ದಿನಭವಿಷ್ಯ 01-11-2023: ಈ ರಾಶಿಯವರಿಗೆ ಇಂದು ಅದೃಷ್ಟದ ದಿನ, ಕೆಲಸ ಕಾರ್ಯಗಳಲ್ಲಿ ಭಾರೀ ಯಶಸ್ಸು

Today Horoscope 01st November 2023: ನವೆಂಬರ್ 01ರ ಬುಧವಾರ ಕನ್ನಡ ರಾಜ್ಯೋತ್ಸವದ ಈ ದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯೋಣ.. 

Written by - Yashaswini V | Last Updated : Nov 1, 2023, 06:46 AM IST
  • ಮಿಥುನ ರಾಶಿಯವರು ಇಂದು ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಸಹಿ ಹಾಕುವ ತಪ್ಪನ್ನು ಮಾಡಬೇಡಿ.
  • ಸಿಂಹ ರಾಶಿಯ ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇಂದು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು.
  • ತುಲಾ ರಾಶಿಯವರೇ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಸದಾ ಕೆಲಸದಲ್ಲಿ ನಿರತರಾಗುವುದನ್ನು ತಪ್ಪಿಸಿ.
ದಿನಭವಿಷ್ಯ 01-11-2023:  ಈ ರಾಶಿಯವರಿಗೆ ಇಂದು ಅದೃಷ್ಟದ ದಿನ, ಕೆಲಸ ಕಾರ್ಯಗಳಲ್ಲಿ ಭಾರೀ ಯಶಸ್ಸು  title=

ದಿನಭವಿಷ್ಯ :  ಬುಧವಾರ 01 ನವೆಂಬರ್ 2023ರ ಕನ್ನಡ ರಾಜ್ಯೋತ್ಸವದಂದು  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿದೆ. ಇಂದು ಯಾರಿಗೆ ಶುಭ ಯಾರಿಗೆ ಅಶುಭ ತಿಳಿಯಿರಿ. 

ಮೇಷ ರಾಶಿ:  
ಮೇಷ ರಾಶಿಯವರೇ ನಿಮ್ಮ ನಡವಳಿಕೆ ನಿಮ್ಮ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿವೆ. ಹಾಗಾಗಿ, ಈ ಬಗ್ಗೆ ಎಚ್ಚರಿಕೆ ಅಗತ್ಯ. ಇದಲ್ಲದೆ, ಉದ್ಯೋಗ ವ್ಯವಹಾರ ಶುಭಪ್ರದವಾಗಿದ್ದು, ನಿಗದಿತ ಸಮಯದೊಳಗೆ ಕೆಲಸ ಪೂರ್ಣಗೊಳಿಸಿದರೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

ವೃಷಭ ರಾಶಿ:  
ವೃಷಭ ರಾಶಿಯವರು ಇಂದು ಯಾವುದೇ ಕೆಲಸದಲ್ಲಿ ಆತುರವನ್ನು ತಪ್ಪಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವವರು ಕಠಿಣ ಪರಿಶ್ರಮವಹಿಸಿದರೆ ಶುಭವಾಗಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆದಾಗ್ಯೂ, ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ಪರಿಗಣಿಸಿ. 

ಮಿಥುನ ರಾಶಿ:   
ಮಿಥುನ ರಾಶಿಯವರು ಇಂದು ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಸಹಿ ಹಾಕುವ ತಪ್ಪನ್ನು ಮಾಡಬೇಡಿ. ಅದರಲ್ಲೂ ನೀವು ಪಾರ್ಟ್ನರ್ ಶಿಪ್ ವ್ಯವಹಾರವನ್ನು ನಡೆಸುತ್ತಿದ್ದರೆ ತುಂಬಾ ಜಾಗರೂಕರಾಗಿರಿ. ವಿದ್ಯಾರ್ಥಿಗಳ ದೃಷ್ಟಿಯಿಂದ ಇಂದು ಅತ್ಯುತ್ತಮ ದಿನ ಎಂದು ಸಾಬೀತು ಪಡಿಸಲಿದೆ. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಇಂದು ನಿಮ್ಮ ಕೌಶಲ್ಯ, ಜ್ಞಾನವನ್ನು ಹೆಚ್ಚಿಸುವಟ್ಟ ನಿಗಾವಹಿಸಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುವರು. ಆರೋಗ್ಯ ಸಮಸ್ಯೆಗಳಿರುವವರು ನಿಮ್ಮ ಆರೋಗ್ಯದ ಬಗ್ಗೆ ಕೊಂಚವೂ ನಿರ್ಲಕ್ಷವಹಿಸಬೇಡಿ. ಸಾಧ್ಯವಾದಷ್ಟು ಹೊರಗಿನ ಆಹಾರಗಳಿಂದ ದೂರ ಉಳಿಯಿರಿ. 

ಇದನ್ನೂ ಓದಿ- Moon In Gemini: ಮಿಥುನ ರಾಶಿಗೆ ಚಂದ್ರನ ಪ್ರವೇಶ, ಇನ್ನೊಂದು ತಿಂಗಳು ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ

ಸಿಂಹ ರಾಶಿ:   
ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇಂದು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸುವರು. ನಿಮ್ಮ ವೃತ್ತಿ ಜೀವನದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಇಂದು ಅತ್ಯುತ್ತಮವಾಗಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. 

ಕನ್ಯಾ ರಾಶಿ: 
ನೀವು ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಯೋಚಿಸುತ್ತಿದ್ದರೆ ಇಂದು ಅತ್ಯುತ್ತಮ ದಿನ. ನಿಮ್ಮ ಹಳೆಯ ಸ್ನೇಹಿತರಿಂದ ಅನಿರೀಕ್ಷಿತ ಶುಭ ಸುದ್ದಿಗಳನ್ನು ಕೇಳಬಹುದು. ಆರೋಗ್ಯ, ಸಂಪತ್ತು ಎರಡೂ ನಿಮ್ಮ ಪರವಾಗಿದ್ದು ಇದನ್ನು ಉತ್ತಮವಾಗಿ ಬಳಸಿಕೊಳ್ಳಿ. 

ತುಲಾ ರಾಶಿ:  
ಕೆಲಸ ಮಾಡುವುದು ಮುಖ್ಯ. ಆದರೆ, ವೈಯಕ್ತಿಕ ಜೀವನವನ್ನು ಬದಿಗಿಟ್ಟು ಸದಾ ಕೆಲಸದಲ್ಲಿ ನಿರತರಾಗುವುದನ್ನು ತಪ್ಪಿಸಿ. ವೈಯಕ್ತಿಕ ಜೀವನವೂ ವೃತ್ತಿಪರ ಜೀವನದಷ್ಟೇ ಮುಖ್ಯ ಎಂಬುದನ್ನೂ ನೆನಪಿನಲ್ಲಿಡಿ. ಹೊಸ ಯೋಜನೆಯಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. 

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರು ಯಾವುದೇ ಎನ್‌ಜಿ‌ಓ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಕಂಪನಿಗಳೊಂದಿಗೆ ತೊಡಗಿಸಿಕೊಳ್ಳಬಹುದು. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಇಂದು ನೀವು ಅನುಭವಿಸುವಿರಿ. ಅದೃಷ್ಟವು ಇಂದು ನಿಮ್ಮ ಪರವಾಗಿದ್ದು, ಕೈಹಾಕಿದ ಕೆಲಸಗಳಲ್ಲಿ ಯಶಸ್ಸು. 

ಇದನ್ನೂ ಓದಿ- ದೀಪಾವಳಿ ದಿನದಿಂದಲೇ ಈ ರಾಶಿಯವರ ಬಾಳಲ್ಲಿ ಸಂತಸದ ಹೊನಲು ! ಸಂಪತ್ತಿನ ಹೊಳೆ ಹರಿಸಲಿದ್ದಾರೆ ಶನಿ - ಶುಕ್ರರು

ಧನು ರಾಶಿ:  
ಧನು ರಾಶಿಯವರೇ ಮೇಲೇರಿದ ಮೇಲೆ ಮೇಲೆರಲು ಸಹಾಯ ಮಾಡಿದ ಮೆಟ್ಟಿಲುಗಳನ್ನು ಮರೆಯಬೇಡಿ. ನಿಮ್ಮ ಜೀವನದ ಯಶಸ್ಸಿನಲ್ಲಿ ನಿಮ್ಮ ತಂದೆ-ತಾಯಿ ಪರಿಶ್ರಮವನ್ನು, ಅವರ ಮಾರ್ಗದರ್ಶನವನ್ನು ಎಂದಿಗೂ ಮರೆಯಬೇಡಿ. ಇದೇ ನಿಮ್ಮ ಯಶಸ್ಸಿನ ಗುಟ್ಟು. ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಪರಿಶ್ರಮದ ಅಗತ್ಯವಿದೆ.

ಮಕರ ರಾಶಿ:  
ಮಕರ ರಾಶಿಯವರೇ ನಿಮ್ಮ ಸುತ್ತಮುತ್ತಲಿನ ಜನರು ಇಂದು ನಿಮ್ಮ ಬದಲಾದ ಮನಸ್ಥಿತಿಯನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಸಂಜೆ ವೇಳೆಗೆ ನೀವು ಸಾಮಾನ್ಯ ಸ್ಥಿತಿಗೆ ಮರಳುವಿರಿ. ನಿಮ್ಮ ಒತ್ತಡವನ್ನು ನಿವಾರಿಸಲು ಕುಟುಂಬದ ಸದಸ್ಯರು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. 

ಕುಂಭ ರಾಶಿ:  
ಕುಂಭ ರಾಶಿಯವರೇ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಕೊಂಚ ಪರಿಹಾರ ಪಡೆಯಬಹುದು. ಆದರೂ, ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಪರಿಗಣಿಸಿ. 

ಮೀನ ರಾಶಿ:  
ಮೀನ ರಾಶಿಯವರೇ ನೀವು ನಿಮ್ಮ ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳಲು ಇಂದು ಅತ್ಯುತ್ತಮ ಸಮಯ. ಆದರೆ, ನಿಮ್ಮ ಆರೋಗ್ಯದ ಬಗ್ಗೆ ಹುಷಾರಾಗಿರಿ. ಹಣಕಾಸಿನ ಸ್ಥಿತಿಗಳನ್ನು ಉತ್ತಮವಾಗಿಲ್ಲದಿರಬಹುದು. ಹಾಗಾಗಿ, ನಿಮ್ಮ ಖರ್ಚುಗಳ ಬಗ್ಗೆ ನಿಗಾವಹಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News