ಭಾರತೀಯ ರೈಲಿನಲ್ಲಿ Vistadome Coach; ಸಿಗಲಿದೆ ಈ ಎಲ್ಲಾ ಸೌಲಭ್ಯ

ವಿಸ್ಟಾಡೋಮ್ ಕೋಚ್‌ನ ಈ ಸೌಲಭ್ಯವನ್ನು ಮುಂಬೈ-ಪುಣೆ ಡೆಕ್ಕನ್ ಎಕ್ಸ್‌ಪ್ರೆಸ್ ವಿಶೇಷ ರೈಲಿನಲ್ಲಿ ಪ್ರಾರಂಭಿಸಲಾಗಿದೆ.

ನವದೆಹಲಿ : ಭಾರತೀಯ ರೈಲ್ವೆ (Indian Railways)ಗಾಜಿನ ಛಾವಣಿ, ಅಬ್ ಸಾರ್ವೇಶನ್ ಲಾಂಜ್, ಮತ್ತು ದೊಡ್ಡ ಕಿಟಕಿಗಳನ್ನು ಹೊಂದಿರುವ ಯುರೋಪಿಯನ್ ಶೈಲಿಯ ವಿಸ್ಟಾಡೋಮ್ ಬೋಗಿಗಳ (Vistadome Coach)  ಸೌಲಭ್ಯವನ್ನು ಪ್ರಾರಂಭಿಸಿದೆ. ವಿಸ್ಟಾಡೋಮ್ ಕೋಚ್‌ನ ಈ ಸೌಲಭ್ಯವನ್ನು ಮುಂಬೈ-ಪುಣೆ ಡೆಕ್ಕನ್ ಎಕ್ಸ್‌ಪ್ರೆಸ್ ವಿಶೇಷ ರೈಲಿನಲ್ಲಿ ಪ್ರಾರಂಭಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ವಿಸ್ಟಾಡೋಮ್ ಬೋಗಿಗಳ ಪ್ರಯಾಣದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ರೈಲು ಪ್ರಯಾಣದ ಅನುಭವವನ್ನು ವಿಶೇಷವನ್ನಾಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಪಾರದರ್ಶಕ ಛಾವಣಿಯ ಮೂಲಕ ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಅನುಕೂಲವಾಗಲಿದೆ. ಪ್ರಯಾಣದಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳ ಜೊತೆಗೆ, ರಸ್ತೆಗಳ ನೈಸರ್ಗಿಕ ಸೌಂದರ್ಯವು ಪ್ರಯಾಣಿಕರನ್ನು ಆಕರ್ಷಿಸುತ್ತದೆ.

2 /5

 ಪುಣೆ-ಮುಂಬೈ ನಡುವಿನ ಮಾರ್ಗವು ರಮಣೀಯ ನೋಟಗಳಿಂದ ಕೂಡಿದೆ. ದಾರಿಯಲ್ಲಿ ಜಲಪಾತಗಳು ಕಂಡುಬರುತ್ತವೆ, ಆದ್ದರಿಂದ ಹಸಿರು ಕೂಡ ಮನಸ್ಸಿಗೆ ಮುದ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಳೆಗಾಲದಲ್ಲಿ, ಗಾಜಿನ ಛಾವಣಿ ಮತ್ತು ದೊಡ್ಡ ಕಿಟಕಿಗಳ ಮೂಲಕ ಈ ನೈಸರ್ಗಿಕ ನೋಟಗಳನ್ನು ಆನಂದಿಸ ಬಹುದು.

3 /5

ರೈಲ್ವೆ ಪ್ರಕಾರ, ಪುಣೆ-ಮುಂಬೈ ಡೆಕ್ಕನ್ ಎಕ್ಸ್‌ಪ್ರೆಸ್‌ನಲ್ಲಿ ಅಳವಡಿಸಲಾದ ಈ ವಿಸ್ಟಾಡೋಮ್ ಬೋಗಿಗಳು ಅನೇಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿವೆ. ಇವುಗಳಲ್ಲಿ ಪ್ರಯಾಣಿಕರಿಗೆ 44 ಆಸನಗಳಿವೆ. ಇದಲ್ಲದೆ ಕೋಚ್‌ನಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ವೈ-ಫೈ, ಸ್ವಯಂಚಾಲಿತ ಸ್ಲೈಡಿಂಗ್ ಡೋರ್ ಸೌಲಭ್ಯಗಳಿವೆ.  

4 /5

ವಿಸ್ಟಾಡೋಮ್ ಕೋಚ್ ನಲ್ಲಿ ಆಧುನಿಕ ಶೈಲಿಯಲ್ಲಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಕೋಚ್ ನಲ್ಲಿ ಅಟೋಮ್ಯಾಟಿಕ್ ಫೈರ್ ಡಿಟೆಕ್ಷನ್  ವ್ಯವಸ್ಥೆ ಕೂಡಾ ಇದೆ.   

5 /5

ಈ ಬೋಗಿಯಲ್ಲಿ ಅಬ್ ಸರ್ ವೇಶನ್ ಲಾಂಜ್ ನಿರ್ಮಿಸಲಾಗಿದೆ. ಅಲ್ಲಿ ನಿಂತ ಪ್ರಯಾಣಿಕರು ಹೊರಗಿನ ದೃಶ್ಯಗಳನ್ನು ನೋಡಬಹುದು. ಈ ಕೋಚನ್ನು ಭಾರತೀಯ ರೈಲ್ವೆಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿತಯಾರಿಸಲಾಗಿದೆ.