ಪೋರ್ನ್ ವಿಡಿಯೋಗಳಿಗೆ ಅಡಿಕ್ಟ್‌ ಆಗಿದ್ದೀರಾ..? ಹೊರಬರಲು ಪ್ರತಿದಿನ ಈ ಕೆಲಸಗಳನ್ನು ಮಾಡಿ

Positive health benefits : ಅಂತರ್ಜಾಲದಿಂದ ಅನುಕೂಲಗಳೂ ಇವೆ, ಅನಾನುಕೂಲಗಳು ಸಹ ಇವೆ. ಅನಾನುಕೂಲಗಳ ಪೈಕಿ ಯುವಕರು ಅಶ್ಲೀಲ ಚಿತ್ರಗಳಿಗೆ ವ್ಯಸನಿಯಾಗಿರುವುದು ಒಂದು ಪ್ರಮುಖ ಅಂಶ. ಪೋರ್ನ್‌ ವಿಡಿಯೋಗಳಿಗೆ ದಾಸರಾಗಿರುವ ಅದೇಷ್ಟೋ ಜನ ಮಾನಸಿಕವಾಗಿ ಕುಗ್ಗುತ್ತಿದ್ದಾರೆ.. ಹಾಗಿದ್ರೆ ಇದರಿಂದ ಹೊರಬರಲು ಇರುವ ಮಾರ್ಗ ಯಾವುದು..? ಬನ್ನಿ ತಿಳಿಯೋಣ.
 

1 /6

ಪೋರ್ನ್ ನೋಡುವುದು ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅಶ್ಲೀಲ ಚಿತ್ರಗಳನ್ನು ಪುರುಷರು, ಮಹಿಳೆಯರು, ಕಿರಿಯರು ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ನೋಡುತ್ತಾರೆ.. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುವುದುನ್ನು ನೆನಪಿನಲ್ಲಿಡಿ..  

2 /6

18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೂ ಸಹ, ಅಶ್ಲೀಲತೆಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಾನಿಕಾರಕವಾಗಿದೆ. ಅಷ್ಟೇ ಅಲ್ಲ, ಧೂಮಪಾನ ಮತ್ತು ಮದ್ಯಪಾನದಂತೆಯೇ ಪೋರ್ನ್ ವೀಕ್ಷಿಸುವುದು ಅನಾರೋಗ್ಯಕರ,. ಆದಷ್ಟು ಬೇಗ ನೀವು ಈ ಕ್ರೂರ ಪ್ರಪಂಚದಿಂದ ಹೊರ ಬಂದರೆ ಉತ್ತಮ..    

3 /6

ನಿಮ್ಮಲ್ಲಿರುವ ಎಲ್ಲಾ ಅಶ್ಲೀಲ ಚಿತ್ರಗಳನ್ನು ಅಳಿಸಿ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಪೇರೆಂಟಲ್ ಲಾಕ್ ಹಾಕುವ ಮೂಲಕ ಇಂಟರ್ನೆಟ್ ಬಳಕೆಯನ್ನು ನಿಯಂತ್ರಿಸಬಹುದು. ಅಲ್ಲದೆ, ಹೆಚ್ಚು ಕಾಲ ಡಿಜಿಟಲ್ ಜೀವನವನ್ನು ನಡೆಸಬೇಡಿ. ಸಾಧ್ಯವಾದಷ್ಟು ಕುಟುಂಬ, ಸ್ನೇಹಿತರ ಜೊತೆ ಕಾಲ ಕಳೆಯಿರಿ..      

4 /6

ಪೋರ್ನ್‌ ವೀಕ್ಷಿಸಲು ನಿಮ್ಮನ್ನು ಪ್ರಚೋದಿಸುವ ಅಂಶಗಳು ಯಾವುವು ಎನ್ನುವುದನ್ನು ಮೊದಲು ಪರಿಗಣಿಸಿ. ಅದು ಹಾಡು, ದೃಶ್ಯ, ವ್ಯಕ್ತಿ ಅಥವಾ ಯುವತಿಯ ಫೋಟೋಗಳೂ ಸಹ ಆಗಿರಬಹುದು. ಒಮ್ಮೆ ನೀವು ನಿಮ್ಮನ್ನು ಪ್ರಚೋದಿಸುವ ವಿಷಯಗಳನ್ನು ಕಂಡುಕೊಂಡರೆ, ಅದರಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳಬಹುದು.    

5 /6

ನೀವು ಪೋರ್ನ್ ನೋಡುವ ಪ್ರಲೋಭನೆಗೆ ಒಳಗಾಗಿದ್ದರೆ ತಕ್ಷಣವೇ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಿರಿ. ಉದಾಹರಣೆಗೆ ಪುಸ್ತಕಗಳನ್ನು ಓದುವುದು, ಯೋಗ ಮಾಡುವುದು, ಮನೆಗೆಲಸ ಮಾಡುವುದು. ನೀವು ಒತ್ತಡವನ್ನು ಅನುಭವಿಸಿದಾಗಲೂ, ಪೋರ್ನ್ ಮೇಲೆ ಕೇಂದ್ರೀಕರಿಸದೆ ಆರೋಗ್ಯಕರ ರೀತಿಯಿಂದ ಅದರಿಂದ ಹೊರ ಬರಲು ಪ್ರಯತ್ನಿಸಿ.  

6 /6

ಅಲ್ಲದೆ, ದೀರ್ಘಕಾಲ ಒಂಟಿಯಾಗಿರುವುದು ಪೋರ್ನ್‌ಗೆ ಅಡಿಕ್ಟ್‌ ಆಗಲು ಕಾರಣವಾಗಬಹುದು. ಆದ್ದರಿಂದ, ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಏಕಾಂಗಿ ಸಮಯವನ್ನು ಕಡಿಮೆ ಮಾಡಿ. ಇವುಗಳಲ್ಲಿ ಯಾವುದೂ ಸಹಾಯ ಮಾಡದಿದ್ದರೆ ತಕ್ಷಣ ಸರಿಯಾದ ವೈದ್ಯಕೀಯ ಸಲಹೆಯನ್ನು ಪಡೆಯಲು, ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.