Shani Gochar: 2024ರಲ್ಲಿ ಮೂರು ಬಾರಿ ಪಥ ಬದಲಿಸಲಿರುವ ಶನಿ, ಈ ರಾಶಿಯವರಿಗೆ ಸುವರ್ಣ ಯುಗ

Shani Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. 2024ರಲ್ಲಿ ಶನಿಯು ಮೂರು ಬಾರಿ ತನ್ನ ಪಥ ಬದಲಾಯಿಸಲಿದ್ದು ಕೆಲವು ರಾಶಿಯವರ ಭಾಗ್ಯ ಬೆಳಗಳಿದ್ದಾನೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಶನಿ ಮಹಾತ್ಮ:  ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನನ್ನು ಕರ್ಮಫಲದಾತ, ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. 2024ರಲ್ಲಿ ಶನಿಯ ಸ್ಥಾನದ ದೃಷ್ಟಿಯಿಂದ ತುಂಬಾ ವಿಶೇಷವಾಗಿರಲಿದೆ ಎಂದು ಹೇಳಲಾಗುತ್ತಿದೆ. 

2 /8

ಶನಿ ಸಂಚಾರ:  ವಾಸ್ತವವಾಗಿ, 30 ವರ್ಷಗಳ ಬಳಿಕ ಈ ವರ್ಷದ ಆರಂಭದಲ್ಲಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ದೇವನು ಮುಂದಿನ ವರ್ಷ ಎಂದರೆ 2024ರಲ್ಲಿ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುವುದಿಲ್ಲ. ಆದರೆ, ಮೂರು ಬಾರಿ ತನ್ನ ಪಥವನ್ನು ಬದಲಾಯಿಸಲಿದ್ದಾನೆ. 

3 /8

2024ರಲ್ಲಿ ಮೂರು ಬಾರಿ ಶನಿ ಪಥ ಬದಲಾವಣೆ: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2024ರಲ್ಲಿ ಶನಿಯ ಸ್ಥಾನದಲ್ಲಿ ಮೂರು ಬಾರಿ ಬದಲಾವಣೆ ಕಂಡು ಬರಲಿದೆ. 

4 /8

2024ರಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ:  * ಮೊದಲನೆಯದಾಗಿ, ಶನಿಯು 11 ಫೆಬ್ರವರಿ 2024 ರಂದು ಕುಂಭ ರಾಶಿಯಲ್ಲಿ ಅಸ್ತಮಿಸಲಿದೆ.  * ಬಳಿಕ ಶನಿ ಮಾರ್ಚ್ 18, 2024 ರಂದು, ಅದೇ ರಾಶಿಯಲ್ಲಿ ಉದಯಿಸಲಿದ್ದಾನೆ.  *  ನಂತರ, ಜೂನ್ 29, 2024 ರಂದು ಶನಿ ದೇವನ ಹಿಮ್ಮುಖ ಚಾಲನೆ ಆರಂಭವಾಗಲಿದೆ. 

5 /8

ಶನಿ ಸಂಚಾರ ಬದಲಾವಣೆ ಪ್ರಭಾವ:  ಶನಿ ಸಂಚಾರ ಬದಲಾವಣೆಯ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ ಈ ಸಮಯವನ್ನು ಮೂರು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ. ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

6 /8

ವೃಷಭ ರಾಶಿ:  2024ರಲ್ಲಿ ಶನಿ ಸಂಚಾರದಲ್ಲಿ ಬದಲಾವನೆಯು ವೃಷಭ ರಾಶಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ವೃತ್ತಿ ವ್ಯವಹಾರದಲ್ಲಿ ಯಶಸ್ಸನ್ನು ಕಾಣಬಹುದು. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದ್ದು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.

7 /8

ಸಿಂಹ ರಾಶಿ:  2024ರಲ್ಲಿ ಶನಿ ಪಥ ಬದಲಾವಣೆಯ ಶುಭ ಪರಿಣಾಮಗಳು ಸಿಂಹ ರಾಶಿಯವರ ಮೇಲೂ ಕಂಡು ಬರಲಿದೆ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದು. ಮಾತ್ರವಲ್ಲ, ಯಾವುದೇ ಕೆಲಸ ಕಾರ್ಯಗಳಲ್ಲಿ ಶತ್ರುಗಳ ವಿರುದ್ಧ ಜಯ ಪ್ರಾಪ್ತಿಯಾಗಲಿದೆ. 

8 /8

ಕುಂಭ ರಾಶಿ:  ಮುಂದಿನ ವರ್ಷವೂ ಕುಂಭ ರಾಶಿಯಲ್ಲಿಯೇ ಸಂಚರಿಸಲಿರುವ ಶನಿ ದೇವನು ಈ ರಾಶಿಯವರಿಗೆ ಧನಾತ್ಮಕ ಪರಿಣಾಮಗಳನ್ನು ನೀಡಲಿದ್ದಾನೆ. ಉದ್ಯೋಗ ರಂಗದಲ್ಲಿ ಪ್ರಗತಿಯ ಅವಕಾಶಗಳಿವೆ. 2024ರ ಮಾರ್ಚ್ ನಂತರದ ಸಮಯ ಕುಂಭ ರಾಶಿಯವರಿಗೆ ಅತ್ಯುತ್ತಮವಾಗಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.