ದಿನಭವಿಷ್ಯ 20-12-2023: ಈ ರಾಶಿಯವರು ಇಂದು ಅನುಚಿತ ವರ್ತನೆಗೆ ಕಡಿವಾಣ ಹಾಕಿದರೆ ಒಳಿತು

Today Horoscope 20th December 2023: ಬುಧವಾರದ ಈ ದಿನ ಹನುಮಂತ ಯಾರ ಮೇಲೆ ಕೃಪೆ ತೋರಲಿದ್ದಾನೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Dec 20, 2023, 06:57 AM IST
  • ಸಿಂಹ ರಾಶಿಯವರು ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡುವುದನ್ನು ಪರಿಗಣಿಸಿ.
  • ತುಲಾ ರಾಶಿಯವರು ಇತರರಿಂದ ದೃಢೀಕರಣವನ್ನು ಬಯಸುವುದಕ್ಕಿಂತ ನೀವು ನೀವಾಗಿರಲು ಪ್ರಯತ್ನಿಸಿ.
  • ಧನು ರಾಶಿಯವರಿಗೆ ದಿನವು ಆಯಾಸಭರಿತ ಎಂದೆನಿಸಿದರೂ ಸಹ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ನಿಶ್ಚಿತ.
ದಿನಭವಿಷ್ಯ 20-12-2023:  ಈ ರಾಶಿಯವರು ಇಂದು  ಅನುಚಿತ ವರ್ತನೆಗೆ ಕಡಿವಾಣ ಹಾಕಿದರೆ ಒಳಿತು title=

ದಿನಭವಿಷ್ಯ :  20 ಡಿಸೆಂಬರ್ 2023ರ ಬುಧವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಜನರ ದಿನ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿ:  
ಮೇಷ ರಾಶಿಯವರಿಗೆ ಇಂದು ಒಂಟಿತನದ ಛಾಯೆ ನಿಮ್ಮನ್ನು ಬಾಧಿಸಬಹುದು. ಇದನ್ನು ತಪ್ಪಿಸಲು ಟಿವಿ ನೋಡುವುದು, ಪುಸ್ತಕ ಓದುವುದನ್ನು ಪರಿಗಣಿಸಿ. ಹೆಚ್ಚು ಪ್ರಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಸುಧಾರಿಸಲು ಪ್ರಯತ್ನಿಸಿ. 

ವೃಷಭ ರಾಶಿ:  
ವೃಷಭ ರಾಶಿಯವರೇ ಯಾವುದೇ ವಿಚಾರದಲ್ಲಿ ಕುತೂಹಲ ಹೊಂದಿರುವುದು ಒಳ್ಳೆಯದೇ ಆದರೂ, ನಿಮ್ಮ ಪ್ರತಿಕ್ರಿಯೆಗಳ ಬಗ್ಗೆ ಜಾಗರೂಕರಾಗಿರಿ. ಸುಖಾ-ಸುಮ್ಮನೆ ಎಲ್ಲೆಡೆ ಮೂಗು ತೂರಿಸುವುದನ್ನು ಬಿಟ್ಟರೆ ಒಳಿತು. ಇಂದು ನೀವು ಉತ್ತಮ ಆರೋಗ್ಯವನ್ನು ಆನಂದಿಸಬಹುದು. 

ಮಿಥುನ ರಾಶಿ:   
ಮಿಥುನ ರಾಶಿಯವರು ಎಲ್ಲೆಡೆ ನಿಮ್ಮ ತುಂಟುತನವನ್ನು ತಪ್ಪಿಸಿ. ಔಪಚಾರಿಕ ಸಭೆಗಳಲ್ಲಿ ಅನುಚಿತ ವರ್ತನೆಗೆ ಕಡಿವಾಣ ಹಾಕಿದರೆ ಒಳಿತು. ನಿಮ್ಮ ಅಂತರಂಗವನ್ನು ಪೋಷಿಸಲು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಇಂದು ವೈಚಾರಿಕತೆ ಮತ್ತು ಪ್ರವೃತ್ತಿಗಳ ನಡುವೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಸವಾಲುಗಳಿರುವುದು ಹೆದರಿಸಲಿಕ್ಕೆ ಅಲ್ಲ, ಇದು ನಿಮ್ಮ ಒಳಗಿನ ಸಾಮರ್ಥ್ಯವನ್ನು ಹೊರತರುವ ಕೀಲಿ ಎಂಬುದನ್ನೂ ನೆನೆಪಿಡಿ. 

ಇದನ್ನೂ ಓದಿ- Shukra Gochar 2023: ಐದು ದಿನಗಳ ಬಳಿಕ ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರ, 4 ರಾಶಿಯವರಿಗೆ ಧನ-ಸಂಪತ್ತು

ಸಿಂಹ ರಾಶಿ:   
ಸಿಂಹ ರಾಶಿಯವರು ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡುವುದನ್ನು ಪರಿಗಣಿಸಿ. ಖಂಡಿತ ಜಯ ನಿಮ್ಮದೇ ಆಗಿರಲಿದೆ. ನೀವು ಪಾರ್ಟಿಯನ್ನು ಆಯೋಜಿಸಲು ಯೋಚಿಸುತ್ತಿದ್ದರೆ, ಇಂದು ಆ ಬಗ್ಗೆ ಚಿಂತಿಸಬಹುದು. ಆರೋಗ್ಯವು ಸುಧಾರಿಸಲಿದೆ. 

ಕನ್ಯಾ ರಾಶಿ: 
ಕನ್ಯಾ ರಾಶಿಯವರು ಜೀವನದಲ್ಲಿ ಬರುವ ಬದಲಾವಣೆಗಳನ್ನು ಸಕಾರಾತ್ಮಕ ಮನೋಭಾವದಿಂದ ಸ್ವೀಕರಿಸಿ ಮುಂದುವರೆದರೆ ಎಲ್ಲವೂ ಒಳ್ಳೆಯದೇ ಆಗಲಿದೆ. ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಿ. 

ತುಲಾ ರಾಶಿ:  
ತುಲಾ ರಾಶಿಯವರು ನಿಮ್ಮ ಉತ್ಸಾಹವನ್ನು ಒಳ್ಳೆಯ ಕೆಲಸಗಳಿಗಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ತಿಳುವಳಿಕೆಯ ಸ್ವಭಾವದ ಹೊರತಾಗಿಯೂ, ಪ್ರತಿಯೊಬ್ಬರೂ ಅದನ್ನು ಮೆಚ್ಚುವುದಿಲ್ಲ. ಇತರರಿಂದ ದೃಢೀಕರಣವನ್ನು ಬಯಸುವುದಕ್ಕಿಂತ ನೀವು ನೀವಾಗಿರಲು ಪ್ರಯತ್ನಿಸಿ. 

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರಿಗೆ ನಿಮ್ಮ ಉತ್ಸಾಹಭರಿತ ಸ್ವಭಾವವು ನಿಮ್ಮ ಉದ್ಯಮಕ್ಕೆ ಗಮನಾರ್ಹ ಲಾಭವನ್ನು ನೀಡುತ್ತದೆ. ಅದೃಷ್ಟ ನಿಮ್ಮೊಂದಿಗಿದ್ದು ಸಕಾರಾತ್ಮಕವಾಗಿ ಮುಂದುವರೆಯಿರಿ. ಹಳೆಯ ಸ್ನೇಹಿತನೊಂದಿಗೆ ಮರುಸಂಪರ್ಕಿಸುವಾಗ ನಿಮ್ಮ ಸಂವಹನವು ಸಕಾರಾತ್ಮಕವಾಗಿರಲಿ. 

ಇದನ್ನೂ ಓದಿ- 30 ವರ್ಷಗಳ ನಂತರ ಶನಿ-ಶುಕ್ರ ಸಂಯೋಗ! ಶರ ವೇಗದಲ್ಲಿ ಹೆಚ್ಚುವುದು ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ! 

ಧನು ರಾಶಿ:  
ಧನು ರಾಶಿಯವರಿಗೆ ದಿನವು ಆಯಾಸಭರಿತ ಎಂದೆನಿಸಿದರೂ ಸಹ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ನಿಶ್ಚಿತ. ಇದಕ್ಕಾಗಿ, ನಿಮ್ಮ ಕಠಿಣ ಪರಿಶ್ರಮವನ್ನು ಮುಂದುವರಿಸಿ. ಮಾನಸಿಕ ಸ್ಥಿರತೆಗಾಗಿ ಧ್ಯಾನ ಅಭ್ಯಾಸ ಮಾಡುವುದು ಒಳ್ಳೆಯದು. 

ಮಕರ ರಾಶಿ:  
ಮಕರ ರಾಶಿಯವರೇ ಬೇರೆಯವರನ್ನು ಕಣ್ಣು ಮುಚ್ಚಿ ನಂಬುವ ನಿಮ್ಮ ಸ್ವಭಾವವೂ ನಿಮಗೆ ಮುಳುವಾಗಬಹುದು. ನಿಮ್ಮ ಒತ್ತಡ ವೇಳಾಪಟ್ಟಿಯ ನಡುವೆಯೂ ನಿಮ್ಮ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುವುದನ್ನು ಪರಿಗಣಿಸಿ. 

ಕುಂಭ ರಾಶಿ:  
ಕುಂಭ ರಾಶಿಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಾಣುವಿರಿ.  ಉದ್ಯೋಗಸ್ಥರಿಗೆ ಇದು ಉತ್ತಮ ದಿನ. ಆದಾಗ್ಯೂ, ನಿಮ್ಮ ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಿ. 

ಮೀನ ರಾಶಿ:  
ಮೀನ ರಾಶಿಯವರು ಇಂದು ಕೆಲಸದ ಬಗ್ಗೆ ಹೆಚ್ಚು ಗಮನವಹಿಸಬೇಕಾಗಬಹುದು. ಇದು ನಿಮ್ಮ ಸಂಗಾತಿಯ ಮುನಿಸಿಗೂ ಕಾರಣವಾಗಬಹುದು. ಆದರೆ, ಕೆಲಸ ಮೊದಲು ಮುಖ್ಯ ಎಂಬುದನ್ನು ನಿಮ್ಮ ಸಂಗಾತಿಗೆ ನೀವು ಮನವರಿಕೆ ಮಾಡಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News