ಎಸ್‌ಬಿಐ ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ಲೋನ್ ಪಡೆದಿದ್ದರೆ ಇಲ್ಲಿದೆ ಪ್ರಮುಖ ಮಾಹಿತಿ

                        

ಇತ್ತೀಚೆಗೆ  ದೇಶದ ಅನೇಕ ದೊಡ್ಡ ದೊಡ್ಡ ಬ್ಯಾಂಕ್‌ಗಳು ಎಂಸಿಎಲ್ಆರ್ ಅನ್ನು ಹೆಚ್ಚಿಸಿವೆ. ನೀವು ಸಹ ಹೋಂ ಲೋನ್, ಕಾರ್ ಲೋನ್ ಅಥವಾ ಪರ್ಸನಲ್ ಲೋನ್  ತೆಗೆದುಕೊಂಡಿದ್ದರೆ, ಎಂಸಿಎಲ್ಆರ್ ಅನ್ನು ಹೆಚ್ಚಿಸಿದ ನಂತರ ಬಡ್ಡಿ ದರವು ಹೆಚ್ಚಾಗುವುದು ಖಚಿತ. ಇದು ನಿಮ್ಮ ಇಎಂಐ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸಿವೆ ಎಂಬುದನ್ನು ತಿಳಿಯಲು ಮುಂದೆ ಓದಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /5

ಎಂಸಿಎಲ್ಆರ್ ಎನ್ನುವುದು ಯಾವುದೇ ಬ್ಯಾಂಕಿನ ಆಂತರಿಕ ವೆಚ್ಚಗಳು ಮತ್ತು ವೆಚ್ಚಗಳ ಆಧಾರದ ಮೇಲೆ ಬಡ್ಡಿದರಗಳನ್ನು ನಿಗದಿಪಡಿಸುವ ಮಾನದಂಡವಾಗಿದೆ.

2 /5

ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡ ಎಂಸಿಎಲ್‌ಆರ್ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಂಕ್ ಹೆಚ್ಚಿಸಿದ ದರಗಳು 16 ಏಪ್ರಿಲ್ 2022 ರಿಂದ ಜಾರಿಗೆ ಬಂದಿವೆ.

3 /5

ಆಕ್ಸಿಸ್ ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ. ಏರಿದ ಬಡ್ಡಿದರಗಳು ಏಪ್ರಿಲ್ 18 ರಿಂದ ಜಾರಿಗೆ ಬಂದಿವೆ.ಇದರೊಂದಿಗೆ ಈ ಬ್ಯಾಂಕಿನಿಂದ ಪಡೆಯುವ ಸಾಲವೂ ದುಬಾರಿ ಆಗಿದೆ.

4 /5

ಬ್ಯಾಂಕ್ ಆಫ್ ಬರೋಡಾ ಸಹ ಏಪ್ರಿಲ್ 12 ರಿಂದ 0.05 ರಷ್ಟು ಬಡ್ಡಿದರವನ್ನು ಹೆಚ್ಚಿಸಿದೆ. ಇದರೊಂದಿಗೆ, ನಿಮ್ಮ ಸಾಲದ ಇಎಂಐ ಕೂಡ ಮೊದಲಿಗಿಂತ ಹೆಚ್ಚಾಗಿರುತ್ತದೆ.

5 /5

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಎಪ್ರಿಲ್ 18ರಂದು ಎಂಸಿಎಲ್‌ಆರ್ ಅನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ 0.10) ಹೆಚ್ಚಿಸಿದೆ. ಇದಾದ ನಂತರ ಬ್ಯಾಂಕಿನ ಎಲ್ಲಾ ರೀತಿಯ ಸಾಲಗಳು ದುಬಾರಿಯಾಗಿವೆ.