PPF Account: ನಿಮ್ಮ ಪಿ‌ಪಿ‌ಎಫ್ ಖಾತೆ ಬಂದ್ ಆಗಿದೆಯೇ? ಇಂದೇ ಈ ಕೆಲಸ ಮಾಡಿ, ಇಲ್ಲವೇ ಭಾರೀ ನಷ್ಟ

PPF Account: ಸಣ್ಣ ಉಳಿತಾಯದ ಬಗ್ಗೆ ಯೋಚಿಸುವವರಿಗೆ ಪಿ‌ಪಿ‌ಎಫ್ ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ. ಪಿ‌ಪಿ‌ಎಫ್ ಖಾತೆಯಲ್ಲಿ ಪ್ರಸ್ತುತ ವಾರ್ಷಿಕ 7.1 % ಬಡ್ಡಿಯನ್ನು ನೀಡಲಾಗುತ್ತಿದೆ. ಈ ಖಾತೆ ಬಂದ್ ಆಗಿದ್ದರೆ ಶೀಘ್ರದಲ್ಲೇ ಈ ಒಂದು ಕೆಲಸ ಮಾಡುವುದು ತುಂಬಾ ಅವಶ್ಯಕ. ಇಲ್ಲದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಪಿ‌ಪಿ‌ಎಫ್ ಖಾತೆಯಲ್ಲಿ ಪ್ರಸ್ತುತ ವಾರ್ಷಿಕ 7.1 % ಬಡ್ಡಿಯನ್ನು ನೀಡಲಾಗುತ್ತಿದೆ.   ಈ ಖಾತೆಯಲ್ಲಿ ಹೂಡಿಕೆ ಮಾಡುವ ಮೂಲಕ ಫಾರ್ಮ್ 80ಸಿ ಅಡಿಯಲ್ಲಿ ವಾರ್ಷಿಕ ಆದಾಯದ 1.5 ಲಕ್ಷದವರೆಗೆ ತೆರಿಗೆ ಉಳಿಸಬಹುದು.  

2 /5

ಪ್ರತಿ ಆರ್ಥಿಕ ವರ್ಷದಲ್ಲಿ ಪಿ‌ಪಿ‌ಎಫ್ ಖಾತೆಯಲ್ಲಿ ಕನಿಷ್ಠ 500 ರೂ. ಗಳನ್ನಾದರೂ ಹೂಡಿಕೆ ಮಾಡಬೇಕು. ಇಲ್ಲದಿದ್ದರೆ ಖಾತೆಯನ್ನು ಮುಚ್ಚಲಾಗುತ್ತದೆ. 

3 /5

ನೀವು ಪ್ರತಿ ಆರ್ಥಿಕ ವರ್ಷದಲ್ಲಿ ಪಿ‌ಪಿ‌ಎಫ್ ಖಾತೆಯಲ್ಲಿ ಕನಿಷ್ಠ ಮೊತ್ತದ ಹಣವನ್ನು ಠೇವಣಿ ಮಾಡದಿದ್ದರೆ, ಪಿಪಿಎಫ್ ಖಾತೆಯು ನಿಷ್ಕ್ರಿಯೆಗೊಳ್ಳುತ್ತದೆ. ಆದಾಗ್ಯೂ, ಇದರಲ್ಲಿ ನೀವು ಬಡ್ಡಿಯನ್ನು ಪಡಿಯುತ್ತಿರುತ್ತೀರಿ. ಆದರೆ, ಕೆಲವು ಅನಾನುಕೂಲಗಳನ್ನು ಸಹ ಎದುರಿಸಬೇಕಾಗುತ್ತದೆ. 

4 /5

ಪಿ‌ಪಿ‌ಎಫ್ ಖಾತೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500ರೂ.ಗಳನ್ನು ಪಾವತಿಸಲು ವಿಫಲರಾದಲ್ಲಿ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದಾಗಿ ಮೊದಲನೆಯದಾಗಿ ನೀವು ನಿಮ್ಮ ಹೂಡಿಕೆ ಮೇಲೆ ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಖಾತೆಯನ್ನು ಪುನಃ ಚಾಲ್ತಿಗೊಳಿಸಲು ದಂಡ ಪಾವತಿಸಬೇಕಾಗುತ್ತದೆ. 

5 /5

ಯಾವುದೇ ಕಾರಣದಿಂದ ನಿಮ್ಮ ಪಿ‌ಪಿ‌ಎಫ್ ಖಾತೆ ನಿಷ್ಕ್ರಿಯೆಗೊಂಡಿದ್ದರೆ ಅದನ್ನು ಪುನಃ ತೆರೆಯಲು ಲಿಖಿತ  ಅರ್ಜಿ ನೀಡಬೇಕಾಗುತ್ತದೆ. ಜೊತೆಗೆ ವರ್ಷಕ್ಕೆ ಇಷ್ಟು ಎಂಬಂತೆ ನಿಗದಿತ ಮೊತ್ತದ ಹಣವನ್ನು ದಂಡವಾಗಿ ಪಾವತಿಸಿ, ನಿಮ್ಮ ಖಾತೆಯನ್ನು ಮರು ಪ್ರಾರಂಭಿಸಬಹುದು.