ಶೀಘ್ರದಲ್ಲಿಯೇ ಸಿಂಹ ರಾಶಿಯಲ್ಲಿ ಬುಧ-ಮಂಗಳ-ಶುಕ್ರರ ಮೈತ್ರಿ, ಈ ಜನರ ಮೇಲಾಗಲಿದೆ ಹಣದ ಸುರಿಮಳೆ!

ವೈದಿಕ ಪಂಚಾಂಗದ ಪ್ರಕಾರ ಬರುವ ಜುಲೈ 25 ರಂದು ಸಿಂಹ ರಾಶಿಯಲ್ಲಿ ಬುಧ, ಶುಕ್ರ ಹಾಗೂ ಮಂಗಳರ ಮೈತ್ರಿ ನೆರವೇರಲಿದೆ. ಇದೃಂದ ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಈ ಮೂರು ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳಲಿದೆ.
 

ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ನವಗ್ರಹಗಳು ಒಂದಿಲ್ಲ ಒಂದು ಸಮಯಕ್ಕೆ ತನ್ನ ರಾಶಿಯನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ರಾಶಿ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳು ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಪ್ರಭಾವ ಬೀರುತ್ತವೆ. ಇನ್ನೊಂದೆಡೆ ಗ್ರಹಗಳ ಈ ವಿವಿಧ ರಾಶಿ ಗೋಚರದ (Mars-Mercury-Venus Yuti In Leo) ಸಂದರ್ಭದಲ್ಲಿ ಅವುಗಳ ಮಧ್ಯೆ ಯುತಿ ನೆರವೇರುತ್ತದೆ (Spiritual News In Kannada). ಗ್ರಹಗಳ ಈ ಯುತಿ ಕೆಲ ರಾಶಿಗಳ ಪಾಲಿಗೆ ಶುಭ ಸಾಬೀತಾದರೆ, ಕೆಲ ರಾಶಿಗಳ ಜನರ ಪಾಲಿಗೆ ಅಶುಭ ಸಾಬೀತಾಗುತ್ತದೆ. ಪ್ರಸ್ತುತ ಜುಲೈ 25 ರಂದು ಬುಧ ತನ್ನ ಸ್ವಂತ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಲಿದ್ದು, ಇದರಿಂದ ಸಿಂಹ ರಾಶಿಯಲ್ಲಿ ಮೂರು ಗ್ರಹಗಳ ಅದ್ಭುತ ಮೈತ್ರಿ ನೆರವೇರಲಿದೆ. ಈ ಮೂರು ದೊಡ್ಡ ಗ್ರಹಗಳ ಮೈತ್ರಿ ಮೂರು ಜಾತಕದವರ ಪಾಲಿಗೆ ಧನಲಾಭ ಹಾಗೂ ಭಾಗ್ಯೋದಯದ ಯೋಗ ನಿರ್ಮಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-ಕರ್ಕ ರಾಶಿಯಲ್ಲಿ ತ್ರಿಗ್ರಹಿ ಯೋಗ, ಬುಧ-ಸೂರ್ಯರ ಕೃಪೆಯಿಂದ 3 ರಾಶಿಗಳ ಜನರ ಭಾಗ್ಯ ಫಳಫಳ ಹೊಳೆಯಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೈದಿಕ ಪಂಚಾಂಗದ ಪ್ರಕಾರ ಬರುವ ಜುಲೈ 25 ರಂದು ಸಿಂಹ ರಾಶಿಯಲ್ಲಿ ಬುಧ, ಶುಕ್ರ ಹಾಗೂ ಮಂಗಳರ ಮೈತ್ರಿ ನೆರವೇರಲಿದೆ. ಇದೃಂದ ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಈ ಮೂರು ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳಲಿದೆ.  

2 /5

ತುಲಾ ರಾಶಿ- ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಈ ಶುಕ್ರ, ಮಂಗಳ ಹಾಗೂ ಬುಧರ ಮೈತ್ರಿ ನೆರವೇರುತ್ತಿದ್ದು, ನಿಮ್ಮ ಪಾಲಿಗೆ ಇದು ಲಾಭದಾಯಕ ಸಾಬೀತಾಗಲಿದೆ. ಸಾಮಾನ್ಯವಾಗಿ ಆದಾಯ ಭಾವದಲ್ಲಿ ಈ ಮೈತ್ರಿ ಇರುವ ಕಾರಣ ನಿಮ್ಮ ಆಧಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕು ನಿಮಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದರಿಂದ ಆದಾಯ ವೃದ್ಧಿಯ ಪ್ರಬಲ ಯೋಗ ನಿರ್ಮಾಣಗೊಳ್ಳಲಿದೆ. ಈ ಅವಧಿಯಲ್ಲಿ ನೀವು ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ಷೇರು ಮಾರುಕಟ್ಟೆ, ಲಾಟರಿ ವ್ಯವಹಾರಗಳಿಂದ ನಿಮಗೆ ಲಾಭ ಸಿಗಲಿದೆ.  

3 /5

ವೃಶ್ಚಿಕ ರಾಶಿ- ಬುಧ-ಮಂಗಳ-ಶುಕ್ರರ ಈ ಮೈತ್ರಿ ನಿಮ್ಮ ಗೋಚರ ಜಾತಕದ ಕರ್ಮ ಭಾವದ ಮೇಲೆ ನೆರವೇರುತ್ತಿದೆ. ಇದರಿಂದ ವೃಶ್ಚಿಕ ರಾಶಿಯ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಕೆಲಸ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ. ವೃತ್ತಿಜೀವನ ಕೂಡ ಉತ್ತಮವಾಗಿರಲಿದೆ. ಕಾರ್ಯಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಇದರ ಪರಿಣಾಮವಶಾತ್ ನಿಮಗೆ ಹೆಚ್ಚುವರಿ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಅವರ ವ್ಯಾಪಾರದಲ್ಲಿ ಅಪಾರ ಧನಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಬೆಂಬಲ ಸಿಗಲಿದೆ.   

4 /5

ಕರ್ಕ ರಾಶಿ- ಈ ಮೂರು ದೊಡ್ಡಗ್ರಹಗಳ ಮೈತ್ರಿ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಇದು ನಿಮ್ಮ ಪಾಲಿಗೂ ಕೂಡ ಮಂಗಳಕರ ಸಿದ್ಧ ಸಾಬೀತಾಗಲಿದೆ. ಇದರಿಂದ ನಿಮಗೆ ಆಕಸ್ಮಿಕ ಧನಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮಗೆ ಸಿಗುವ ಅವಕಾಶಗಳಿಂದ ನೀವು ಉತ್ತಮ ಹಣಗಳಿಕೆ ಮಾಡುವಲ್ಲಿ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕ ಸ್ಥಿತಿ ಉತ್ತಮಗೊಂದು ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲ್ಲಿದೆ. ವಿದೇಶಗಳ ಜೊತೆಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಅತಿ ಹೆಚ್ಚು ಲಾಭ ಉಂಟಾಗುವ ಸಾಧ್ಯತೆ ಇದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)