Airbus ಅತಿ ದೊಡ್ಡ ಆರ್ಡರ್ ನೀಡಿದ IndiGo, 500 ವಿಮಾನಗಳ ಖರೀದಿಗೆ ಆರ್ಡರ್

Airbus ನೊಂದಿಗೆ ಅತಿ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದ IndiGo, 500 ವಿಮಾನಗಳ ಖರೀದಿಗೆ ಆರ್ಡರ್ ನೀಡಿದೆ.
 

IndiGo Update: ಇಂಡಿಗೋ ವಿಮಾನಯಾನ ಸಂಸ್ಥೆಯು ಏಕಕಾಲದಲ್ಲಿ 500 ವಿಮಾನಗಳಿಗೆ ಖರೀದಿಗಾಗಿ ಏರ್‌ಬಸ್‌ಗೆ ಆರ್ಡರ್ ನೀಡಿದೆ. ಇದು  ಏರ್ಬಸ್ ಗೆ ಏರ್‌ಲೈನ್‌ ನೀಡಿರುವ ಅತಿದೊಡ್ಡ ಆರ್ಡರ್ ಆಗಿದೆ.

 

ಇದನ್ನೂ ಓದಿ-Health Care Tips: ಶರೀರದಲ್ಲಿ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಬಜೆಟ್ ಕ್ಯಾರಿಯರ್ ಇಂಡಿಗೋ ಸೋಮವಾರ ಏರ್‌ಬಸ್‌ನೊಂದಿಗೆ 500 ಕಿರಿದಾದ ದೇಹದ ವಿಮಾನಗಳಿಗೆ ದೊಡ್ಡ ಆರ್ಡರ್ ಅನ್ನು ಪ್ರಕಟಿಸಿದೆ. ಇದು ಏರ್‌ಬಸ್‌ನಲ್ಲಿ ಯಾವುದೇ ಏರ್‌ಲೈನ್‌ನಿಂದ ಮಾಡಿದ ಅತಿದೊಡ್ಡ ಆರ್ಡರ್ ಆಗಿದೆ. ಆದರೆ, ವಿಮಾನಗಳಿಗೆ ಸಂಬಂಧಿಸಿದಂತೆ ನೀಡಿರುವ ಈ ಆದೇಶದ ಹಣಕಾಸು ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.  

2 /5

2. ಈ ವರ್ಷದ ಆರಂಭದಲ್ಲಿ, ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಏರ್ ಇಂಡಿಯಾ ಏರ್‌ಬಸ್ ಹಾಗೂ ಬೋಯಿಂಗ್‌ ಕಂಪನಿಗಳಿಗೆ 470 ವಿಮಾನಗಳಿಗೆ ಆರ್ಡರ್ ಮಾಡಿತ್ತು.  

3 /5

3. ಪ್ರಸ್ತುತ ಇಂಡಿಗೋ ವಿಮಾನಯಾನ ಸಂಸ್ಥೆಯು 300ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದೆ. ಇದೆ ವೇಳೆ ಇದಕ್ಕೂ ಮೊದಲು 480 ವಿಮಾನಗಳಿಗೆ ಆರ್ಡರ್ ಮಾಡಿದೆ, ಅದರ ವಿತರಣೆಯನ್ನು ಇನ್ನೂ ಬಾಕಿ ಇದೆ.  

4 /5

4. ಈ ಕುರಿತು ಹೇಳಿಕೆ ನೀಡಿರುವ ಇಂಡಿಗೊ, "2030-2035 ಕ್ಕೆ 500 ವಿಮಾನಗಳ ಈ ಹೆಚ್ಚುವರಿ ಆರ್ಡರ್ಗಳೊಂದಿಗೆ, ಇಂಡಿಗೋದ ಆರ್ಡರ್ ಗಳು ಪ್ರಸ್ತುತ ಸುಮಾರು 1,000 ವಿಮಾನಗಳದ್ದಾಗಿದೆ, ಮುಂದಿನ ದಶಕದಲ್ಲಿ ಅವುಗಳ ಡಿಲೆವರಿ ಬಾಕಿ ಇನ್ನೂ ಇದೆ" ಎಂದಿದೆ.   

5 /5

5. ಇಂಡಿಗೋ ಏರ್‌ಬಸ್‌ನೊಂದಿಗೆ ಇರಿಸಿರುವ ಆರ್ಡರ್  A320 NEO, A321 NEO ಮತ್ತು A321 XLR ವಿಮಾನಗಳ ಸಮ್ಮಿಶ್ರಣ ಹೊಂದಿದೆ.