ದಿನಭವಿಷ್ಯ 04-07-2022: ಸೋಮವಾರದಂದು ಈ ರಾಶಿಯವರಿಗೆ ಪ್ರತಿಕೂಲವಾಗಿರುತ್ತದೆ

Horoscope  04 July 2022:  ಸಿಂಹ ರಾಶಿಯವರು ತಮ್ಮ ಕೌಶಲ್ಯಗಳನ್ನು ಅಭಿವೃದ್ದಿಪಡಿಸುವತ್ತ ಗಮನಹರಿಸಿ. ವೃಶ್ಚಿಕ ರಾಶಿಯವರಿಗೆ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಉಳಿದ ರಾಶಿ ಚಕ್ರಗಳ ಇಂದಿನ ದಿನ ಹೇಗಿದೆ ತಿಳಿಯಿರಿ.

Written by - Yashaswini V | Last Updated : Jul 4, 2022, 06:19 AM IST
  • ಕನ್ಯಾ ರಾಶಿಯ ಉದ್ಯೋಗಸ್ಥರಿಗೆ ಅದರಲ್ಲೂ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ
  • ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಶುಭ ದಿನ
  • ವೃಶ್ಚಿಕ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಅನುಕೂಲಕರ ದಿನ
ದಿನಭವಿಷ್ಯ 04-07-2022: ಸೋಮವಾರದಂದು ಈ ರಾಶಿಯವರಿಗೆ ಪ್ರತಿಕೂಲವಾಗಿರುತ್ತದೆ title=
Todays astrology july 4 2022

ದಿನಭವಿಷ್ಯ 04-07-2022 :   ಈ ದಿನ ಮೇಷ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ವೃಷಭ ರಾಶಿಯವರಿಗೆ ಹಿರಿಯರ ಬೆಂಬಲ ಸಿಗುತ್ತದೆ. ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಇಂದಿನ ನಿಮ್ಮ ದಿನ ಹೇಗಿದೆ ತಿಳಿಯಿರಿ...

ಮೇಷ ರಾಶಿ:
ಇಂದು ಮೇಷ ರಾಶಿಯವರು ನಿಮ್ಮ ಸಂಬಂಧಗಳ ವಿಷಯದಲ್ಲಿ ನಿಷ್ಠೆಯಿಂದ ಇರಿ ಇದರಿಂದ ಉತ್ತಮ ಫಲ ದೊರೆಯುತ್ತದೆ. ಇದಲ್ಲದೆ, ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಕೈ ಬಿಡಬೇಡಿ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು. 

ವೃಷಭ ರಾಶಿ:
ಈ ರಾಶಿಯವರಿಗೆ ಇಂದು ಗುಡ್ ನ್ಯೂಸ್ ದೊರೆಯಲಿದೆ. ನಿಮಗೆ ಹಿರಿಯರ ಆಶೀರ್ವಾದವೂ ಇರಲಿದೆ.  ಯಾವುದೇ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಭಾವನಾತ್ಮಕವಾಗಿ ಇರುವುದಕ್ಕಿಂತ ಯೋಚಿಸಿ ಸರಿ-ತಪ್ಪುಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುವುದು ಒಳ್ಳೆಯದು.

ಮಿಥುನ ರಾಶಿ: 
ಹೊಸ ಉದ್ಯೋಗ ಹುಡುಕುತ್ತಿರುವ ಈ ರಾಶಿಯ ಜನರಿಗೆ ಇಂದು ಒಳ್ಳೆಯ ದಿನ. ಉನ್ನತ ಶಿಕ್ಷಣದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಸಾಧಿಸುವಿರಿ. ಆಡಳಿತಾತ್ಮಕ ಸೇವೆಗಳೊಂದಿಗೆ ಸಂಬಂಧ ಹೊಂದಿರುವ ಜನರು ಬಡ್ತಿ ಪಡೆಯಬಹುದು. 

ಕರ್ಕಾಟಕ ರಾಶಿ:
ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗ ಸ್ಥಳದಲ್ಲಿ ಹೊಸ ಸ್ನೇಹಿತರು ಸಿಗಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ದಿನ.

ಇದನ್ನೂ ಓದಿ- Surya Gochar 2022: ಜುಲೈನಲ್ಲಿ ಸೂರ್ಯನು ಈ 3 ರಾಶಿಯವರ ಅದೃಷ್ಟವನ್ನು ಬೆಳಗುತ್ತಾನೆ

ಸಿಂಹ ರಾಶಿ:
ಸಿಂಹ ರಾಶಿಯವರು ತಮ್ಮ ಕೌಶಲ್ಯಗಳನ್ನು ಅಭಿವೃದ್ದಿಪಡಿಸುವತ್ತ ಗಮನಹರಿಸಿ.  ಇದರಿಂದ ಮುಂದಿನ ದಿನಗಳಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರಿಗೆ ಇಂದು ದೊಡ್ಡ ಆರ್ಡರ್ ಸಿಗಬಹುದು.

ಕನ್ಯಾ ರಾಶಿ: 
ಉದ್ಯೋಗಸ್ಥರಿಗೆ ಅದರಲ್ಲೂ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಕೆಲಸದಲ್ಲಿ ಇಷ್ಟು ದಿನಗಳು ಕಾಡುತ್ತಿದ್ದ ಅಡೆತಡೆಗಳು ದೂರವಾಗುತ್ತವೆ. ನಿಗಾವಹಿಸಿ ಕೆಲಸ ಮಾಡಿದರೆ ಯಶಸ್ಸು ಪ್ರಾಪ್ತಿಯಾಗಲಿದೆ.

ತುಲಾ ರಾಶಿ: 
ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಶುಭ ದಿನ. ನಿಮ್ಮ ಕಠಿಣ ಪರಿಶ್ರಮಕ್ಕೆ ಇಂದು ತಕ್ಕ ಫಲ ದೊರೆಯುತ್ತದೆ. ಈ ರಾಶಿಯವರಿಗೆ ಇಂದು ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ.

ವೃಶ್ಚಿಕ ರಾಶಿ: 
ನಿಮ್ಮ ಕರ್ತವ್ಯ ನಿಷ್ಠೆಯೇ ನಿಮ್ಮ ಗುರುತು. ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಅನುಕೂಲಕರ ದಿನ. ಸಮಾಜದಲ್ಲಿ ನಿಮ್ಮ ಗೌರವ-ಖ್ಯಾತಿ ಹೆಚ್ಚುತ್ತದೆ. ವೈವಾಹಿಕ ಜೀವನವೂ ಆನಂದದಾಯಕವಾಗಿರುತ್ತದೆ.

ಇದನ್ನೂ ಓದಿ- Shani Dev: ಶನಿ ಮಹಾರಾಜನ ನೆಚ್ಚಿನ ರಾಶಿ ಯಾವುದು ಗೊತ್ತಾ? ಈ ರಾಶಿಗಳ ಜನರಿಗೆ ಶನಿ ಸತಾಯಿಸುವುದಿಲ್ಲ

ಧನು ರಾಶಿ:
ಧನು ರಾಶಿಯವರಿಗೆ ಇಂದು ಪ್ರತಿಕೂಲ ದಿನವಾಗಿರುತ್ತದೆ. ಆದಾಗ್ಯೂ, ನೀವು ನಿಮ್ಮ ಸಿಟ್ಟು-ಬೇಸರವನ್ನು ಇತರರ ಮೇಲೆ ತೋರುವುದನ್ನು ತಪ್ಪಿಸಿ. ನಿಮ್ಮ ಜೀವನ ಸಂಗಾತಿ ಬಗ್ಗೆ ಕಾಳಜಿ ವಹಿಸಿ. 

ಮಕರ ರಾಶಿ:
ಮಕರ ರಾಶಿಯವರಿಗೆ ನಿಮ್ಮ ಕೆಲಸಗಳು ಯಾವುದೇ ತೊಂದರೆ ಇಲ್ಲದೆ ಪೂರ್ಣಗೊಳ್ಳುತ್ತವೆ. ನಿಮ್ಮ ಕುಟುಂಬದವರು ಇದರಲ್ಲಿ ಬಹು ದೊಡ್ಡ ಪಾತ್ರ ವಹಿಸುತ್ತಾರೆ. ಅವರೊಂದಿಗೆ ವಿನಮ್ರತೆಯಿಂದ ನಡೆದುಕೊಳ್ಳಿ.

ಕುಂಭ ರಾಶಿ:
ಈ ರಾಶಿಯವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸಿ. ಫಾರ್ಮಸಿ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಇಂದು ಒಳ್ಳೆಯ ಆದಾಯ ಸಿಗುವ ಸಾಧ್ಯತೆ ಇದೆ.

ಮೀನ ರಾಶಿ: 
ಬದಲಾವಣೆ ಜಗತ್ತಿನ ನಿಯಮ. ಬದಲಾಗುತ್ತಿರುವ ಜಗತ್ತಿನೊಂದಿಗೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿ. ಆಗಷ್ಟೇ ನೀವು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News