ತನಗಿಂತ 6 ವರ್ಷ ಹಿರಿಯ ವೈದ್ಯೆ ಮೇಲೆ ಲವ್… ಕಡೆಗೂ ಕಾಡಿಬೇಡಿ ಮದುವೆಯಾದ ಟೀಂ ಇಂಡಿಯಾದ ಸರ್ವಶ್ರೇಷ್ಠ ಬ್ಯಾಟ್ಸ್’ಮನ್ ಇವರೇ!

Sachin Tendulkar–Anjali Tendulkar Love story: ಸಚಿನ್ ತೆಂಡೂಲ್ಕರ್ ವಿಶ್ವದ ಅನೇಕ ಶ್ರೇಷ್ಠ ಬೌಲರ್‌’ಗಳ ವಿರುದ್ಧ ನಿರ್ಭೀತಿಯಿಂದ ಅದ್ಭುತ ಇನ್ನಿಂಗ್ಸ್‌’ಗಳನ್ನು ಆಡಿದವರು. ಇನ್ನು ಇವರ ಲವ್ ಸ್ಟೋರಿ ಯಾವ ಸಿನಿಮಾಗೂ ಕಡಿಮೆ ಇಲ್ಲ. ತನಗಿಂತ 6 ವರ್ಷ ಹಿರಿಯ ವೈದ್ಯೆಯನ್ನು ಪ್ರೀತಿಸಿದ ಮದುವೆಯಾದ ಸಚಿನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

24 ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಆಳಿದ ಸಚಿನ್ ತೆಂಡೂಲ್ಕರ್, ಜೀವನದಲ್ಲಿ ಭಯಪಡುವ ಸಮಯ ಕೂಡ ಬಂದಿತ್ತಂತೆ. ಆದರೆ ಆ ಭಯಕ್ಕೆ ಕಾರಣ ಅಂಜಲಿ ತೆಂಡೂಲ್ಕರ್. ಅಂದಹಾಗೆ ಇಂದು ಮಾದರಿ ಸೆಲೆಬ್ರಿಟಿ ಜೋಡಿಯಾಗಿ ಮಿಂಚುತ್ತಿರುವ ಇವರಿಬ್ಬರು ಮೊದಲ ಭೇಟಿಯಾಗಿದ್ದು ಏರ್‌ಪೋರ್ಟ್‌’ನಲ್ಲಿ.

2 /6

ಅಂಜಲಿ ತನ್ನ ತಾಯಿಯನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲು ಬಂದಾಗ, ಸಚಿನ್ ಕಣ್ಣಿಗೆ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಸಚಿನ್’ಗೆ 17 ವರ್ಷ ವಯಸ್ಸು. ಇಂಗ್ಲೆಂಡ್ ಪ್ರವಾಸದಿಂದ ತವರಿಗೆ ಹಿಂದಿರುಗುತ್ತಿದ್ದ ಸಮಯವದು. ಒಂದೊಮ್ಮೆ ಸಂದರ್ಶನದಲ್ಲಿ, “ಸಚಿನ್ ಅವರನ್ನು ಭೇಟಿಯಾಗುವ ತನಕ ಅವರು ಯಾರೆಂದೇ ನನಗೆ ಗೊತ್ತಿರಲಿಲ್ಲ” ಎಂದು ಅಂಜಲಿ ಹೇಳಿದ್ದರು.

3 /6

2015ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥನ ‘ಪ್ಲೇಯಿಂಗ್ ಇಟ್ ಮೈ ವೇ’ ಬಿಡುಗಡೆ ವೇಳೆ ಅಂಜಲಿ ಒಂದು ಕುತೂಹಲಕಾರಿ ವಿಷಯವನ್ನು ಹೇಳಿದ್ದರು. “ಸಚಿನ್ ನನ್ನನ್ನು ಮೊದಲ ಬಾರಿಗೆ ಮನೆಗೆ ಆಹ್ವಾನಿಸಿದಾಗ ಅವರು ಆತಂಕಗೊಂಡಿದ್ದರು. ಅಷ್ಟೇ ಅಲ್ಲದೆ, ಅವರ ಪೋಷಕರಿಗೆ ನಮ್ಮ ಸಂಬಂಧದ ಬಗ್ಗೆ ತಿಳಿಯಬಾರದು ಎಂದು ನನ್ನನ್ನು ಪತ್ರಕರ್ತೆ ಎಂದು ಪರಿಚಯಿಸಲು ಯೋಜಿಸಿದ್ದರು” ಎಂದಿದ್ದಾರೆ.

4 /6

ಅಂಜಲಿ ತೆಂಡೂಲ್ಕರ್ ಮಾತನಾಡಿ, "ನಾನು ಅವರ ಮನೆಗೆ ಹೋಗಬೇಕು ಎಂದಾಗ ಸಚಿನ್ ಕೊಂಚ ಹಿಂಜರಿದರು. ಹಾಗಾಗಿ ಅವರು ತಮ್ಮ ಮನೆಯಲ್ಲಿದ್ದವರಿಗೆ ನಾನು ಪತ್ರಕರ್ತೆ ಎಂದು ಹೇಳುತ್ತೇನೆ ಎಂದು ಪ್ಲಾನ್ ಮಾಡಿದ್ದರು. ನೀವು ಪತ್ರಕರ್ತೆಯಂತೆ ನಟಿಸಿ, ಏನು ಹೇಳಿದರೂ ಸರಿ ಎಂದಿದ್ದರು. ಹಾಗೆಯೇ ನಾನು ಸಲ್ವಾರ್ ಕಮೀಜ್ ಧರಿಸಿ ಸಚಿನ್ ಮನೆಗೆ ಹೋಗಿದ್ದೆ” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

5 /6

ಅಂದಹಾಗೆ ಅಂಜಲಿ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿದ್ದು, “ನಾವು ಮದುವೆಯಾಗದ ಸಮಯದಲ್ಲಿ ಫೋನ್ ಕರೆ ದರಗಳು ತುಂಬಾ ದುಬಾರಿಯಾಗಿತ್ತು. ಅದಕ್ಕೇ ಸಚಿನ್’ಗೆ ಪತ್ರ ಬರೆಯುತ್ತಿದ್ದೆ. ಮೆಡಿಸಿನ್ ಓದುತ್ತಿದ್ದಾಗ ಕೆಲವೊಮ್ಮೆ ಸಚಿನ್ ಜೊತೆ ಮಾತನಾಡಲು ಕಾಲೇಜಿನಿಂದ ದೂರವಿರುವ ಫೋನ್ ಬೂತ್ ಗೆ ಹೋಗುತ್ತಿದ್ದೆ” ಎಂದಿದ್ದಾರೆ.

6 /6

ಅಂದಹಾಗೆ, ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಅವರಿಗಿಂತ ಸುಮಾರು 6 ವರ್ಷ ದೊಡ್ಡವರು. ಇವರಿಬ್ಬರ ಪ್ರೀತಿಗೆ ವಯಸ್ಸಿನ ಮಿತಿ ಅಡ್ಡಿಯೇ ಆಗಿರಲಿಲ್ಲ. ಇನ್ನು ಅಂಜಲಿ ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಈ ಜೋಡಿ 1995ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿತ್ತು.