ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?

Actor Rajinikanth: ಖಳನಾಯಕನಾಗಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಆಕಸ್ಮಿಕವಾಗಿ ಎಂಟ್ರಿಕೊಟ್ಟ ರಜನಿಕಾಂತ್‌ ತಮಿಳಿನಲ್ಲಿ ಸಾಲು ಸಾಲು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.. ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಇವರು ಬಣ್ಣದ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.. 
 

1 /5

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನಿಕಾಂತ್‌ ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸದೇ ಇತರೆ ಭಾಷೆಗಳ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.. ಕನ್ನಡ, ತೆಲುಗು, ಮಲಯಾಳಂ, ಭಾಷೆಗಳಲ್ಲಿ ಅಭಿನಯಿಸಿದ ಇವರು ತಮ್ಮದೇ ಆದ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ..    

2 /5

ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಜನಿಕಾಂತ್‌ ಖಳನಾಯಕನಾಗಿ ನಟಿಸುವ ಮೂಲಕ ಜನರಿಗೆ ಪರಿಚಯವಾದರು.. ಅಲ್ಲಿಂದ ಯಶಸ್ಸು ಇವರನ್ನು ಹಿಂಬಾಲಿಸುತ್ತಿದೆ... ಹಾಗಾದ್ರೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ರಜನಿಕಾಂತ್‌ ಕನ್ನಡ ಸಿನಿಮಾರಂಗದಿಂದ ದೂರವಾಗಿದ್ದು ಯಾಕೆ?    

3 /5

ಕನ್ನಡದಲ್ಲಿಯೂ ಸಾಕಷ್ಟು ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ ರಜನಿಕಾಂತ್‌ ಸಿವಿ ರಾಜೇಂದ್ರನ್ ಅವರು ನಿರ್ದೇಶಿಸಿದ ಘರ್ಜನೆ ಎಂಬ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು..    

4 /5

ಈ ಘರ್ಜನೆ ಸಿನಿಮಾದಲ್ಲಿ ನಟ ಮಾಧವಿಗೆ ಜೋಡಿಯಾಗಿ ನಟಿಸಿದ್ದರು.. ಇದು ಕನ್ನಡ, ತಮಿಳು, ಮಲಯಾಳಂ, ಭಾಷೆಯಲ್ಲಿ ನಿರ್ಮಾಣವಾಗಿತ್ತು.. ಈ ಸಿನಿಮಾದಲ್ಲಿ ವೈಧ್ಯರ ಪಾತ್ರದಲ್ಲಿ ನಟಿಸಿ ರಜನಿ ಎಲ್ಲರ ಮನಗೆದ್ದಿದ್ದರು.. ಇದಾದ ನಂತರ ನಟ ರಜನಿಕಾಂತ್‌ ಅವರಿಗೆ ತಮಿಳು ಸಿನಿಮಾಗಳ ಆಫರ್‌ ಹೆಚ್ಚು ಬರಲಾರಂಭಿಸಿದವು.. ಅವರನ್ನು ನೋಡಲೇಂದೇ ಸಿನಿಮಾ ನೋಡುತ್ತಿದ್ದ ಕಾಲವದು..   

5 /5

ಇನ್ನು ಕನ್ನಡ ಸಿನಿರಂಗದಲ್ಲಿ ಆಗ ವಿಷ್ಣುವರ್ಧನ್‌ ಹಾಗೂ ರಾಜ್‌ಕುಮಾರ್‌ ಅವರಂತಹ ದಿಗ್ಗಜ ಕಲಾವಿದರ ಹಾವಳಿ ಇತ್ತು.. ಹೀಗಾಗಿ ನಟ ರಜನಿಕಾಂತ್‌ ತಮಿಳು ಸಿನಿಮಾರಂಗವನ್ನೇ ಆಯ್ಕೆ ಮಾಡಿಕೊಂಡರು.