ಒಂದು ಕಾಲದಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಈ ನಟ ಇದೀಗ ಸಿನಿಮಾವೊಂದಕ್ಕೆ 100 ರೂ. ಕೋಟಿ ಪಡೆಯುತ್ತಾರೆ..!

Ajith kumar net worth : ಒಂದು ಕಾಲದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈ ನಟ ಈಗ ಸೌತ್‌ ಸಿನಿರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಅಷ್ಟೇ ಅಲ್ಲ ಹೊಟ್ಟೆ ತುಂಬಾ ಊಟಕ್ಕೂ ಪರದಾಡುತ್ತಿದ್ದ ನಟ ಈಗ 22 ಲಕ್ಷ ರೂ. ಬೆಲೆ ಬಾಳುವ ಬೈಕ್ ಓಡಿಸುತ್ತಾರೆ.. ತುಂಬಾ ಕಷ್ಟದ ಹಿನ್ನೆಲೆಯಿಂದ ಬಂದ ಈ ಸಿಂಪಲ್ ನಟ ತಮಿಳು ಚಿತ್ರರಂಗದಲ್ಲಿ ಸ್ಟಾರ್ ಹೀರೋ.. ಯಾರದು..? ಬನ್ನಿ ತಿಳಿಯೋಣ..
 

Ajith kumar life history : ನಾವು ಹೇಳುತ್ತಿರುವುದು ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ತಲಾ ಅಜಿತ್ ಅವರ ಬಗ್ಗೆ. ಯಾವುದೇ ಆಡಂಬರ, ಶ್ರೀಮಂತಿಗೆ ಅಹಂ ಇಲ್ಲ, ತುಂಬ ಸರಳವಾಗಿ ಅಜಿತ್‌ ಜೀವಿಸಲು ಇಷ್ಟಪಡುತ್ತಾರೆ. ಅಲ್ಲದೆ, ಆಗಾಗ, ತಮ್ಮ ಟೀಂ ಜೊತೆ ಬೈಕ್‌ನಲ್ಲಿ ಟ್ರೀಪ್‌ ಹೋಗುತ್ತಾರೆ. ಮುಖ್ಯ ವಿಷಯವೇನೆಂದರೆ.. ಅಜಿತ್‌ ಸಾಮಾಜಿಕ ಜಾಲತಾಣಗಳಿಂದ ತುಂಬಾ ದೂರ ಉಳಿದಿದ್ದಾರೆ.
 

1 /7

2001 ರಲ್ಲಿ ಅಜಿತ್ ಅವರಿಗೆ ಅವರ ಅಭಿಮಾನಿಗಳು ತಲಾ ಎಂಬ ಬಿರುದನ್ನು ನೀಡಿದರು. ಆದರೆ 2021ರಲ್ಲಿ ಅಜಿತ್ ಆ ಶೀರ್ಷಿಕೆಯನ್ನು ತಿರಸ್ಕರಿಸಿದ್ದರು. ಇನ್ನು ಮುಂದೆ ಅಭಿಮಾನಿಗಳಾಗಲಿ, ಮಾಧ್ಯಮಗಳಾಗಲಿ ನನ್ನನ್ನು ತಲಾ ಎಂದು ಕರೆಯಬೇಡಿ ಮತ್ತು ನನ್ನ ಹೆಸರಿನ ಮುಂದೆ ಯಾವುದೇ ಬಿರುದುಗಳು ಬೇಡ ಎಂದು ತಮ್ಮ ಹೆಸರಿನಿಂದ ತಾಲಾ ಬಿರುದನ್ನು ತೆಗೆದುಹಾಕಿದರು.  

2 /7

10ನೇ ತರಗತಿಯಲ್ಲಿ ಶಾಲೆ ಬಿಟ್ಟಿದ್ದ ನಟ ಕುಟುಂಬದ ಸ್ನೇಹಿತರೊಬ್ಬರ ನೆರವಿನಿಂದ ರಾಯಲ್ ಎನ್‌ಫೀಲ್ಡ್ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿ ಸೇರಿಕೊಂಡರು. ಅಲ್ಲಿ ಆರು ತಿಂಗಳು ತರಬೇತಿ ಪಡೆದರು. ಆದರೆ, ತಂದೆ ಒಳ್ಳೆಯ ಕೆಲಸ ಮಾಡುವಂತೆ ಕೇಳಿಕೊಂಡರು. ಅಜಿತ್ ಮೆಕ್ಯಾನಿಕ್ ಕೆಲಸ ಬಿಟ್ಟರು. ಇನ್ನೊಬ್ಬ ಕುಟುಂಬದ ಸ್ನೇಹಿತನು ಗಾರ್ಮೆಂಟ್ ರಫ್ತು ಸಂಸ್ಥೆಯಲ್ಲಿ ಅಪ್ರೆಂಟಿಸ್ ಆಗಿ ಸೇರಿಕೊಂಡ. ಕ್ರಮೇಣ ವ್ಯಾಪಾರ ಉತ್ತಮವಾಗತೊಡಗಿತು. ಮಾರಾಟಕ್ಕಾಗಿ ದೇಶಾದ್ಯಂತ ಪ್ರಯಾಣಿಸಿದರು. ಈ ಪ್ರಯಾಣದ ಸಮಯದಲ್ಲಿ ಅವರು ತಮ್ಮ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಸುಧಾರಿಸಿಕೊಂಡರು.  

3 /7

ನಟ ಅಜಿತ್ ಕೂಡ ಇತರ ಮೂವರು ಪಾಲುದಾರರೊಂದಿಗೆ ಜವಳಿ ವ್ಯಾಪಾರವನ್ನು ಪ್ರಾರಂಭಿಸಿದರು. ಆದರೆ ವ್ಯಾಪಾರ ಸರಿಯಾಗಿ ನಡೆಯದೆ ಅಜಿತ್ ಬೇರೆ ಕೆಲಸ ಹುಡುಕಬೇಕಾಯಿತು. ಈ ಸಮಯದಲ್ಲಿ, ಅಜಿತ್ ತಮ್ಮ ಕೆಲಸದ ಜೊತೆಗೆ ಮಾಡೆಲಿಂಗ್ ಅನ್ನು ಪ್ರಾರಂಭಿಸಿದರು. ಸೈಕಲ್ ಮತ್ತು ಮೋಟಾರ್ ಕಂಪನಿಯ ವಾಣಿಜ್ಯ ಜಾಹೀರಾತಿನಲ್ಲಿ ನಟಿಸಲು ಒಪ್ಪಿಕೊಂಡರು.  

4 /7

ಜಾಹೀರಾತಿನ ಚಿತ್ರೀಕರಣದ ವೇಳೆ ಸಿನಿಮಾಟೋಗ್ರಾಫರ್ ಕಮ್ ಡೈರೆಕ್ಟರ್ ಪಿ.ಸಿ. ಶ್ರೀರಾಮ್ ಅವರ ಪ್ರತಿಭೆಯನ್ನು ಗುರುತಿಸಿ ಚಿತ್ರಕ್ಕೆ ಆಹ್ವಾನಿಸಿದರು. ಅವರ ಸಲಹೆಯ ಮೇರೆಗೆ ಅಜಿತ್ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. 'ಎನ್ ವೀಡು ಎನ್ ಕನವರ್' (1990) ಚಲನಚಿತ್ರದೊಂದಿಗೆ ತಲಾ ಬಿಗ್‌ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟರು. ಅಜಿತ್ ಈ ಸಿನಿಮಾದಲ್ಲಿ ಕೇವಲ ಒಂದು ನಿಮಿಷ ಮಾತ್ರ ನಟಿಸಿದ್ದರು. 2,500 ರೂ ಸಂಭಾವನೆ ಪಡೆದಿದ್ದರು. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದಾರೆ.   

5 /7

ಈಗಾಗಲೇ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ಅನೇಕ ಹಿಟ್‌ಗಳು ಮತ್ತು ಸೂಪರ್ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಆರಂಭದ ದಿನಗಳಲ್ಲಿ ಹಲವು ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಿದ್ದಾರೆ. ʼಆಸೈʼ ಎಂಬ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದ ಮೂಲಕ ನಾಯಕ ನಟನಾಗಿ ವೃತ್ತಿ ಜೀವನ ಪ್ರಾರಂಭಿಸಿದರು.  

6 /7

ಈ ಸಿನಿಮಾ ಸೂಪರ್ ಹಿಟ್ ಆಯಿತು. ಅಂದಿನಿಂದ ತಲಾ ಹಿಂತಿರುಗಿ ನೋಡಲಿಲ್ಲ. ʼಆರಂಭಂ', ʼವೀರಂ', ʼವೇದಾಲಂ' ಸೇರಿದಂತೆ ಹಲವು ಸಿನಿಮಾಗಳು 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿವೆ. ಆ ಚಿತ್ರಗಳ ಮೂಲಕ ಅಜಿತ್ ಕುಮಾರ್ ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡರು.  

7 /7

ಇಂದು ತಮಿಳು ಚಿತ್ರರಂಗದಲ್ಲಿ ರೂ.100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕೆಲವೇ ಕೆಲವು ನಟರಲ್ಲಿ ಅಜಿತ್ ಕುಮಾರ್ ಒಬ್ಬರು. ಕೆಲವು ವರದಿಗಳ ಪ್ರಕಾರ, ಈ ತಲಾ ಒಂದು ಚಿತ್ರಕ್ಕೆ ರೂ.104 ಕೋಟಿ ಗಳಿಸುತ್ತಾರೆ ಎನ್ನಲಾಗಿದೆ.. ತಮಿಳಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಇತರ ನಟರೆಂದರೆ ರಜನಿಕಾಂತ್ ರೂ.150-210 ಕೋಟಿ, ಕಮಲ್ ಹಾಸನ್ ರೂ.100-150 ಕೋಟಿ, ವಿಜಯ್ ರೂ.130-200 ಕೋಟಿ.