ 2023 ರವರೆಗೆ ಹಿಮ್ಮುಖವಾಗಿ ಚಲಿಸಲಿರುವ ಶನಿಯು ಸಿಂಹ ರಾಶಿಯವರ ಮಾನಸಿಕ ಒತ್ತಡವನ್ನು ಹೆಚ್ಚಿಸಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಹಣ ಬೇರೆಡೆ ಸಿಲುಕೂವ ಸಾಧ್ಯತೆ ಇದೆ. ಮಾತ್ರವಲ್ಲದೆ, ಈ ವೇಳೆ ನೀವು ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಬಹಳ ಎಚ್ಚರಿಕೆಯಿಂದ ಯೋಚಿಸಿ ನಿರ್ಧರಿಸಿ. ಇಲ್ಲದಿದರೆ, ಸಮಸ್ಯೆಗಳು ಉಲ್ಬಣಗೊಳ್ಳಬಹುದು. 

ವೃಶ್ಚಿಕ ರಾಶಿ: 
ಈಗಾಗಲೇ ಶನಿ ಧೈಯಾ ಪ್ರಭಾವವನ್ನು ಎದುರಿಸುತ್ತಿರುವ ವೃಶ್ಚಿಕ ರಾಶಿಯವರಿಗೆ ಶನಿ ಹಿಮ್ಮುಖ ಚಲನೆಯು ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ಸಮ್ಯದ್ಲಲಿ ನೀವು ಉದ್ಯೋಗ-ವ್ಯವಹಾರದಲ್ಲಿ ನಾನಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗಬಹುದು. ಮಾತ್ರವಲ್ಲ, ಹೊಸ ವ್ಯವಹಾರಗಳಲ್ಲಿ ನಷ್ಟವನ್ನು ಭರಿಸಬೇಕಾಗಬಹುದು. ಹಣದ ಖರ್ಚು ಹೆಚ್ಚಾಗಲಿದೆ. 

ಇದನ್ನೂ ಓದಿ- ಮುಂದಿನ 49 ದಿನಗಳಲ್ಲಿ ಬೆಳಗುವುದು ಈ ರಾಶಿಯವರ ಅದೃಷ್ಟ! ಲಕ್ಷ್ಮೀ ಕೃಪೆಯಿಂದ ಗೌರವ-ಖ್ಯಾತಿ ಹೆಚ್ಚಲಿದೆ…

ಮೀನ ರಾಶಿ:
ಶನಿಯ ಹಿಮ್ಮುಖ ಚಲನೆಯು ಮೀನ ರಾಶಿಯವರಿಗೂ ಕೂಡ ಅಷ್ಟು ಶುಭಕರವಾಗಿಲ್ಲ. ನೀವು ನಿಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲವೇ, ನಿಮ್ಮ ಮಾತುಗಳು ಸಮಸ್ಯೆಗಳನ್ನು ಉಲ್ಬಣಿಸಬಹುದು. ಹಣಕಾಸಿನ ವಿಷಯದಲ್ಲೂ ಎಚ್ಚರಿಕೆಯಿಂದ ಇರುವುದು ಬಹಳ ಅಗತ್ಯ. ಸಾಂಸಾರಿಕ ಜೀವನದಲ್ಲೂ ಬಿರುಕು ಮೂಡುವ ಸಂಭವವಿರುವುದರಿಂದ ಯಾವುದೇ ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಡದಿದ್ದರೆ ಒಳಿತು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News