Seetha rama kannada serial: ಚಿಕ್ಕ ವಯಸ್ಸಿನಲ್ಲೇ ಬಿಟ್ಟು ಹೋದ ಅಪ್ಪ.. ʼಸೀತಾರಾಮʼ ಸಿಹಿ ರಿಯಲ್ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!!

Seetha rama serial Sihi Real Life: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾ ರಾಮ ಸಿರೀಯಲ್‌ ಹೆಂಗಳೆಯರ ಮನಗೆದ್ದಿದೆ.. ಅಗ್ನಿ ಸಾಕ್ಷಿ ಧಾರವಾಹಿ ನಂತರ ನಟಿ ವೈಷ್ಣವಿ ಗೌಡ ಕಮ್‌ಬ್ಯಾಕ್‌ ಮಾಡಿರೋ ಸಿರೀಯಲ್‌ ಇದು.. ಕೌಟುಂಬಿಕ ಕಥೆಗಳಿಗೆ ಇವರು ಹೇಳಿಮಾಡಿಸಿದಂತಹ ಕಲಾವಿದೆ.. ಸದ್ಯ ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿರುವ ಇದರಲ್ಲಿ ಸಿಹಿ ಪಾತ್ರವೂ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ..

1 /5

ಸೀತಾರಾಮ ಸೀರಿಯಲ್‌ ಇಷ್ಟ ಪಡೋ ಅಭಿಮಾನಿಗಳಲ್ಲಿ ಬಹುತೇಕರು ಸಿಹಿ ಫ್ಯಾನ್ಸ್‌ ಆಗಿದ್ದಾರೆ.. ಆ ಮಟ್ಟಿಗೆ ಈ ಮುದ್ದು ಮುಖದ ಸುಂದರಿ ಮೋಡಿ ಮಾಡಿದ್ದಾರೆ.. ಈಕೆಯ ವಯಸ್ಸು ಕೇವಲ 4.. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ವಿನಯ, ಸರಳತೆ, ವಯಸ್ಸಿಗೂ ಮೀರಿದ ಪಾತ್ರ ಮಾಡುವುದನ್ನು ನೋಡಿದ್ರೆ ಈಕೆ ಸಾಕ್ಷಾತ್‌ ದೇವಿ ಸರಸ್ವತಿಯ ಪುತ್ರಿಯೇ ಅನಿಸುತ್ತೆ..  

2 /5

ಸೀತಾರಾಮ ಸಿರೀಯಲ್‌ನಲ್ಲಿ ಇಷ್ಟು ಮುದ್ದಾಗಿ ಮಾತಾಡೋ ಸಿಹಿಯ ಬದುಕಿನಲ್ಲಿ ದೊಡ್ಡ ಘನಘೋರ ಕಥೆಯಿದೆ.. ಹೌದು! ಧಾರವಾಹಿಯಲ್ಲಿ ನಡೆಯುತ್ತಿರುವ ಘಟನೆಗಳು ಈ ಮಗು ಬಾಳಲ್ಲಿ ನಡೆದು ಹೋಗಿದೆ..  ಸೀರಿಯಲ್‌ನಲ್ಲಿ ಅಪ್ಪನಿಲ್ಲದೇ ತಾಯಿಯ ಮಡಿಲಿನಲ್ಲಿ ಹೇಗೆ ಬೆಳೆಯುತ್ತಿದ್ದಾಳೋ ಹಾಗೇ ನಿಜ ಜೀವನದಲ್ಲೂ ಈಕೆಯ ಪಾಲಿಗೆ ತಂದೆ ಇಲ್ಲ..   

3 /5

 ಮೂಲತಃ ನೇಪಾಳದಿಂದ ಬಂದಿರುವ ಈ ಮುದ್ದು ಗೊಂಬೆ ನಿಜವಾದ ಹೆಸರು ರಿತು ಸಿಂಗ್‌.. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಹುಟ್ಟಿದ ಜಾಗದಲ್ಲಿಯೇ ಇದ್ದರೆ ಬದುಕು ಕಷ್ಟ ಅಂತ ಭಾರತಕ್ಕೆ ಗಂಟು ಮೂಟೆ ಕಟ್ಟಿಕೊಂಡು ಬರುತ್ತಾರೆ.. ದೇಶ ಗೊತ್ತಿಲ್ಲ, ಭಾಷೆ ಗೊತ್ತಿಲ್ಲ..ತಮ್ಮವರು ಅನ್ನೋರಿಲ್ಲ.. ಇಲ್ಲಿ ಬಂದು ರಿತು ತಾಯಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ..   

4 /5

ಇಂದು ಇಷ್ಟೋಂದು ಖುಷಿಯಾಗಿ, ನಗುತ್ತಾ ಮಾತಾಡೋ ರಿತು ಸಿಂಗ್‌ಗೆ ಅಪ್ಪನ ಪ್ರೀತಿಯೇ ಸಿಕ್ಕಿಲ್ಲ.. ಈಕೆ ಮಗು ಇದ್ದಾಗಲೇ ತಂದೆ ಮನೆಬಿಟ್ಟು ಹೋಗಿದ್ದರು.. ಹೀಗಾಗಿ ಅಪ್ಪನನ್ನ ನೋಡಿದ ನೆನಪು ಈ ಬಾಲಿಕಗೆ ಇಲ್ಲ.. ಈ ಮುದ್ದು ಗೊಂಬೆ ಚಿಕ್ಕವಳಿದ್ದಾಗ ಅಪ್ಪ ಬೇಕು ಎಂದು ಹಠ ಮಾಡಿದಾಗ ಅಮ್ಮನಿಗೆ ಏನು ಹೇಳಬೇಕು ಎಂದು ಗೊತ್ತಾಗದೇ ಸುಮ್ಮನಾಗಿ ಬಿಡುತ್ತಿದ್ದರಂತೆ..   

5 /5

ನಂತರ ತಿನ್ನೋಕೆ ಅನ್ನವಿಲ್ಲದ ಕಾರಣ ಸಿಹಿ ಅಲಿಯಾಸ್‌ ರಿತು ತಾಯಿ ಬೆಂಗಳೂರಿನಲ್ಲಿ ಮನೆಕೆಲಸ ಮಾಡುತ್ತಿದ್ದರಂತೆ.. ಅಲ್ಲಿಯೇ ಕೆಲಸ ಮಾಡಿಕೊಂಡು ಈವರೆಗೂ ಅವರು ಮನೆ ನಡೆಸುತ್ತಿದ್ದಾರೆ.. ಸ್ಕ್ರೀನ್‌ ಮೇಲೆ ನಗುತ್ತಾ ಎಲ್ಲರನ್ನು ಮನರಂಜಿಸೋ ಸಿಹಿಗೆ ಖುಷಿಯ ಬದುಕಿಲ್ಲ..