ಶಿಲ್ಪಾ ಶೆಟ್ಟಿಯ ಫಿಟ್‌ನೆಸ್ ಆ್ಯಪ್‌ಗೆ ಗೂಗಲ್ ಗೌರವ!

ಫಿಟ್‌ನೆಸ್ ಐಕಾನ್ ಶಿಲ್ಪಾ ಶೆಟ್ಟಿಯವರ ಫಿಟ್‌ನೆಸ್ ಆ್ಯಪ್‌ ಜನರಿಗೆ ಆರೋಗ್ಯಕರ ಸಲಹೆಗಳನ್ನು ನೀಡುತ್ತಾ ದೊಡ್ಡ ಯಶಸ್ಸನ್ನೂ ಗಳಿಸಿದೆ.

  • Dec 06, 2019, 14:11 PM IST

ನವದೆಹಲಿ: ನಟಿ ಶಿಲ್ಪಾ ಶೆಟ್ಟಿ(Shilpa Shetty) ಅವರ ಫಿಟ್‌ನೆಸ್ ಅಪ್ಲಿಕೇಶನ್ 'ಶಿಲ್ಪಾ ಶೆಟ್ಟಿ ಆ್ಯಪ್‌' 2019 ರ ಗೂಗಲ್ ಪ್ಲೇನ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ 'ವೈಯಕ್ತಿಕ ಬೆಳವಣಿಗೆ' ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಶಿಲ್ಪಾ ಗುರುವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ  ಅಭಿಮಾನಿಗಳೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

1 /5

"ಎಂತಹ ಅದ್ಭುತ ಗೌರವ. ನಮ್ಮ ಶಿಲ್ಪಶೆಟ್ಟಿ ಆ್ಯಪ್ ಗೂಗಲ್‌ಪ್ಲೇನ ಅತ್ಯುತ್ತಮ ಅಪ್ಲಿಕೇಶನ್‌ಗಳ 2019 ರ 'ವೈಯಕ್ತಿಕ ಬೆಳವಣಿಗೆ' ವಿಭಾಗದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದೆ. ಈ ವರ್ಷದ ಅಂತ್ಯಕ್ಕೆ ಇದಕ್ಕಿಂತ ಉತ್ತಮ ಸುದ್ದಿ ಬರಲು ಸಾಧ್ಯವಿಲ್ಲ" ಎಂದು ಶಿಲ್ಪಾ ಬರೆದಿದ್ದಾರೆ.

2 /5

ಅಪ್ಲಿಕೇಶನ್ಗೆ ತುಂಬಾ ಪ್ರೀತಿ ಮತ್ತು ನಿರಂತರ ಬೆಂಬಲವನ್ನು ತೋರಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಇದು ನಿಜವಾಗಿಯೂ ಮುಖ್ಯವಾಗಿದೆ. ಮುಂಬರುವ ವರ್ಷ ಇನ್ನೂ ಉತ್ತಮವಾಗಲಿದೆ ಎಂದು ಅವರು  ಭರವಸೆ ನೀಡಿದ್ದಾರೆ.

3 /5

ಶಿಲ್ಪಾ ಶೆಟ್ಟಿ ತನ್ನ ಆ್ಯಪ್‌ನಲ್ಲಿ ಫಿಟ್‌ನೆಸ್ ಜ್ಞಾನವನ್ನು ನೀಡುವುದಲ್ಲದೆ, ಫಿಟ್‌ನೆಸ್ ಮಂತ್ರವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.

4 /5

12 ವರ್ಷಗಳ ಸುದೀರ್ಘ ಅಂತರದ ನಂತರ ಶಿಲ್ಪಾ ಶೆಟ್ಟಿ ಬಾಲಿವುಡ್‌ಗೆ ಪ್ರವೇಶಿಸಲಿದ್ದಾರೆ.

5 /5

ಅವರು ಮುಂಬರುವ 'ನಿಕಮ್ಮ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಲಖನೌದಲ್ಲಿ ನಡೆಯುತ್ತಿದೆ. (ಇನ್‌ಪುಟ್ ಐಎಎನ್‌ಎಸ್‌ನಿಂದಲೂ ಸಹ) ಎಲ್ಲಾ ಫೋಟೋಗಳ ಕೃಪೆ: INSTAGRAM@theshilpashetty