ದಿನಭವಿಷ್ಯ 06-07-2022: ಈ ರಾಶಿಯವರಿಗೆ ಮನರಂಜನೆಗಾಗಿ ಹಣ ವ್ಯಯವಾಗಲಿದೆ

Horoscope  06 July 2022:  ಬುಧವಾರದಂದು ದ್ವಾದಶ ರಾಶಿಗಳ ಮೇಲೆ ಗ್ರಹಗಳ ಚಲನೆಯ ಪರಿಣಾಮ ಏನಿರಲಿದೆ ತಿಳಿಯಿರಿ.

Written by - Yashaswini V | Last Updated : Jul 6, 2022, 06:11 AM IST
  • ವೃಷಭ ರಾಶಿಯವರಿಗೆ ಹಳೆಯ ಸ್ನೇಹಿತರನ್ನು ಭೇಟಿಯಾಗುವುದು ಮನಕ್ಕೆ ಮುದ ನೀಡಲಿದೆ.
  • ಸಿಂಹ ರಾಶಿಯವರು ಸೋಮಾರಿತನವನ್ನು ಬಿಟ್ಟು ಮುನ್ನಡೆಯಿರಿ.
  • ಮಕರ ರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚಿರಬಹುದು
ದಿನಭವಿಷ್ಯ 06-07-2022:  ಈ ರಾಶಿಯವರಿಗೆ ಮನರಂಜನೆಗಾಗಿ ಹಣ ವ್ಯಯವಾಗಲಿದೆ title=
Todays astrology july 6 2022

ದಿನಭವಿಷ್ಯ 06-07-2022 :    ಇಂದು ಗ್ರಹಗಳು, ನಕ್ಷತ್ರಗಳ ಚಲನೆಯಿಂದ ಯಾವ ರಾಶಿಯವರಿಗೆ ಏನು ಪರಿಣಾಮ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದಿನ ದಿನ ಹೇಗಿದೆ ತಿಳಿಯಿರಿ. 

ಮೇಷ ರಾಶಿ- ಈ ರಾಶಿಯವರು ಇಂದು ಆರ್ಥಿಕವಾಗಿ ಬಲಗೊಳ್ಳುವರು. ಹಿರಿಯರನ್ನು ಗೌರವಿಸುವುದು ಶ್ರೇಯಸ್ಕರ.

ವೃಷಭ ರಾಶಿ- ಇಂದು ನಿಮಗೆ ಕಾರ್ಯನಿರತ ದಿನ. ಆರ್ಥಿಕವಾಗಿ ಹಠಾತ್ ಧನಾಗಮನ ಸಾಧ್ಯತೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವುದು ಮನಕ್ಕೆ ಮುದ ನೀಡಲಿದೆ.

ಮಿಥುನ ರಾಶಿ- ಈ ರಾಶಿಯವರಿಗೆ ಇಂದು ಸಾಮಾನ್ಯ ದಿನ. ನಿಮ್ಮ ಸಹೋದ್ಯೋಗಿಗಳೊಂದಿಗೆ ವಾಗ್ವಾದ-ಜಗಳ ಮಾಡುವುದನ್ನು ತಪ್ಪಿಸಿ.

ಕರ್ಕಾಟಕ ರಾಶಿ- ಈ ರಾಶಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ. ಆರೋಗ್ಯದ ಬಗ್ಗೆ ನಿಗಾವಹಿಸಿ. ಇಂದು ಕೌಟುಂಬಿಕ ಸಂತಸ ಅನುಭವಿಸುವಿರಿ. 

ಇದನ್ನೂ ಓದಿ- 30 ವರ್ಷಗಳ ಬಳಿಕ ತನ್ನ ಮೂಲ ತ್ರಿಕೋನ ರಾಶಿಯಲ್ಲಿ ಈ ಗ್ರಹ, ವಿಶೇಷ ಕಾಕತಾಳೀಯದಿಂದ ಈ ಜನರ ಕನಸು ನನಸು

ಸಿಂಹ ರಾಶಿ- ಈ ರಾಶಿಯವರು ನಿಮ್ಮ ಸೋಮಾರಿತನವನ್ನು ಬಿಟ್ಟು ಮುನ್ನಡೆಯಿರಿ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದಾಗ ಮಾತ್ರವೇ ಅದರ ಪೂರ್ಣ ಫಲ ದೊರೆಯುತ್ತದೆ ಎಂಬುದನ್ನು ನೆನಪಿಡಿ.

ಕನ್ಯಾ ರಾಶಿ- ಕನ್ಯಾ ರಾಶಿಯ ಜನರು ಇಂದು ಉದ್ಯೋಗದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. ಹೊಸ ವಾಹನ, ಮನೆ ಖರೀದಿಸುವ ಯೋಗವಿದೆ. 

ತುಲಾ ರಾಶಿ- ನಿಮ್ಮ ಮನಸ್ಸನ್ನು ಉದ್ವೇಗಕ್ಕೆ ಒಳಗಾಗಲು ಬಿಡಬೇಡಿ. ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿ ಕೊಡುವುದನ್ನು ತಪ್ಪಿಸಿ. ಹೊರಗಿನವರನ್ನು ಸುಮ್ಮನೆ ನಂಬಬೇಡಿ. 

ವೃಶ್ಚಿಕ ರಾಶಿ- ವೃಶ್ಚಿಕ ರಾಶಿಯ ಜನರು ಮನರಂಜನೆಗಾಗಿ ಹಣವನ್ನು ವ್ಯಯಿಸುತ್ತಾರೆ. ಬಯಸಿದ ಉದ್ಯೋಗದಲ್ಲಿ ನೀವು ಬಯಸಿದ ಸ್ಥಾನ ಪ್ರಾಪ್ತಿಯಾಗಲಿದೆ. ಕುಟುಂಬದೊಂದಿಗೆ ವಿಹಾರಕ್ಕೆ ತೆರಳುವ ಸಾಧ್ಯತೆಯೂ ಇದೆ.

ಇದನ್ನೂ ಓದಿ- Shravan Maas 2022: ಮನೆಯ ಮೇಲೆ ಶಿವನ ಕೃಪಾ ಕಟಾಕ್ಷಕ್ಕೆ ಶ್ರಾವಣ ಮಾಸದಲ್ಲಿ ತುಳಸಿಯ ಜೊತೆಗೆ ಈ ಸಸ್ಯಗಳನ್ನು ನೆಡಿ

ಧನಸ್ಸು ರಾಶಿ- ಈ ರಾಶಿಯವರ ಜಡ ಮನಸ್ಥಿತಿಯಿಂದ ಹೊರಬಂದು ಏನಾದರೂ ಕೆಲಸ ಮಾಡಿದರಷ್ಟೇ ನಿಮ್ಮ ಸಮಸ್ಯೆಗಳಿಂದ ಹೊರಬರಲು ಇರುವ ದಾರಿ ಎಂಬುದನ್ನು ಅರಿತುಕೊಳ್ಳಿ.

ಮಕರ ರಾಶಿ- ಕೆಲಸದ ಒತ್ತಡ ಹೆಚ್ಚಿರಬಹುದು. ಇಂದು ಯಾವ ಕೆಲಸವನ್ನು ಮೊದಲು ಪೂರ್ಣಗೊಳಿಸಬೇಕು ಎಂಬ ಪ್ರಾಮುಖ್ಯತೆಯ ಆಧಾರದ ಮೇಲೆ ಕೆಲಸಗಳನ್ನು ಪೂರ್ಣಗೊಳಿಸಿ.

ಕುಂಭ ರಾಶಿ- ಈ ರಾಶಿಯವರಿಗೆ ಇಂದು ಉದ್ಯೋಗ ಬದಲಾವಣೆ ಯೋಗವಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧಿತ ವಿಷಯಗಳಲ್ಲಿ ಕೊಂಚ ಏರು-ಪೇರಾಗುವ ಸಾಧ್ಯತೆ ಇದೆ.

ಮೀನ ರಾಶಿ- ಈ ರಾಶಿಯವರಿಗೆ ಇಂದು ಆದಾಯಕ್ಕಿಂತ ವ್ಯಯವೇ ಹೆಚ್ಚಾಗಬಹುದು. ಸಣ್ಣ ಪುಟ್ಟ ವಿಷಯಗಳಿಗೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ಕೊಡದಿದ್ದರೆ ಒಳಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News