ಉತ್ತಮ ರಿಟರ್ನ್ ಗಳಿಸಲು ಸರ್ಕಾರದ ಈ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಿ

Guaranteed Return : .ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಸಿಂಗಲ್  ಅಥವಾ ಜಂಟಿ ಖಾತೆಯನ್ನು ತೆರೆಯಬಹುದು. ಇಲ್ಲಿ ವಾರ್ಷಿಕ ಶೇ 6.6ರಷ್ಟು ಬಡ್ಡಿ  ಸಿಗುತ್ತದೆ.

ನವದೆಹಲಿ :  Guaranteed Return : ಹೂಡಿಕೆದಾರರ ವರ್ಗವೂ ಭಿನ್ನವಾಗಿರುತ್ತದೆ. ಕೆಲವರು ಮಾರ್ಕೆಟ್ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರುತ್ತಾರೆ. ಇನ್ನೊಂದು ವರ್ಗದವರು,  ಕ್ಯಾಪಿಟಲ್ ಮಾರ್ಕೆಟ್ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಬದಲಾಗಿ ತಮ್ಮ ಹಣವನ್ನು ಯಾವುದೇ ಸ್ಥಿರ ಆದಾಯ ಯೋಜನೆಯಲ್ಲಿ ಹೂಡಲು ಬಯಸುತ್ತಾರೆ. ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದು ಮೊದಲ ವರ್ಗದ ಹೂಡಿಕೆದಾರರ ಉತ್ತಮ ಆಯ್ಕೆಯಾಗಿರುತ್ತದೆ. ಮತ್ತೊಂದೆಡೆ, ಎರಡನೇ ವರ್ಗದಲ್ಲಿ ಬರುವ ಜನರಿಗೆ ಖಾತರಿಯ ಆದಾಯವನ್ನು ನೀಡುವ ಕೆಲವು ಯೋಜನೆಗಳಿವೆ. ಇವುಗಳ ಮೇಲಿನ ಆದಾಯವು ಈಕ್ವಿಟಿಗಳಷ್ಟು ಹೆಚ್ಚಿಲ್ಲದಿದ್ದರೂ, ಠೇವಣಿ ಮಾಡಿದ ಹಣದ ಮೇಲೆ ಲಾಭದ ಸಂಪೂರ್ಣ ಭರವಸೆ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

 ಕಿಸಾನ್ ವಿಕಾಸ್ ಪತ್ರ (KVP) ಅಂಚೆ ಕಚೇರಿಯ ಜನಪ್ರಿಯ ಯೋಜನೆಯಾಗಿದೆ. ಇಲ್ಲಿ, ಶೇಕಡಾ 6.9 ರಷ್ಟು ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಲಾದ ಹಣವು 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಇದರಲ್ಲಿ ನೀವು ಕನಿಷ್ಟ 1000 ರೂ ಹೂಡಿಕೆ ಮಾಡಬಹುದು ಗರಿಷ್ಠ ಮಿತಿಯಿರುವುದಿಲ್ಲ. 

2 /4

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ (MIS) ಸಿಂಗಲ್  ಅಥವಾ ಜಂಟಿ ಖಾತೆಯನ್ನು ತೆರೆಯಬಹುದು. ಇಲ್ಲಿ ವಾರ್ಷಿಕ ಶೇ 6.6ರಷ್ಟು ಬಡ್ಡಿ  ಸಿಗುತ್ತದೆ. ಠೇವಣಿಗಳ ಮೇಲೆ ಗಳಿಸಿದ ವಾರ್ಷಿಕ ಬಡ್ಡಿಯನ್ನು 12 ಭಾಗಗಳಾಗಿ ವಿಂಗಡಿಸಲಾಗುತ್ತದೆ ಮತ್ತು ಪ್ರತಿ ತಿಂಗಳು ಖಾತೆಗೆ ಕಳುಹಿಸಲಾಗುತ್ತದೆ.

3 /4

ಸಾರ್ವಜನಿಕ ಭವಿಷ್ಯ ನಿಧಿ (PPF) ದೀರ್ಘಾವಧಿಯ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಪಿಪಿಎಫ್ ಶೇಕಡಾ 7.1 ರಷ್ಟು ವಾರ್ಷಿಕ ಬಡ್ಡಿ ನೀಡುತ್ತದೆ . ಇದರ ಮೆಚ್ಯೂರಿಟಿ ಅವಧಿ 15 ವರ್ಷಗಲಾಗಿರುತ್ತವೆ. ಇದರಲ್ಲಿ ಪ್ರತಿ ವರ್ಷ ಗರಿಷ್ಠ 1.5 ಲಕ್ಷ ಠೇವಣಿ ಇಡಬಹುದು.

4 /4

ಹಿರಿಯ ನಾಗರಿಕರಿಗೆ ಜನಪ್ರಿಯ ಅಂಚೆ ಕಚೇರಿ ಯೋಜನೆ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS). ಇಲ್ಲಿ ಬಡ್ಡಿ ವಾರ್ಷಿಕವಾಗಿ ಶೇಕಡಾ 7.4 ಸಿಗುತ್ತದೆ. ಇದರ ಮೆಚ್ಯೂರಿಟಿ ಅವಧಿ  5 ವರ್ಷಗಳು.  ಮೆಚ್ಯೂರಿಟಿ ಅವಧಿ ಪೂರ್ಣಗೊಂಡ ನಂತರ, ಅದನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಬಹುದು. ಇದರಲ್ಲಿ ನೀವು 1000 ರೂ.ನಿಂದ 15 ಲಕ್ಷ ರೂ.ಗಳವರೆಗೆ ಹೂಡಿಕೆ ಮಾಡಬಹುದು.