Adhik Shravan 2023: ಸುದೀರ್ಘ 30 ವರ್ಷಗಳ ಬಳಿಕ ಅಧಿಕ ಶ್ರಾವಣದಲ್ಲಿ ವಿಶೇಷ ಕಾಕತಾಳೀಯ ನಿರ್ಮಾಣ, 4 ರಾಶಿಗಳ ಜನರ ಮೇಲೆ ಶಿವನ ವಿಶೇಷ ಕೃಪಾವೃಷ್ಟಿ!

Adhik Shravan 2023: ವೈದಿಕ ಪಂಚಾಂಗದ ಪ್ರಕಾರ ಉತ್ತರ ಭಾರತದಲ್ಲಿ ಜುಲೈ 4 ರಿಂದ ಅಧಿಕ ಶ್ರಾವಣ ಮಾಸ ಆರಂಭಗೊಂಡಿದೆ. ಈ ಬಾರಿ ಅಧಿಕ ಮಾಸ ಬಂದಿರುವ ಕಾರಣ ಶ್ರಾವಣ ಮಾಸ ಎರಡು ತಿಂಗಳ ಅವಧಿಯದ್ದಾಗಿರುತ್ತದೆ. ಇನ್ನೊಂದೆಡೆ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶ್ರಾವಣದ ಸಂದರ್ಭದಲ್ಲಿ ಒಂದು ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಲಿದೆ. ಇದರಿಂದ ನಾಲ್ಕು ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ಆರಂಭಿಸಲಿದೆ. 

Written by - Nitin Tabib | Last Updated : Jul 5, 2023, 04:30 PM IST
  • ಈ ಬಾರಿ ಅಧಿಕ ಮಾಸ ಇರುವ ಕಾರಣ ಶ್ರಾವಣ ಮಾಸದ ಅವಧಿ ಒಂದು ತಿಂಗಳು ಹೆಚ್ಚಾಗಿದೆ. ಈ ಬಾರಿಯ ಶ್ರಾವಣ ಮಾಸದಲ್ಲಿ ದೇವಾಧಿದೇವ ಮಹಾದೇವನ ವಿಶೇಷ ಕೃಪೆ ಭಕ್ತಾದಿಗಳ ಮೇಲಿರಲಿದೆ.
  • ಇನ್ನೊಂದೆಡೆ ಪಂಚಾಂಗದ ಪ್ರಕಾರ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿ ದೇವ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.
  • ಇದರಿಂದ ಶ್ರಾವಣ ಮಾಸ 4 ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Adhik Shravan 2023: ಸುದೀರ್ಘ 30 ವರ್ಷಗಳ ಬಳಿಕ ಅಧಿಕ ಶ್ರಾವಣದಲ್ಲಿ ವಿಶೇಷ ಕಾಕತಾಳೀಯ ನಿರ್ಮಾಣ, 4 ರಾಶಿಗಳ ಜನರ ಮೇಲೆ ಶಿವನ ವಿಶೇಷ ಕೃಪಾವೃಷ್ಟಿ! title=

Adhik Shravan 2023: ವೈದಿಕ ಪಂಚಾಂಗ ಹಾಗೂ ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ ಕಲಿಪ್ಸಲಾಗಿದೆ. ಏಕೆಂದರೆ ಈ ತಿಂಗಳಿನಲ್ಲಿ ಯಾರೊಬ್ಬರು ಅತ್ಯಂತ ಶುದ್ಧ ಅಂತಃಕರಣ ಮತ್ತು ಭಕ್ತಿ ಭಾವದಿಂದ ದೇವಾದಿದೇವ ಮಹಾದೇವನಿಗೆ ಪೂಜೆ ಸಲ್ಲಿಸುತ್ತಾರೋ, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಉತ್ತರ ಭಾರತದಲ್ಲಿ ಜುಲೈ 4 ರಿಂದ ಅಧಿಕ ಶ್ರಾವಣ ಮಾಸ ಆರಂಭಗೊಂಡಿದೆ. ಇದು ಉತ್ತರ ಭಾರತದಲ್ಲಿ ಆಗಸ್ಟ್ 31, 2023 ರವರೆಗೆ ಇರಲಿದೆ. ದಕ್ಷಿಣ ಭಾರತದ ಪಂಚಾಂಗದ ಪ್ರಕಾರ ಅಧಿಕ ಶ್ರಾವಣ ಮಾಸ ಜುಲೈ 18, 2023 ರಿಂದ ಆರಂಭವಾಗಲಿದ್ದು. ಸೆಪ್ಟೆಂಬರ್ 15, 2023ರವರೆಗೆ ಇರಲಿದೆ. ಈ ಬಾರಿ ಅಧಿಕ ಮಾಸ ಇರುವ ಕಾರಣ ಶ್ರಾವಣ ಮಾಸದ ಅವಧಿ ಒಂದು ತಿಂಗಳು ಹೆಚ್ಚಾಗಿದೆ. ಈ ಬಾರಿಯ ಶ್ರಾವಣ ಮಾಸದಲ್ಲಿ ದೇವಾಧಿದೇವ ಮಹಾದೇವನ ವಿಶೇಷ ಕೃಪೆ ಭಕ್ತಾದಿಗಳ ಮೇಲಿರಲಿದೆ. ಇನ್ನೊಂದೆಡೆ ಪಂಚಾಂಗದ ಪ್ರಕಾರ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿ ದೇವ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ಶ್ರಾವಣ ಮಾಸ 4 ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

ಸಿಂಹ ರಾಶಿ- ಎರಡು ತಿಂಗಳ ಶ್ರಾವಣ ಮಾಸದ ಅವಧಿ ಸಿಂಹ ರಾಶಿಯ ಜಾತಕದವರ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಈ ಅವಧಿ ನೌಕರವರ್ಗದ ಜನರಿಗೆ ಪದೋನ್ನತಿ ದಯಪಾಲಿಸುವ ಸಾಧ್ಯತೆ ಇದೆ. ನಿಮ್ಮ ಹಲವು ಇಷ್ಟಾರ್ಥಗಳು ಈ ಅವಧಿಯಲ್ಲಿ ನೆರವೇರುವ ಸಾಧ್ಯತೆ ಇದೆ. ಸುಖ ಸಾಧನಗಳಲ್ಲಿ ವೃದ್ಧಿ, ಹೊಸ ಕಾರ್ಯಗಳ ಆರಂಭ, ಆದಾಯ ವೃದ್ದಿಯ ಯೋಗ ಮತ್ತು ವೈವಾಹಿಕ ಜೀವನದಲ್ಲಿ ಅಪಾರ ಸುಖ-ಸಂತೋಷ ನಿಮ್ಮದಾಗಲಿದೆ.

ಮಿಥುನ ರಾಶಿ- ನಿಮ್ಮ ಪಾಳಿಗೂ ಕೂಡ ಶ್ರಾವಣ ಮಾಸದ ಅವಧಿ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಅಪಾರ ಸುಖ ಹರಿದುಬರಲಿದ್ದು, ಸಂತಾನ ಸುಖ ಪ್ರಾಪ್ತಿಯ ಎಲ್ಲಾ ಸಾಧ್ಯತೆಗಳಿವೆ. ಆಸೆ ಆಕಾಂಕ್ಷೆಗಳು ಈಡೇರಲಿವೆ, ಹೊಸ ಕೆಲಸಗಳು ಆರಂಭಗೊಳ್ಳಲಿವೆ ಮತ್ತು ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರಲಿದೆ.

ವೃಶ್ಚಿಕ ರಾಶಿ- ಶ್ರಾವಣ ಮಾಸದ ಈ ಎರಡು ತಿಂಗಳ ಅವಧಿ ವೃಶ್ಚಿಕ ರಾಶಿಯ ಜನರ ಪಾಲಿಗೆ ಒಂದು ವರದಾನ ಎಂಬಂತೆ ಸಾಬೀತಾಗಲಿದೆ. ಏಕೆಂದರೆ, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆಯಾಗಲಿದ್ದು, ಆರೋಗ್ಯ ಭಾಗ್ಯ ನಿಮ್ಮದಾಗಲಿದೆ. ರೋಗ-ವ್ಯಾಧಿಗಳಿಂದ ನಿಮಗೆ ಮುಕ್ತಿ ಸಿಗಲಿದೆ. ನೌಕರಿ ಬದಲಾವಣೆ ಕುರಿತು ಆಲೋಚಿಸುತ್ತಿರುವ ಜನರು ನೌಕರಿಯನ್ನು ಬದಲಾಯಿಸಬಹುದು. ಇನ್ನೊಂದೆಡೆ ನೌಕರವರ್ಗದ ಜನರಿಗೆ ಬಡ್ತಿ ಹಾಗೂ ವೇತನ ಬಡ್ತಿಯ ಎಲ್ಲಾ ಸಾಧ್ಯತೆಗಳಿವೆ. 

ಇದನ್ನೂ ಓದಿ-Rajyog In Simha Rashi: ಆದಿತ್ಯನ ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ' ಈ ರಾಶಿಗಳ ಜನರಿಗೆ ಸಿಗಲಿದೆ ಅಪಾರ ಧನಸಂಪತ್ತು!

ಮೇಷ ರಾಶಿ- ಶ್ರಾವಣ ಮಾಸದ ಈ ಎರಡು ತಿಂಗಳ ಅವಧಿ ಮತ್ತು ನಿರ್ಮಾಣ ಗೊಳ್ಳುತ್ತಿರುವ ಶುಭ ಕಾಕತಾಳೀಯ ಮೇಷ ರಾಶಿಯ ಜಾತಕದವರಿಗೆ ಅತ್ಯದ್ಭುತ ಸಾಬೀತಾಗಲಿದೆ. ಕೆಲಸ-ವ್ಯಾಪಾರದಲ್ಲಿ ಉನ್ನತಿ ನಿಮ್ಮದಾಗಲಿದೆ. ಘನತೆ, ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಸುಖ ಸಾಧನಗಳಲ್ಲಿ ಹೆಚ್ಚಳವಾಗಲಿದ್ದು, ಅವಿವಾಹಿತರಿಗೆ ವಿವಾಹ ಯೋಗ ರೂಪುಗೊಳ್ಳುತ್ತಲಿದೆ. ನಿಂತುಹೋಗಿರುವ ನಿಮ್ಮೆಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. 

ಇದನ್ನೂ ಓದಿ-Shubh Yoga: ದೇವಗುರು ಬೃಹಸ್ಪತಿ ಹಾಗೂ ಸೇನಾಪತಿ ಮಂಗಳನ ಕೃಪೆಯಿಂದ ನವಪಂಚಮ ಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News