ದಿನಭವಿಷ್ಯ 26-12-2023: ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ದಿನ

Today Horoscope 26th December 2023: ಮಂಗಳವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Dec 26, 2023, 08:04 AM IST
  • ಕರ್ಕಾಟಕ ರಾಶಿಯವರು ಇಂದು ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು.
  • ವೃಶ್ಚಿಕ ರಾಶಿಯವರು ಇಂದು ಮಕ್ಕಳ ಮೇಲೆ ವಾತ್ಸಲ್ಯವನ್ನು ಧಾರೆಯೆರೆಯಿರಿ.
  • ಮಕರ ರಾಶಿಯವರಿಗೆ ಇಂದು ಅವಕಾಶಗಳಿಂದ ತುಂಬಿದ ದಿನ.
ದಿನಭವಿಷ್ಯ 26-12-2023:  ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ದಿನ title=

ದಿನಭವಿಷ್ಯ :  26ನೇ ಡಿಸೆಂಬರ್ 2023ರ ಮಂಗಳವಾರದಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ. ಇಂದು ಯಾವ ರಾಶಿಯವರಿಗೆ ಮಂಗಳಕರವಾಗಿರಲಿದೆ. ಯಾರಿಗೆ ಅಶುಭ ಫಲಗಳನ್ನು ತರಲಿದೆ ಎಂದು ತಿಳಿಯಿರಿ. 

ಮೇಷ ರಾಶಿ:  
ಮೇಷ ರಾಶಿಯವರು ಇಂದು ನಿಮ್ಮ ಹಳೆಯ ಪರಿಚಯಸ್ಥರೊಂದಿಗೆ ಭೇಟಿಯಾಗುವಿರಿ. ನಿಮ್ಮ ಪ್ರೀತಿಯ ಜೀವನದಲ್ಲಿ ಧನಾತ್ಮಕ ಬೆಳವಣಿಗೆಗಳು ಕಂಡು ಬರಲಿವೆ. ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ  ಉತ್ತಮ ಅವಕಾಶಗಳು ಲಭ್ಯವಾಗಲಿವೆ. 

ವೃಷಭ ರಾಶಿ:  
ವೃಷಭ ರಾಶಿಯ ಉದ್ಯೋಗಿಗಳಿಗೆ ಇಂದು ಹೆಚ್ಚಿನ ಕೆಲಸದ ಹೊರೆ ಇರಬಹುದು. ಆದಾಗ್ಯೂ, ನಿಮ್ಮ ಕಠಿಣ ಪರಿಶ್ರಮ ಉತ್ತಮ ಫಲವನ್ನು ನೀಡಲಿದೆ. ನಕಾರಾತ್ಮಕತೆಯಿಂದ ದೂರವಿರಲು ಪ್ರಯತ್ನಿಸಿ. 

ಮಿಥುನ ರಾಶಿ:   
ಮಿಥುನ ರಾಶಿಯವರೇ ಇಂದು ನೀವು ಯಾವುದೇ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಅದರ ಸರಿ-ತಪ್ಪುಗಳ ಬಗ್ಗೆ ಸರಿಯಾಗಿ ಸಮಾಲೋಚಿಸಿ. ವಿದ್ಯಾರ್ಥಿಗಳು ಇಂದು ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಇಂದು ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ನಿಮ್ಮ ದಿನವನ್ನು ಸದುಪಯೋಗ ಪಡಿಸಿಕೊಳ್ಳಿ.  ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು. 

ಇದನ್ನೂ ಓದಿ- ಅತಿದೊಡ್ಡ ರಾಜಯೋಗದಿಂದ 2024ರಲ್ಲಿ ಈ ರಾಶಿಯವರಷ್ಟು ಲಕ್ಕಿ ಭೂಮಿ ಮೇಲೆ ಯಾರೂ ಇರಲ್ಲ.. ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ!

ಸಿಂಹ ರಾಶಿ:   
ಸಿಂಹ ರಾಶಿಯವರಿಗೆ ಇಂದು ಒಂದು ಸವಾಲಿನ ದಿನ. ನಿಮ್ಮ ಸುತ್ತಲಿರುವವರ ಪ್ರಚೋದನೆಗಳ ಹೊರತಾಗಿಯೂ ಶಾಂತವಾಗಿರಿ. ಆದಾಯದ ಹೆಚ್ಚಳದೊಂದಿಗೆ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ. 

ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಇಂದು ನಿಮ್ಮ ಬಹುಕಾಲದ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಆರೋಗ್ಯ ಮತ್ತು ಸಂಪತ್ತಿಗೆ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣವಾಗಲಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡರೆ ಪ್ರಗತಿ ಸಾಧ್ಯವಾಗಲಿದೆ. 

ತುಲಾ ರಾಶಿ:  
ತುಲಾ ರಾಶಿಯವರು ನಿಮಗೆ ಸಂತೋಷವನ್ನು ತರುವ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡರೆ ಸಂಕಷ್ಟ ನಿವಾರಣೆಯಾಗುತ್ತದೆ. 

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯ ವಿದ್ಯಾರ್ಥಿಗಳು ಇಂದು ವೃತ್ತಿಪರ ಬೆಳವಣಿಗೆಯ ಕಡೆ ಹೆಚ್ಚಿನ ಗಮನಹರಿಸಿ. ಕೆಲಸದ ಒತ್ತಡವನ್ನು ನಿರ್ವಹಿಸಲು ವಿಶ್ರಾಂತಿಗೆ ಪ್ರಾಮುಖ್ಯತೆ ನೀಡಿ. ಮಕ್ಕಳ ಮೇಲೆ ವಾತ್ಸಲ್ಯವನ್ನು ಧಾರೆಯೆರೆಯಿರಿ. 

ಇದನ್ನೂ ಓದಿ- Surya Grahan 2024: ಹೊಸ ವರ್ಷದಲ್ಲಿ ಮೊದಲ ಸೂರ್ಯಗ್ರಹಣ ಯಾವಾಗ? ಎಲ್ಲೆಲ್ಲಿ ಗೋಚರ

ಧನು ರಾಶಿ:  
ಹೊಸ ಯೋಜನೆಯನ್ನು ಪ್ರಾರಂಭಿಸಲು  ಯೋಚಿಸುತ್ತಿರುವ ಧನು ರಾಶಿಯ ಜನರಿಗೆ ಇಂದು ಶುಭ ದಿನ.  ಸೃಜನಶೀಲ ವೃತ್ತಿಗಳಲ್ಲಿ ಸಹೋದ್ಯೋಗಿಗಳಿಂದ ಸಂಭಾವ್ಯ ಟೀಕೆಗಳಿಗೆ ಸಿದ್ಧರಾಗಿರಿ.  

ಮಕರ ರಾಶಿ:  
ಮಕರ ರಾಶಿಯವರಿಗೆ ಇಂದು ಅವಕಾಶಗಳಿಂದ ತುಂಬಿದ ದಿನ. ಹಿಂದಿನ ಪ್ರಯತ್ನಗಳಿಗೆ ಇಂದು ಉತ್ತಮ ಪ್ರತಿಫಲ ದೊರೆಯಲಿದೆ. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವವರಿಂದ ದೂರವಿರಿ. 

ಕುಂಭ ರಾಶಿ:  
ಕುಂಭ ರಾಶಿಯವರು ಇಂದು ಇತರರಿಂದ ಸಂಭವನೀಯ ಹಾನಿಯ ಬಗ್ಗೆ ಎಚ್ಚರದಿಂದಿರಿ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

ಮೀನ ರಾಶಿ:  
ಮೀನ ರಾಶಿಯವರು ಇಂದು ಮೇಲಾಧಿಕಾರಿಗಳಿಂದ ಗುಡ್ ನ್ಯೂಸ್ ನಿರೀಕ್ಷಿಸಬಹುದು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಸಾಧ್ಯತೆಯಿದೆ.  ಮನಸ್ಸಿಗೆ ಸಂತೋಷವನ್ನು ತರುವ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News