ಉದಯೋನ್ಮುಖ ಉದ್ಯಮಿ ನವೀನ್‌ ಅಲ್ಮಾಜೆಯವರ ಸಾಧನೆಗೆ ಜೀ ನ್ಯೂಸ್‌ ʼಯುವರತ್ನ ಪ್ರಶಸ್ತಿʼ ಗೌರವ..!

Zee Kannada News Yuvaratna Awards : ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಡಾ, ಖಾಸಗಿ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ಯುವಜನಕ್ಕೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಜೀ ಕನ್ನಡ ನ್ಯೂಸ್‌ ಮಾಡುತ್ತಿದೆ. ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಒಟ್ಟು 35 ಜನ ಯುವ ಸಾಧಕರನ್ನು ಗುರುತಿಸಿ, ಅವರಿಗೆ ಸನ್ಮಾನ ಮಾಡಿ ಗೌರವಿಸಿ "ಯುವರತ್ನ ಪ್ರಶಸ್ತಿ" ಪ್ರದಾನ ಮಾಡಲಾಯಿತು. 
 

1 /5

ತಳಮಟ್ಟದಿಂದ ಬೆಳೆದು ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.     

2 /5

ಈ ಪೈಕಿ ಎಂ.ಸ್ಯಾಂಡ್ ಯುನಿಟ್ ಸ್ಥಾಪನೆ ಮಾಡಿ ಮರಳು ಉತ್ಪಾದನೆಯ ಕ್ರಾಂತಿ ಮಾಡಿದ, ಪರೋಕ್ಷವಾಗಿ ನದಿಗಳ ರಕ್ಷಣೆ ಮಾಡುತ್ತಿರುವ  ನವೀನ್‌ ಅಲ್ಮಾಜೆ ಸಂಸ್ಥೆಯಲ್ಲಿ 200 ಕ್ಕೂ ಮಂದಿಗೆ ಉದ್ಯೋಗ ಕಲ್ಪಿಸಿದ ಉದಯೋನ್ಮುಖ ಉದ್ಯಮಿ ನವೀನ್‌ ಅಲ್ಮಾಜೆ ಇವರ ಅದ್ಭುತ ಸಾಧನೆಯನ್ನು ಗುರುತಿಸಿ ಜೀ ಕನ್ನಡ ನ್ಯೂಸ್‌ ಇವರಿಗೆ ಯುವರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.    

3 /5

ನವೀನ್ ಅಲ್ಮಾಜೆ ಗಡಿ ಜಿಲ್ಲೆಯ ಬೀದರ್ ನ ತುತ್ತತುದಿಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಔರಾದ್ ಪಟ್ಟಣದ ನಿವಾಸಿ. ಶ್ರೀಮತಿ ಜ್ಯೋತಿ, ಸೂರ್ಯಕಾಂತ ಆಲ್ಮಾಜೆ ದಂಪತಿ ಪುತ್ರ. ಬಿಇ ಎಂಜಿನಿಯರಿಂಗ್ ಪದವಿಧರರಾದ ನವೀನ್‌ ಅವರು ಗಡಿ ಭಾಗದಲ್ಲಿ ಉದಯೋನ್ಮುಖ ಉದ್ಯಮಿಯಾಗಿ ಪ್ರಚಲಿತದಲ್ಲಿದ್ದಾರೆ.   

4 /5

ತಂದೆ ಸ್ಥಾಪಿಸಿದ  ಸ್ಟೋನ್ ಕ್ರಶರ್ ಉದ್ಯಮಕ್ಕೆ ಹೊಸ ಆಯಾಮ ನೀಡಿದಲ್ಲದೆ‌, ಮರಳಿಗಾಗಿ ತತ್ತರಿಸಿ ಹೊಗಿದ್ದ ಜಿಲ್ಲೆಯ ಜನರಿಗಾಗಿ ಎಂ.ಸ್ಯಾಂಡ್ ಯುನಿಟ್ ಸ್ಥಾಪನೆ ಮಾಡಿ ಮರಳು ಉತ್ಪಾದನೆಯ ಕ್ರಾಂತಿ ಮಾಡಿದ ಖ್ಯಾಥಿ ಇವರದ್ದು. ಮರಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡ್ತಿದ್ದ ಜನರಿಗೆ ಕಡಿಮೆ ದರದ ಉತ್ತಮ ಕ್ವಾಲಿಟಿಯ ಕಲ್ಲಿನಿಂದ ಉತ್ಪಾದಿಸಿದ ಮರಳು ನೀಡುವ ಮೂಲಕ ಪರೋಕ್ಷವಾಗಿ ನದಿಗಳ ರಕ್ಷಣೆಯೂ ಮಾಡಿದ್ದಾರೆ.   

5 /5

ಅಷ್ಟೆ ಅಲ್ಲ ಇವರ ಸಂಸ್ಥೆಯಲ್ಲಿ 200 ಕ್ಕೂ ಮಂದಿಗೆ ಉದ್ಯೋಗ ಕಲ್ಪಿಸಿದ ಸಾರ್ಥಕತೆ ಕೂಡ ನವೀನ್ಅಲ್ಮಾಜೆ ಅವರಿಗೆ ಸಲ್ಲತ್ತೆ. ಹಾಗಾಗಿ ಎಸ್.‌ವಿ. ನವಿನ್‌ ಅಲ್ಮಾಜೆಯವರಿಗೆ ಯುವರತ್ನ ಪ್ರಶಸ್ತಿ ನೀಡಲು ಝೀ ಕನ್ನಡ ನ್ಯೂಸ್‌ ಹೆಮ್ಮೆ ಪಡುತ್ತದೆ.