Mars Sun Conjunction: ಒಂದು ವರ್ಷದ ಬಳಿಕ ಸೂರ್ಯ-ಮಂಗಳರ ಮೈತ್ರಿ, 3 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ!

Sun Mars Conjunction In Leo: ವೈದಿಕ ಪಚಾಂಗದ ಪ್ರಕಾರ ಸಿಂಹ ರಾಶಿಯಲ್ಲಿ ಮಂಗಳ ಹಾಗೂ ಸೂರ್ಯನ ಅದ್ಭುತ ಸಂಯೋಜನೆ ಮತ್ತೊಮ್ಮೆ ನೆರವೇರಲಿದೆ. ಸುಮಾರು ಒಂದು ವರ್ಷಗಳ ಬಳಿಕ ಈ ಮೈತ್ರಿ ನೆರವೇರಲಿದೆ. ಹೀಗಾಗಿ ಈ ಯುತಿ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,   

Written by - Nitin Tabib | Last Updated : Jul 2, 2023, 06:39 PM IST
  • ಹಾಗೆ ನೋಡಿದರೆ ಸಿಂಹ ರಾಶಿ ಸೂರ್ಯನಿಗೆ ಸ್ವರಾಶಿಯಾಗಿದೆ. ಇನ್ನೊಂದೆಡೆ ಮಂಗಳ ಈಗಾಗಲೇ ಸಿಂಹ ರಾಶಿಯಲ್ಲಿರುವ ಕಾರಣ ಸಿಂಹ ರಾಶಿಯಲ್ಲಿ ಸೂರ್ಯ ಹಾಗೂ ಮಂಗಳರ ಮೈತ್ರಿ ನೆರವೇರಲಿದೆ.
  • ಈ ಮೈತ್ರಿ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರ ಮೇಲೆ ಇದರ ಸಕಾರಾತ್ಮಕ ಪ್ರಭಾವ ಉಂಟಾಗಲಿದ್ದು,
  • ಅವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Mars Sun Conjunction: ಒಂದು ವರ್ಷದ ಬಳಿಕ ಸೂರ್ಯ-ಮಂಗಳರ ಮೈತ್ರಿ, 3 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ! title=

Surya Mangal Yuti- ವೈದಿಕ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಮೈತ್ರಿಯನ್ನು ರೂಪಿಸುತ್ತವೆ. ಈ ಮೈತ್ರಿಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳು ಹಾಗೂ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಉಂಟಾಗುತ್ತದೆ. ಬರುವ ಆಗಸ್ಟ್ 17 ರಂದು ಸೂರ್ಯ ದೇವ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಹಾಗೆ ನೋಡಿದರೆ ಸಿಂಹ ರಾಶಿ ಸೂರ್ಯನಿಗೆ ಸ್ವರಾಶಿಯಾಗಿದೆ. ಇನ್ನೊಂದೆಡೆ ಮಂಗಳ ಈಗಾಗಲೇ ಸಿಂಹ ರಾಶಿಯಲ್ಲಿರುವ ಕಾರಣ ಸಿಂಹ ರಾಶಿಯಲ್ಲಿ ಸೂರ್ಯ ಹಾಗೂ ಮಂಗಳರ ಮೈತ್ರಿ ನೆರವೇರಲಿದೆ. ಈ ಮೈತ್ರಿ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರ ಮೇಲೆ ಇದರ ಸಕಾರಾತ್ಮಕ ಪ್ರಭಾವ ಉಂಟಾಗಲಿದ್ದು ಅವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

ಮೇಷ ರಾಶಿ: ಸಿಂಹ ರಾಶಿಯಲ್ಲಿ ಮಂಗಳ ಹಾಗೂ ಸೂರ್ಯನ ಮೈತ್ರಿ ನಿಮ್ಮ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಸಂತಾನಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಜೊತೆಗೆ ಈ ಅವಧಿಯಲ್ಲಿ ಆರ್ಥಿಕವಾಗಿ ನೀವು ತುಂಬಾ ಸಮೃದ್ಧರಾಗುವಿರಿ. ನೌಕರಿಯಲ್ಲಿ ನಿಮ್ಮ ಸ್ಥಿತಿ ಬಲವಾಗಿರಲಿದೆ. ನಿಮಗೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಪ್ರೇಮ-ಸಂಬಂಧಗಳಲ್ಲಿ ಯಶಸ್ಸನ್ನು ಕಾಣುವಿರಿ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಇದರಿಂದ ನಿಮ್ಮ ಆತ್ಮ ವಿಶ್ವಾಸದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. 

ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿ ಭಾವದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮೈತ್ರಿ ನಿಮ್ಮ ಪಾಲಿಗೆ ಅತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನ ಪ್ರಾಪ್ತಿಯಾಗಲಿದೆ. ಇದರಿಂದ ಆರ್ಥಿಕವಾಗಿ ನೀವು ಅತ್ಯಂತ ಸಂಪನ್ನರಾಗುವಿರಿ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸ-ಕಾರ್ಯಗಳು ಪೂರ್ಣಗೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನೊಂದೆಡೆ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದೆ. ಇದರಿಂದ ಜನರು ನಿಮ್ಮಿಂದ ಪ್ರಭಾವಿತರಾಗುವರು. ವ್ಯಾಪಾರಿಗಳು ನೀಡಿದ ಸಾಲ ಅವರತ್ತ ಮರಳಲಿದೆ. 

ಸಿಂಹ ರಾಶಿ: ನಿಮ್ಮ ಜಾತಕದ ಲಗ್ನ ಭಾವದಲ್ಲಿ ಈ ಸೂರ್ಯ ಹಾಗೂ ಮಂಗಳರ ಯುತಿ ನೆರವೇರಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಬಾಳಸಂಗಾತಿಯ ಜೊತೆಗಿದ್ದ ಎಲ್ಲಾ ವೈಮನಸ್ಸುಗಳು ಅಂತ್ಯವಾಗಲಿವೆ ಮತ್ತು ಮೊದಲಿಗಿಂತ ಹೆಚ್ಚು ನೀವು ಪರಸ್ಪರರ ಹತ್ತಿರವಾಗುವಿರಿ. ಈ ಅವಧಿಯಲ್ಲಿ ನೀವು ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಆರಂಭಿಸಬಹುದು. ಕುಟುಂಬ ಸದಸ್ಯರ ಭರಪೂರ ಬೆಂಬಲ ನಿಮಗೆ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ನೌಕರಿಯಲ್ಲಿ ನಿರತ ಜನರಿಗೆ ಈ ಅವಧಿಯಲ್ಲಿ ಪ್ರಮೋಷನ್ ಹಾಗೂ ಇಂಕ್ರಿಮೆಂಟ್ ಸಿಗುವ ಎಲ್ಲಾ ಸಾಧ್ಯತೆಗಳು ಇವೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
 

Trending News