ಪ್ರಸಿದ್ಧ ಬಾಲಿವುಡ್ ನಟಿಯ ಬಾಲ್ಯದ ಚಿತ್ರ, ಈ ನಟಿ ಯಾರು ಗೊತ್ತೇ!

ಖ್ಯಾತ ಬಾಲಿವುಡ್ ನಟಿ ತನ್ನ ಬಾಲ್ಯದ ಫೋಟೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ ಈ ಚಿತ್ರವನ್ನು ನೋಡುವ ಮೂಲಕ, ಯಾವ ನಟಿಯ ಬಾಲ್ಯದ ಚಿತ್ರ ಎಂದು ನೀವು ಹೇಳಬಲ್ಲಿರಾ?

ನವದೆಹಲಿ: ಬಹುತೇಕ ಬಾಲಿವುಡ್  ತಾರೆಯರು ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ತಮ್ಮದೇ ಆದ ಖಾತೆಯನ್ನು ಹೊಂದಿದ್ದಾರೆ ಮತ್ತು ಅವರು ಈ ಸಾಮಾಜಿಕ ವೇದಿಕೆಯ ಮೂಲಕ ತಮ್ಮ ನೆನಪುಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಏತನ್ಮಧ್ಯೆ, ಬಾಲಿವುಡ್ ನ ಪ್ರಸಿದ್ಧ ನಟಿ ತನ್ನ ಬಾಲ್ಯದ ಫೋಟೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಾಗಾದರೆ ಈ ಚಿತ್ರವನ್ನು ನೋಡುವ ಮೂಲಕ, ಈ ಬಾಲ್ಯದ ಫೋಟೋದಲ್ಲಿ ಕಾಣುವ ಬಾಲಕಿ ಯಾವ ನಟಿ ಎಂದು ನೀವು ಹೇಳಬಲ್ಲಿರಾ? ಈ ಚಿತ್ರದಲ್ಲಿರುವುದು ಬೇರೆ ಯಾರೂ ಅಲ್ಲ ಬಾಲಿವುಡ್ ಹಿರಿಯ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಅವರದು.  ದೊಡ್ಡ ಪರದೆಯ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಸಾರಾ ಅಲಿಖಾನ್ ಸಾಕಷ್ಟು ಜನಪ್ರಿಯವಾಗಿದ್ದಾರೆ.

ಸಾರಾ ಅಲಿಖಾನ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಇದರ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ನಿರಂತರವಾಗಿ  ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ಸಾರಾ ತನ್ನ ಸಹೋದರ ಇಬ್ರಾಹಿಂ ಮತ್ತು ತಾಯಿ ಅಮೃತಾ ಸಿಂಗ್ ಅವರೊಂದಿಗೆ ಹೊಸ ವರ್ಷದ ರಜಾದಿನಗಳನ್ನು ಆಚರಿಸಿದ ನಂತರ ಭಾರತಕ್ಕೆ ಮರಳಿದ್ದಾರೆ. ಕಳೆದ ಹಲವಾರು ದಿನಗಳಿಂದ, ಸಾರಾ ಹೊಸ ವರ್ಷವನ್ನು ಸ್ವಾಗತಿಸಲು ಮಾಲ್ಡೀವ್ಸ್‌ಗೆ ಹೋಗಿದ್ದರು. ಈ ರಜಾದಿನಗಳಲ್ಲಿ ಸಾರಾ ತನ್ನ ಅನೇಕ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಯಿತು. ಸಾರಾ ಅವರ ಬಿಕಿನಿ ಅವತಾರ ಹೊಸ ವರ್ಷದಲ್ಲಿ ಅಂತರ್ಜಾಲದಲ್ಲಿ ಪ್ರಾಬಲ್ಯ ಸಾಧಿಸಿದೆ. ಈಗ ಸಾರಾ ಅವರ ಬಾಲ್ಯದ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

1 /5

ಇನ್‌ಸ್ಟಾಗ್ರಾಮ್‌ನಲ್ಲಿ ಸಾರಾ ಅವರ ಈ ಫೋಟೋ ನೋಡಿದ ಜನರು ಇದು ತೈಮೂರ್ ನ ಫೀಮೇಲ್ ಆವೃತ್ತಿ ಎಂದು ಹೇಳುತ್ತಿದ್ದಾರೆ.

2 /5

ಈ ಹಿಂದೆ, ಸಾರಾ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬೇಬಿ ಫಿಲ್ಟರ್ನೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಇಷ್ಟವಾಯಿತು. ಈ ಫೋಟೋದಲ್ಲಿ ಸಾರಾ ತುಂಬಾ ಮುದ್ದಾಗಿ ಕಾಣುತ್ತಿದ್ದಳು.

3 /5

ಸಾರಾ ಅವರ ವೃತ್ತಿಯ ಬಗ್ಗೆ ಮಾತನಾಡುವುದಾದರೆ 'ಸಾರಾ' ಶೀಘ್ರದಲ್ಲೇ 'ಲವ್ ಆಜ್ ಕಲ್ 2' ಮತ್ತು 'ಕೂಲಿ ನಂ. 1' ಸಿನಿಮಾಗಳಲ್ಲಿ ಕಾನಿಸಿಕೊಳ್ಳಲಿದ್ದಾರೆ.

4 /5

ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ ಇಮ್ತಿಯಾಜ್ ಅಲಿ ಅವರ ಸೂಪರ್ ಹಿಟ್ ಚಿತ್ರ 'ಲವ್ ಆಜ್ ಕಲ್' ಚಿತ್ರದಲ್ಲಿ ಸಾರಾ ಕಾರ್ತಿಕ್ ಆರ್ಯನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. 'ಲವ್ ಆಜ್ ತಕ್ 2' ಚಿತ್ರ 2020 ರ ಫೆಬ್ರವರಿ 14 ರಂದು ಚಿತ್ರಮಂದಿರಗಳಲ್ಲಿ ಬರಲಿದೆ.  

5 /5

 'ಲವ್ ಆಜ್ ಕಲ್ 2' ಚಿತ್ರದ ಬಳಿಕ ಸಾರಾ 'ಕೂಲಿ ನಂ .1' ನಲ್ಲಿ ವರುಣ್ ಧವನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 1 ಮೇ 2020 ರಂದು ಬಿಡುಗಡೆಯಾಗಲಿದೆ. (Photo courtesy: All pictures taken from Sara Ali Khan's Instagram account)