Puttakkana Makkalu Kannada Serial: ಪುಟ್ಟಕ್ಕನ ಮಕ್ಕಳು ʼಬಡ್ಡಿ ಬಂಗಾರಮ್ಮʼ ಯಾರು ಗೊತ್ತಾ? ಇವರು ನಟಿ ಮಾತ್ರವಲ್ಲ!!

Puttakkana Makkalu Baddi Bangaramma: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಪುಟ್ಟಕ್ಕನ ಮಕ್ಕಳು ಧಾರವಾಹಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ.. ಈ ಸಿರೀಯಲ್‌ನಲ್ಲಿ ಕಂಠಿ ತಾಯಿಯಾಗಿ ನಟಿಸಿರುವ ಬಡ್ಡಿ ಬಂಗಾರಮ್ಮ ನಿಜ್ಜಕೂ ಅಭಿಮಾನಿಗಳ ಫೇವರೆಟ್‌ ಎಂದರೇ ತಪ್ಪಾಗುವುದಿಲ್ಲ.. ಇಷ್ಟು ಖಡಕ್‌ ಆಗಿ ಪಾತ್ರಕ್ಕೆ ಜೀವ ತುಂಬಿರೋ ಈ ನಟಿ ಯಾರು? ಇವರ ಹಿನ್ನಲೆ ಏನು? ಇದರ ಒಂದಷ್ಟು ಮಾಹಿತಿ ಇಲ್ಲಿದೆ..

1 /5

ದಿನದಿಂದ ದಿನಕ್ಕೆ ವಿಭಿನ್ನ ಟ್ವಿಸ್ಟ್‌ಗಳ ಪ್ರೇಕ್ಷಕರ ಮನಗೆಲ್ಲುತ್ತಿರುವ ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಖಡಕ್‌ ಮಾತು, ಮೃದು ಮನಸ್ಸಿನರುವ ಬಡ್ಡಿ ಬಂಗಾರಮ್ಮನ ಪಾತ್ರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.. ಈ ಪಾತ್ರಧಾರಿಯ ಜಿವಾದ ಹೆಸರು ಮಂಜುಭಾಷಿಣಿ..   

2 /5

 ನಟಿ ಮಂಜುಭಾಷಿಣಿ ಮೂಲತಃ ಮಂಗಳೂರಿನವರು.. ಸಿರೀಯಲ್‌ ಮೂಲಕವೇ ಮನೆ ಮಗಳಾದವರು.. ಸುಮಾರು ಮೂರ್ನಾಲ್ಕು ವರ್ಷಗಳಿಂದಲೂ ಕಿರುತೆರೆಯಿಂದ ಹೊರಗುಳಿದಿದ್ದರು.. ಇವರು ಆರೂರು ಜಗದೀಶ್‌ ನಿರ್ದೇಶನದ ಪುಟ್ಟಕ್ಕನ ಮಕ್ಕಳು ಧಾರವಾಹಿ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟರು..   

3 /5

ಈ ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಕಂಠಿ ತಾಯಿಯಾಗಿ ಬಡ್ಡಿ ಬಂಗಾರಮ್ಮನ ಪಾತ್ರ ಮಾಡುತ್ತಿರುವ ಮಂಜುಭಾಷಿನಿ 'ಭೂಮಿಗೀತ' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ... ಆದರೆ ಇದರಿಂದ ಸಿರೀಯಲ್‌ನಿಂದ ಸಿಕ್ಕಷ್ಟು ಜನಪ್ರಿಯತೆ ಅವರಿಗೆ ಸಿಗಲಿಲ್ಲ.. ಗಿರೀಶ್ ಕಾರ್ನಾಡ್‌ ಅವರ ಅಂತರಾಳ ಸಿರೀಯಲ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು.. ಮಾಯಾಮೃಗ ಸಿರೀಯಲ್..‌    

4 /5

ಮನರಂಜನಾ ಲೋಕದಲ್ಲಿ ಮಿಂಚುತ್ತಿರುವ ಮಂಜುಭಾಷಿಣಿ ವೈಯಕ್ತಿಕ ಜೀವನದಲ್ಲೂ ಶ್ರಮ ಜೀವಿಯಾಗಿದ್ದಾರೆ.. ಇವರು ಬರೀ ನಟಿಯಾಗಿರದೇ ಅವರ ಪತಿ ಜೊತೆಗೂಡಿ ಹೊಸತೊಂದು ಕಂಪನಿ ನಡೆಸುತ್ತಿದ್ದಾರೆ..  

5 /5

ಇನ್ನು ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಮುಂಚೂಣಿಯಲ್ಲಿದೆ.. ವಿಭಿನ್ನ ಕಥಾಹಂದರ ಹೊಂದಿದ ಈ ಸಿರೀಯಲ್‌ನಲ್ಲಿ ದೊಡ್ಡ ದೊಡ್ಡ ಕಲಾವಿದರ ಬಳಗವೇ ಇದೆ..