Jacqueline Fernandez: ಜಾಕ್ವೆಲಿನ್ ಫರ್ನಾಂಡಿಸ್ ಐಷಾರಾಮಿ ಜೀವನ ಹೇಗಿದೆ ಗೊತ್ತಾ?

Jacqueline Fernandez Lifestyle: ಜಾಕ್ವೆಲಿನ್ ಫರ್ನಾಂಡಿಸ್ ಒಂದು ದಶಕಕ್ಕೂ ಹೆಚ್ಚು ಕಾಲ ಚಿತ್ರೋದ್ಯಮದಲ್ಲಿದ್ದಾರೆ. ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಐಷಾರಾಮಿ ಜೀವನ ನಡೆಸುತ್ತಾರೆ.  

Jacqueline Fernandez Lifestyle: ಜಾಕ್ವೆಲಿನ್ ಫರ್ನಾಂಡಿಸ್ ಒಂದು ದಶಕಕ್ಕೂ ಹೆಚ್ಚು ಕಾಲ ಚಿತ್ರೋದ್ಯಮದಲ್ಲಿದ್ದಾರೆ. ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಐಷಾರಾಮಿ ಜೀವನ ನಡೆಸುತ್ತಾರೆ. ಜಾಕ್ವೆಲಿನ್ ಫರ್ನಾಂಡೀಸ್ ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಐದು ಬೆಡ್‌ ರೂಂ ಇರುವ ಡ್ಯುಪ್ಲೆಕ್ಸ್‌ ಹೌಸ್‌ನಲ್ಲಿ ವಾಸಿಸುತ್ತಾರೆ. ಅವರು ಈ ಮನೆಯ ಫೋಟೋಗಳನ್ನು ಅನೇಕ ಬಾರಿ ಹಂಚಿಕೊಂಡಿದ್ದಾರೆ. Instagram ನಲ್ಲಿ ಹಂಚಿಕೊಂಡ ಅನೇಕ ಚಿತ್ರಗಳಲ್ಲಿ, ಈ ಐಷಾರಾಮಿ ಮನೆಯ ನೋಟವು ಸ್ಪಷ್ಟವಾಗಿ ಗೋಚರಿಸುತ್ತದೆ. 

1 /5

ಜಾಕ್ವೆಲಿನ್ ಫರ್ನಾಂಡೀಸ್ ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಐದು ಬೆಡ್‌ ರೂಂ ಇರುವ ಡ್ಯುಪ್ಲೆಕ್ಸ್‌ ಹೌಸ್‌ನಲ್ಲಿ ವಾಸಿಸುತ್ತಾರೆ. ಅವರು ಈ ಮನೆಯ ಫೋಟೋಗಳನ್ನು ಅನೇಕ ಬಾರಿ ಹಂಚಿಕೊಂಡಿದ್ದಾರೆ. Instagram ನಲ್ಲಿ ಹಂಚಿಕೊಂಡ ಅನೇಕ ಚಿತ್ರಗಳಲ್ಲಿ, ಈ ಐಷಾರಾಮಿ ಮನೆಯ ನೋಟವು ಸ್ಪಷ್ಟವಾಗಿ ಗೋಚರಿಸುತ್ತದೆ. 

2 /5

ಜಾಕ್ವೆಲಿನ್ ಫರ್ನಾಂಡೀಸ್ ಅವರ ಈ ಮನೆಯ ಬೆಲೆ 7 ಕೋಟಿ ಮತ್ತು ಸಮುದ್ರ ತಟದಲ್ಲಿರುವ ಈ ಬಂಗಲೆ ನಿಜವಾಗಿಯೂ ಸುಂದರವಾಗಿದೆ. ವಿಶೇಷವೆಂದರೆ ನಿಕ್ ಜೋನಾಸ್ ಅವರನ್ನು ಮದುವೆಯಾಗುವ ಮುನ್ನ ಪ್ರಿಯಾಂಕಾ ಚೋಪ್ರಾ ಇದೇ ಮನೆಯಲ್ಲಿ ವಾಸವಾಗಿದ್ದರು. ಈ ಮನೆ ಮುಂಬೈನ ಜುಹುದಲ್ಲಿದೆ, ಇದು ಮುಂಬೈನ ಐಷಾರಾಮಿ ಪ್ರದೇಶವಾಗಿದೆ. 

3 /5

ಮನೆಯ ಹೊರತಾಗಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಈ ಕಾರಣಕ್ಕಾಗಿಯೇ ಜಾಕ್ವೆಲಿನ್‌ ಬಳಿ ಕೋಟಿಗಟ್ಟಲೆ ಬೆಲೆಯ ಕಾರುಗಳಿವೆ. ಅವರ ಕಾರು ಸಂಗ್ರಹದಲ್ಲಿ 1.86 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಎಸ್ 500, 24 ಲಕ್ಷ ರೂ. ಮೌಲ್ಯದ ರೇಂಜ್ ರೋವರ್ ವೋಗ್, 2.26 ಕೋಟಿ ರೂ. ಮೌಲ್ಯದ ಜೀಪ್ ಕಂಪಾಸ್ ಸೇರಿವೆ. 

4 /5

ಇದಲ್ಲದೆ, 72 ಲಕ್ಷ ಮೌಲ್ಯದ BMW ಮತ್ತು 75 ಲಕ್ಷದ ಹಮ್ಮರ್ H2 ಸಹ ಅವರ ಗ್ಯಾರೇಜ್‌ನಲ್ಲಿವೆ. ಈ ಐಷಾರಾಮಿ ಕಾರುಗಳು ಜಾಕ್ವೆಲಿನ್ ಅವರ ಕಾರು ಸಂಗ್ರಹವನ್ನು ಇನ್ನಷ್ಟು ವಿಶೇಷವಾಗಿಸಿವೆ. ಮತ್ತೊಂದೆಡೆ, ಜಾಕ್ವೆಲಿನ್ ಗಳಿಕೆಯ ಬಗ್ಗೆ ಹೇಳುವುದಾದರೆ, ಅವರ ಗಳಿಕೆ ಕೂಡ ಕೋಟಿಗಳಲ್ಲಿದೆ. 

5 /5

ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರವೊಂದಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಅವರು ಜಾಹೀರಾತುಗಳ ಮೂಲಕ ಸಾಕಷ್ಟು ಗಳಿಸುತ್ತಾರೆ. ಇದಲ್ಲದೇ ಜಾಕ್ವೆಲಿನ್ 2 ರೆಸ್ಟೋರೆಂಟ್ ಗಳ ಒಡತಿಯೂ ಹೌದು. ಅವರು ಮುಂಬೈನಲ್ಲಿ ಒಂದು ರೆಸ್ಟೋರೆಂಟ್ ಅನ್ನು ಹೊಂದಿದ್ದಾರೆ, ಆದರೆ ಮಾಧ್ಯಮ ವರದಿಗಳ ಪ್ರಕಾರ, ಅವರ ಎರಡನೇ ರೆಸ್ಟೋರೆಂಟ್ ಶ್ರೀಲಂಕಾದಲ್ಲಿದೆ.