Vastu Tips: ಮನೆ ಅಂಗಳಕ್ಕೆ ಈ ಹಕ್ಕಿ ಬಂದರೆ ಅದೃಷ್ಟವೇ ಓಡೋಡಿ ಬಂದಂತೆ.. ಇದು ಹಣಕಾಸಿನ ಲಾಭದ ಸ್ಪಷ್ಟ ಸಂಕೇತ!

Sign of Parrot Coming to Home: ಪಕ್ಷಿಗಳ ಚಿಲಿಪಿಲಿ ಬಹಳ ಮಧುರವಾಗಿ ಧ್ವನಿಸುತ್ತದೆ. ಕೆಲವೊಮ್ಮೆ ಈ ಪಕ್ಷಿಗಳು ಮನೆಯೊಳಗೆ ಬಂದು ಗೂಡು ಕಟ್ಟುತ್ತವೆ. ಈ ಪ್ರಕ್ರಿಯೆಯೂ ಮಾನವನ ಜೀವನಕ್ಕೂ ಕೆಲ ನಂಟಿದೆ. ಅದರಲ್ಲೂ ಗಿಳಿ ಮನೆಗೆ ಆಗಮಿಸುವುದು ಬಹಳ ಮಂಗಳಕರ.

Written by - Bhavishya Shetty | Last Updated : Mar 9, 2024, 02:03 PM IST
    • ಗಿಳಿಯು ಸಂಪತ್ತಿನ ದೇವ ಕುಬೇರನಿಗೆ ಸಂಬಂಧಿಸಿದೆ
    • ಗಿಳಿಯು ಮನೆಗೆ ಆಗಮಿಸಿದರೆ ಅದನ್ನು ಮಂಗಳಕರ ಸಂಕೇತ ಎನ್ನಬಹುದು
    • ವ್ಯಾಪಾರ ಹಿಗ್ಗುವುದಲ್ಲದೆ, ಬಾಕಿ ಹಣವೂ ಬರುತ್ತದೆ ಎಂದು ಹೇಳಲಾಗುತ್ತದೆ
Vastu Tips: ಮನೆ ಅಂಗಳಕ್ಕೆ ಈ ಹಕ್ಕಿ ಬಂದರೆ ಅದೃಷ್ಟವೇ ಓಡೋಡಿ ಬಂದಂತೆ.. ಇದು ಹಣಕಾಸಿನ ಲಾಭದ ಸ್ಪಷ್ಟ ಸಂಕೇತ! title=
Sign of Parrot Coming to Home

Vastu Tips: ವಾಸ್ತು ಪ್ರಕಾರ, ಭೂಮಿ ಮೇಲಿರುವ ಪ್ರತಿಯೊಂದು ಜೀವಿಯಾಗಲಿ, ವಸ್ತುವಾಗಲಿ ಅವುಗಳಿಗೆ ಧನಾತ್ಮಕ ಅಥವಾ ಋಣಾತ್ಮಕ ಶಕ್ತಿ ಇರುತ್ತದೆ. ಅವುಗಳು ಸುತ್ತಮುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತವೆ ಅಂತೆಯೇ ಕೆಲ ಪಕ್ಷಿಗಳು ಸಹ ವಿಶೇಷವಾದ ಶಕ್ತಿಯನ್ನು ಹೊಂದಿದ್ದು, ಮನೆಗೆ ಬಂದರೆ ಅನೇಕ ಶುಭ ಅಥವಾ ಅಶುಭ ಸಂಕೇತಗಳನ್ನು ನೀಡುತ್ತವೆ.

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಅಬ್ಬರಿಸಿ ಈಗ CSKಯಲ್ಲಿ ಮಿಂಚಲು ಸಿದ್ಧರಾದ ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಯಾರು ಗೊತ್ತಾ? ಈಕೆಯೂ ಭಾರತೀಯಳೇ!

ಪಕ್ಷಿಗಳ ಚಿಲಿಪಿಲಿ ಬಹಳ ಮಧುರವಾಗಿ ಧ್ವನಿಸುತ್ತದೆ. ಕೆಲವೊಮ್ಮೆ ಈ ಪಕ್ಷಿಗಳು ಮನೆಯೊಳಗೆ ಬಂದು ಗೂಡು ಕಟ್ಟುತ್ತವೆ. ಈ ಪ್ರಕ್ರಿಯೆಯೂ ಮಾನವನ ಜೀವನಕ್ಕೂ ಕೆಲ ನಂಟಿದೆ. ಅದರಲ್ಲೂ ಗಿಳಿ ಮನೆಗೆ ಆಗಮಿಸುವುದು ಬಹಳ ಮಂಗಳಕರ.

ವಾಸ್ತು ಪ್ರಕಾರ, ಗಿಳಿಯು ಸಂಪತ್ತಿನ ದೇವ ಕುಬೇರನಿಗೆ ಸಂಬಂಧಿಸಿದೆ. ಜೊತೆಗೆ ಇದು ಕಾಮದೇವನ ವಾಹನ. ಈ ಕಾರಣಕ್ಕಾಗಿ ಗಿಳಿಯನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಗಿಳಿಯು ಮನೆಗೆ ಆಗಮಿಸಿದರೆ ಅದನ್ನು ಮಂಗಳಕರ ಸಂಕೇತ ಎನ್ನಬಹುದು. ವ್ಯಾಪಾರ ಹಿಗ್ಗುವುದಲ್ಲದೆ, ಬಾಕಿ ಹಣವೂ ಬರುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಇದು ಆರ್ಥಿಕ ಲಾಭವನ್ನು ಸೂಚಿಸುತ್ತದೆ.

ಮುಂಜಾನೆ ಹಕ್ಕಿಗಳ ಕಲರವ ಕೇಳಿದರೆ ಮನಸ್ಸಿಗೆ ಖುಷಿಯಾಗುತ್ತದೆ. ಅದೇ ರೀತಿ ಪಕ್ಷಿ ಮನೆಗೆ ಬಂದು ಆಹಾರ ನೀರು ತೆಗೆದುಕೊಂಡು ಹೋಗುವುದು ಕೂಡ ತುಂಬಾ ಶುಭ. ಪಕ್ಷಿಗಳು ಗೂಡು ಕಟ್ಟುವ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ ಎಂಬುದು ನಂಬಿಕೆ. ವಾಸ್ತು ಶಾಸ್ತ್ರದ ಪ್ರಕಾರ ಪಕ್ಷಿ ಮನೆಗೆ ಬಂದರೆ ಅಥವಾ ಮನೆಯಲ್ಲಿ ಗೂಡು ಕಟ್ಟಿದರೆ ತುಂಬಾ ಒಳ್ಳೆಯದು.

ಗೂಬೆಯೂ ಮಂಗಳಕರ:

ಮನೆಯ ಸುತ್ತಮುತ್ತ ಎಲ್ಲಾದರೂ ಗೂಬೆಯನ್ನು ಕಂಡರೆ ಅದು ಲಕ್ಷ್ಮಿ ದೇವಿಯ ಆಶೀರ್ವಾದದ ಸಂಕೇತದೆ. ಗೂಬೆ ಕಂಡರೆ ಅಥವಾ ಮನೆಯೊಳಗೆ ಬಂದರೆ, ತಿಜೋರಿ ತುಂಬಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:  'ಖದೀಮ' ಟೀಸರ್‌ ರಿಲೀಸ್...‌ ಹೀರೋ ಆದ ಜಿಮ್ ಟ್ರೈನರ್

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News