Mesha Sankranti 2022: ಮೇಷ ಸಂಕ್ರಾಂತಿಯಂದು ಈ ಕೆಲಸ ಮಾಡಿದ್ರೆ ಅದೃಷ್ಟ, ಸಂಪತ್ತು ನಿಮ್ಮದಾಗಲಿದೆ

ಮೇಷ ಸಂಕ್ರಾಂತಿಯು ಸೌರ ಕ್ಯಾಲೆಂಡರ್‌ನ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಸೂರ್ಯ ಸಂಕ್ರಾಂತಿಯಂದು ನದಿಗಳಲ್ಲಿ ಸ್ನಾನ ಮಾಡಿ ದಾನ ಮಾಡುವ ಸಂಪ್ರದಾಯವಿದೆ.

ಸೂರ್ಯನು ಮೇಷ ರಾಶಿಗೆ ಆಗಮಿಸಿದಾಗ ಅದನ್ನು ಮೇಷ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ಬಾರಿ ಮೇಷ ಸಂಕ್ರಾಂತಿಯನ್ನು ಏಪ್ರಿಲ್ 14 ರಂದು ಗುರುವಾರ ಆಚರಿಸಲಾಗುವುದು. ಮೇಷ ಸಂಕ್ರಾಂತಿಯು ಸೌರ ಕ್ಯಾಲೆಂಡರ್‌ನ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಸೂರ್ಯ ಸಂಕ್ರಾಂತಿಯಂದು ನದಿಗಳಲ್ಲಿ ಸ್ನಾನ ಮಾಡಿ ದಾನ ಮಾಡುವ ಸಂಪ್ರದಾಯವಿದೆ. ಸೂರ್ಯನ ಆರಾಧನೆ ಮಾಡುವುದರಿಂದ ಸಂತೋಷ, ಸಮೃದ್ಧಿ, ಐಶ್ವರ್ಯ, ಸಂಪತ್ತು, ಅದೃಷ್ಟ, ವೈಭವ, ಕೀರ್ತಿ, ಗೌರವ, ಶಕ್ತಿ, ಸಂಪತ್ತು ಮತ್ತು ಯಶಸ್ಸನ್ನು ಪಡೆಯಬಹುದು ಎನ್ನುವ ನಂಬಿಕೆಯಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಸಂಕ್ರಾಂತಿಯ ದಿನದಂದು ಬೆಲ್ಲವನ್ನು ದಾನ ಮಾಡುವುದರಿಂದ ದೈಹಿಕ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ. ಅದೇ ರೀತಿ ಪ್ರತಿ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.

2 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇಳೆಕಾಳು ಸೂರ್ಯ ಮತ್ತು ಶನಿಗೆ ಸಂಬಂಧಿಸಿದೆ. ಸೂರ್ಯ ಸಂಕ್ರಾಂತಿಯ ದಿನದಂದು ಬೇಳೆಯನ್ನು ಸೇವಿಸುವುದು ಅಥವಾ ದಾನ ಮಾಡುವುದು ಲಾಭದಾಯಕ. ಹೀಗೆ ಮಾಡುವುದರಿಂದ ಜಾತಕದಲ್ಲಿ ಸೂರ್ಯನು ಬಲಶಾಲಿಯಾಗುತ್ತಾನೆ. ಇದು ಉದ್ಯೋಗದಲ್ಲಿ ಬಡ್ತಿಗೆ ಕಾರಣವಾಗುತ್ತದೆ.

3 /5

ಮೇಷ ಸಂಕ್ರಾಂತಿಯ ದಿನದಂದು ಕಡಲೆ ದಾನ ಮಾಡುವುದು ಸಹ ಲಾಭದಾಯಕವೆಂದು ಪರಿಗಣಿಸಲಾಗಿದೆ. ಇದಲ್ಲದೇ ಕಡಲೆ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

4 /5

ಮೇಷ ಸಂಕ್ರಾಂತಿಯಂದು ಫ್ಯಾನ್‌ಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಬಿದಿರಿನಿಂದ ಮಾಡಿದ ಫ್ಯಾನ್ ಬೇಸಿಗೆಯ ದಿನಗಳಲ್ಲಿ ತಂಪು ನೀಡುತ್ತದೆ. ಹಿಂದೆ ಜನರು ಬಿದಿರಿನ ಫ್ಯಾನ್‌ಗಳನ್ನು ದಾನವಾಗಿ ನೀಡುತ್ತಿದ್ದರು.

5 /5

ಮೇಷ ಸಂಕ್ರಾಂತಿಯ ವಿಶೇಷ ದಿನದಂದು ನೀರಿನ ಪಾತ್ರೆಗಳು ಅಥವಾ ನೀರಿನ ಬಾಟಲಿಗಳನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ನೀರು ತುಂಬಿದ ಹೂಜಿಯನ್ನು ದಾನ ಮಾಡುವ ವ್ಯಕ್ತಿಗೆ ಚಿನ್ನವನ್ನು ದಾನ ಮಾಡಿದಷ್ಟೇ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.  (ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)