Direct Train To Kashmir: ಶೀಘ್ರವೇ ರೈಲಿನಲ್ಲಿ ಕಾಶ್ಮೀರಕ್ಕೆ ಹೋಗುವ ನಿಮ್ಮ ಕನಸು ಈಡೇರಲಿದೆ!

Direct Train To Kashmir: USBRL ಯೋಜನೆಯು 119 ಕಿಮೀಗಳ 38 ಸುರಂಗಗಳನ್ನು ಒಳಗೊಂಡಿದೆ. ಇದರಲ್ಲಿ ಉದ್ದವಾದ ಸುರಂಗವು 12.75 ಕಿಮೀ ಆಗಿದೆ. ಇದು ದೇಶದ ಅತಿ ಉದ್ದದ ಸಾರಿಗೆ ಸುರಂಗವಾಗಿದೆ.

ಕಾಶ್ಮೀರಕ್ಕೆ ನೇರ ರೈಲು: ರೈಲಿನಲ್ಲಿ ಪ್ರವಾಸಿಗರ ಸ್ವರ್ಗವೆಂದೇ ಖ್ಯಾತಿಯಾಗಿರುವ ಕಾಶ್ಮೀರಕ್ಕೆ ಹೋಗುವ ನಿಮ್ಮ ಕನಸು ಶೀಘ್ರದಲ್ಲೇ ಈಡೇರಲಿದೆ. ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ (USBRL) ಯೋಜನೆಯ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ರೈಲ್ವೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ರೈಲು ಕಾಶ್ಮೀರ ಕಣಿವೆಯನ್ನು ಭಾರತೀಯ ರೈಲ್ವೆ ಮೂಲಕ ಸಂಪರ್ಕಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

USBRL ಯೋಜನೆಯು 119 ಕಿಮೀಗಳ 38 ಸುರಂಗಗಳನ್ನು ಒಳಗೊಂಡಿದೆ. ಇದರಲ್ಲಿ ಉದ್ದವಾದ ಸುರಂಗವು 12.75 ಕಿಮೀ ಆಗಿದೆ. ಇದು ದೇಶದ ಅತಿ ಉದ್ದದ ಸಾರಿಗೆ ಸುರಂಗವಾಗಿದೆ. ಇದಲ್ಲದೆ 927 ಸೇತುವೆಗಳನ್ನು ಸಹ ನಿರ್ಮಿಸಲಾಗಿದೆ, ಇದರಲ್ಲಿ 359 ಮೀಟರ್ ಎತ್ತರದ ಚೆನಾಬ್ ಸೇತುವೆ ಮತ್ತು ಪ್ರದೇಶದ ಕಡಿದಾದ ಇಳಿಜಾರಿನಲ್ಲಿ ನಿರ್ಮಿಸಲಾದ ಅಂಜಿ ಖಾಡ್ ನದಿಯ ಮೇಲಿನ ದೇಶದ ಏಕೈಕ ರೈಲ್ವೆ ಸೇತುವೆ ಸೇರಿವೆ.

2 /6

ಜಮ್ಮು-ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಉಧಂಪುರ್-ಬನಿಹಾಲ್ ಹಳಿಯನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಆರಂಭಿಸಬಹುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಇದರೊಂದಿಗೆ ಯುಎಸ್‌ಬಿಆರ್‌ಎಲ್ ಯೋಜನೆಯಲ್ಲಿ ವಿಶೇಷ ‘ವಂದೇ ಭಾರತ್ ರೈಲು’ ಪ್ರಾರಂಭಿಸುವ ಯೋಜನೆ ಇದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

3 /6

ಕತ್ರಾ-ಬನಿಹಾಲ್ ಮಾರ್ಗದಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗದಲ್ಲಿ ರೈಲು ಜನವರಿ ಅಥವಾ ಫೆಬ್ರವರಿಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಮಾರ್ಗದ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ನೇರ ರೈಲು ಸೌಲಭ್ಯ ದೊರೆಯಲಿದೆ.

4 /6

ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ದೀಪಕ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ‘111 ಕಿಮೀ ಉದ್ದದ ಕತ್ರಾ-ಬನಿಹಾಲ್ ರೈಲು ಮಾರ್ಗದ ಕಾಮಗಾರಿಯು ಶೇ.95ರಷ್ಟು ಪೂರ್ಣಗೊಂಡಿದೆ’ ಎಂದು ಹೇಳಿದ್ದಾರೆ.

5 /6

ಈ ಯೋಜನೆಯು ದೇಶದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಸುಲಭವಾಗಿ ರೈಲಿನ ಮೂಲಕ ಸರಕುಗಳ ಸಾಗಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಿಂದ ಸೇಬು ಮತ್ತು ಇತರ ಕೃಷಿ ಉತ್ಪನ್ನಗಳನ್ನು ಕಳುಹಿಸುವುದು ತುಂಬಾ ಸುಲಭವಾಗುತ್ತದೆ. ಇದರೊಂದಿಗೆ ತೋಟಗಾರಿಕಾ ಉತ್ಪನ್ನಗಳ ವಿನಿಮಯವು ಹೆಚ್ಚು ಸುಲಭವಾಗುತ್ತದೆ.

6 /6

ನೇರ ರೈಲು ಪರಿಚಯಿಸುವುದರಿಂದ ಶ್ರೀನಗರದಿಂದ ಜಮ್ಮುವಿಗೆ ಇರುವ ಅಂತರವು 6 ಗಂಟೆಗಳಿಂದ 3.5 ಗಂಟೆಗಳಿಗೆ ಕಡಿಮೆಯಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ನೆಮ್ಮದಿ ಸಿಗಲಿದೆ. ಜಮ್ಮು ಮತ್ತು ಶ್ರೀನಗರ ನಡುವೆ ‘ವಂದೇ ಭಾರತ್ ಮೆಟ್ರೋ ರೈಲು’ ಸೇವೆಯನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ, ಇದಕ್ಕಾಗಿ ಜನರು ಬಹುನಿರೀಕ್ಷಿತರಾಗಿದ್ದಾರೆ.