ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ಈ ವಸ್ತುಗಳನ್ನು ತಿನ್ನಬಾರದು

ಕಲ್ಲಂಗಡಿ ಹಣ್ಣನ್ನು ತಿನ್ನುವ ಜನರು, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಕಲ್ಲಂಗಡಿ ತಿಂದ ನಂತರ ಕೆಲವು ವಸ್ತುಗಳನ್ನು ಸೇವಿಸಲೇ ಬಾರದು. 

ಬೆಂಗಳೂರು : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ರಸಭರಿತ ಹಣ್ಣನ್ನು ತಿನ್ನುವುದೆಂದರೆ ಎಲ್ಲರಿಗೂ ಇಷ್ಟಪಡುತ್ತಾರೆ. ಕಲ್ಲಂಗಡಿ ತಿನ್ನಲು ಮಾತ್ರ ರುಚಿಕರವಾಗಿರುವುದಲ್ಲ, ಆರೋಗ್ಯಕ್ಕೂ ಒಳ್ಳೆಯದು. ಆದರೆ ಕಲ್ಲಂಗಡಿಹಣ್ಣನ್ನು ತಿನ್ನುವ ಜನರು,  ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಕಲ್ಲಂಗಡಿ ತಿಂದ ನಂತರ ಕೆಲವು ವಸ್ತುಗಳನ್ನು ಸೇವಿಸಲೇ ಬಾರದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೆಲವರು ಕಲ್ಲಂಗಡಿ ಮತ್ತು ಹಾಲಿನ ಸ್ಮೂಥಿಯನ್ನು ತುಂಬಾ ಇಷ್ಟಪಡುತ್ತಾರೆ.  ಆದರೆ ತಜ್ಞರು ಈ ಎರಡು ಪದಾರ್ಥಗಳನ್ನು ಒಟ್ಟಿಗೆ ತಿನ್ನದಂತೆ ಹೇಳಲಾಗುತ್ತದೆ. ಹಾಲು  ಲಾಕ್ಸೆಟಿವ್ ಆಗಿದ್ದರೆ, ಕಲ್ಲಂಗಡಿ  ಹೈ ಯೂರಿಟೆಕ್ ಆಗಿರುತ್ತದೆ. ಆದುದರಿಂದ ಇದನ್ನು ಒಟ್ಟಿಗೆ  ತಿನ್ನುವುದರಿಂದ ಗ್ಯಾಸ್  ಸಮಸ್ಯೆ ಉಂಟಾಗುತ್ತದೆ. 

2 /5

ಕಲ್ಲಂಗಡಿ ಹಣ್ಣನ್ನು ಉಪ್ಪಿನೊಂದಿಗೆ ತಿನ್ನುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಿ. ಏಕೆಂದರೆ ಕಲ್ಲಂಗಡಿಯಲ್ಲಿನ ಪೋಷಕಾಂಶಗಳು ಉಪ್ಪಿನಿಂದ ದೇಹಕ್ಕೆ ಹೀರಲ್ಪಡುವುದಿಲ್ಲ.  

3 /5

ಕಲ್ಲಂಗಡಿ ತಿಂದ ನಂತರ ಯಾವುದೇ ಧಾನ್ಯವನ್ನು ತಿನ್ನುವಂತಿಲ್ಲ. ಕಲ್ಲಂಗಡಿ ತಿಂದ ನಂತರ ಧಾನ್ಯವನ್ನು ಸೇವಿಸಿದರೆ ಕರುಳು ಹಾಳಾಗುತ್ತದೆ.  ದೇಹದಲ್ಲಿ ಟಾಕ್ಸಿನ್ ಹೆಚ್ಚಲು ಪ್ರಾರಂಭಿಸುತ್ತದೆ.

4 /5

ಕರಿದ ಆಹಾರವು ಆವುದೇ ಕಾರಣಕ್ಕೂ ಆರೋಗ್ಯಕರವಲ್ಲ.  ಇನ್ನು ಕಲ್ಲಂಗಡಿ ತಿಂದ ತಕ್ಷಣ ಅವುಗಳನ್ನು ಸೇವಿಸುವುದರಿಂದ ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

5 /5

ಹೆಚ್ಚಿನ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ಮತ್ತು ಕಲ್ಲಂಗಡಿಗಳನ್ನು ತೆಗೆದುಕೊಳ್ಳುತ್ತಾರೆ, ಇದು ಸರಿಯಾದ ಆಯ್ಕೆಯಲ್ಲ.  (  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)