ಏಪ್ರಿಲ್ ಒಂದರಿಂದ ಬದಲಾಗಲಿರುವ PF ನಿಯಮಗಳ ಬಗ್ಗೆ ತಿಳಿಯಿರಿ

ಪಿಎಫ್ ಖಾತೆಗೆ ಸಂಬಂಧಿಸಿದ ನಿಯಮಗಳು ಏಪ್ರಿಲ್ 1 ರಿಂದ ಬದಲಾಗಲಿವೆ.  2.5 ಲಕ್ಷಕ್ಕೂ ಹೆಚ್ಚು ಠೇವಣಿಯನ್ನು  ಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿದರೆ ಅದರ ಮೇಲೆ ಬಡ್ಡಿ ವಿಧಿಸಲಾಗುತ್ತದೆ. 
 

ನವದೆಹಲಿ : ಹೊಸ ಹಣಕಾಸು ವರ್ಷ  (Financial Year 2021-22) ಕೆಲವು ಹೊಸ ನಿಯಮಗಳನ್ನು ತರುತ್ತದೆ. ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮಗಳು ಏಪ್ರಿಲ್ 1 ರಿಂದ ಬದಲಾಗಲಿವೆ. ಇದು EPF (Employee Provident Fund), VPF(Voluntary Provident Fund), PPF  (Public Provident Fund) ಸೇರಿದಂತೆ ಎಲ್ಲಾ ರೀತಿಯ ಭವಿಷ್ಯ ನಿಧಿಗಳನ್ನು ಒಳಗೊಂಡಿರುತ್ತದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ಒಬ್ಬ ವ್ಯಕ್ತಿಯು ವರ್ಷದಲ್ಲಿ ಇಪಿಎಫ್ ಅಥವಾ ಪಿಪಿಎಫ್‌ನಲ್ಲಿ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಠೇವಣಿ ಇಟ್ಟರೆ, ಅದರ ಮೇಲೆ ತೆರಿಗೆ ಸಂಗ್ರಹಿಸುವುದಾಗಿ ಸರ್ಕಾರ ಘೋಷಿಸಿದೆ. 2.5 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗಳ ಮೇಲೆ ಪಡೆದ ಬಡ್ಡಿಗೆ ಸರ್ಕಾರ ತೆರಿಗೆ ವಿಧಿಸುತ್ತದೆ.  

2 /5

 ಭವಿಷ್ಯ ನಿಧಿ (Provident Fund) ಖಾತೆಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಎಲ್ಲರ ಮೇಲೆ ಪರಿಣಾಮ ಬೀರುವುದಿಲ್ಲ. ಈ ನಿಯಮವು 85 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಸಂಬಳ ಪಡೆಯುವ ಜನರ ಮೇಲೆ ಪರಿಣಾಮ ಬೀರಲಿದೆ.

3 /5

 ನಿಯಮಗಳ ಪ್ರಕಾರ, ಮೂಲ ವೇತನದ 12 ಪ್ರತಿಶತವನ್ನು ಉದ್ಯೋಗಿ ಮತ್ತು 12 ಶೇಕಡಾವನ್ನು ಕಂಪನಿಯು ಠೇವಣಿ ಮಾಡುತ್ತದೆ. ನಿಯಮಗಳ ಪ್ರಕಾರ ವ್ಯಕ್ತಿಯ ವಾರ್ಷಿಕ ಪ್ಯಾಕೇಜ್ 10 ಲಕ್ಷ 20 ಸಾವಿರ  ಅಂದರೆ ಮಾಸಿಕ 85 ಸಾವಿರ ರೂಪಾಯಿ  ಎಂದಿದ್ದರೆ ಆಗ ಹೊಸ ನಿಯಮದ ಮೇಲೆ ಪರಿಣಾಮ ಬೀರುವುದಿಲ್ಲ. ಇದು 85 ಸಾವಿರಕ್ಕೂ ಹೆಚ್ಚು ಸಂಬಳ ಹೊಂದಿರುವ ಜನರ ಮೇಲೆ ಪರಿಣಾಮ ಬೀರುತ್ತದೆ.  

4 /5

  ತೆರಿಗೆ ಉಳಿಸುವ ಉದ್ದೇಶದಿಂದ ಇಪಿಎಫ್ ಅಥವಾ ವಿಪಿಎಫ್‌ನಲ್ಲಿ ಹೂಡಿಕೆ ಮಾಡುವವರನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ. ನಿಯಮಗಳ ಪ್ರಕಾರ, ಮೂಲ ವೇತನದ ಶೇಕಡಾ 12 ರಷ್ಟು ಇಪಿಎಫ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಕೆಲವರು ತೆರಿಗೆ ಉಳಿತಾಯ ಮಾಡುವ ಉದ್ದೇಶದಿಂದ ಇಪಿಎಫ್ ಅಥವಾ ವಿಪಿಎಫ್‌ನಲ್ಲಿ ಹೆಚ್ಚಿನ ಹಣವನ್ನು ಠೇವಣಿ ಇಟ್ಟು , ಅದರ ಮೇಲೆ ಉತ್ತಮ ಬಡ್ಡಿಯನ್ನು ಪಡೆಯುತ್ತಾರೆ. ಇಲ್ಲಿಯವರೆಗೆ ಇಪಿಎಫ್ ಅಥವಾ ವಿಪಿಎಫ್‌ನಲ್ಲಿ ಮಾಡುವ ಹೂಡಿಕೆ ಮೇಲೆ ಯಾವುದೇ ತೆರಿಗೆ ವಿಧಿಸುತ್ತಿರಲಿಲ್ಲ. ಆದರೆ ಪ್ರಸಕ್ತ ಹಣಕಾಸು ವರ್ಷದಿಂದ ಈ ನಿಯಮ ಬದಲಾಗಲಿದೆ.   

5 /5

ಏಪ್ರಿಲ್ 1 ರಿಂದ ಜಾರಿಗೆ ಬರುವ ಹೊಸ ನಿಯಮದಲ್ಲಿ, ನೌಕರರ ಠೇವಣಿಗಳ ಮೇಲಿನ ತೆರಿಗೆಯನ್ನು ಮಾತ್ರ ಹೇಳಲಾಗಿದೆ. ಉದ್ಯೋಗದಾತ ಎಂದರೆ ಕಂಪನಿಯು ಹಾಕುವ ಹಣದ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ.  ಯಾಕೆಂದರೆ ಯಾವ  ಕಂಪನಿಯು ನಿಯಮಕ್ಕಿಂತ ಹೆಚ್ಚಿನ ಹಣವನ್ನು ನೌಕರರ ಖಾತೆಗೆ ಜಮೆ ಮಾಡುವುದಿಲ್ಲ.