ಯಾವ ಪಥ್ಯವೂ ಬೇಡ ! ದಿನಕ್ಕೊಂದು ಲೋಟ ಈ ತರಕಾರಿ ಜ್ಯೂಸ್ ಕುಡಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್

ಸೋರೆಕಾಯಿ ಅನೇಕ ರೋಗಗಳಿಗೆ ಮದ್ದು. ದೈನಂದಿನ ಆಹಾರದಲ್ಲಿ ಸೋರೆಕಾಯಿಯನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಮತ್ತು ಅನೇಕ ರೋಗಗಳನ್ನು ಗುಣಪಡಿಸುತ್ತದೆ. 

ಬೆಂಗಳೂರು : ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2025 ರ ವೇಳೆಗೆ ಜಗತ್ತಿನಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ 170 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಔಷಧಿಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾದರೂ, ಔಷಧಿಯಿಲ್ಲದೇ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಸೋರೆಕಾಯಿ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ.  ಇದರಲ್ಲಿ 92 ಪ್ರತಿಶತ ನೀರು ಮತ್ತು 8 ಪ್ರತಿಶತ ಫೈಬರ್ ಅಡಗಿದೆ. ಸಕ್ಕರೆ ಮತ್ತು ಗ್ಲೂಕೋಸ್ ಅಂಶವು ತುಂಬಾ ಕಡಿಮೆ ಇರುವುದರಿಂದ ಇದನ್ನು ಮಧುಮೇಹಿಗಳಿಗೆ ಉತ್ತಮ. 

2 /6

ದೈನಂದಿನ ಆಹಾರದಲ್ಲಿ ಸೋರೆಕಾಯಿಯನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಬಹುದು. ಈ ಅಂಶ ಅನೇಕ ಅಧ್ಯಯನಗಳಲ್ಲಿ ಕೂಡಾ ಸಾಬೀತಾಗಿದೆ. 

3 /6

ಇನ್ಸುಲಿನ್ ಹಾರ್ಮೋನ್ ನಿಯಮಿತವಾಗಿ ಸ್ರವಿಸಲು ಸಾಧ್ಯವಾಗದೇ ಇದ್ದಾಗ, ಅಥವಾ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿರುವುದೇ ಮಧುಮೇಹಕ್ಕೆ ಮುಖ್ಯ ಕಾರಣ. ಸೋರೆಕಾಯಿ ಇನ್ಸುಲಿನ್ ಕೊರತೆಯನ್ನು  ನೀಗಿಸುತ್ತದೆ. ಹಾಗಾಗಿ ಬ್ಲಡ್ ಶುಗರ್ ಸದಾ ನಿಯಂತ್ರಣದಲ್ಲಿ ಇರುತ್ತದೆ. 

4 /6

ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಇದರ ಜ್ಯೂಸ್ ಸೇವನೆ ಆರೋಗ್ಯಕ್ಕೆ ಹೆಚ್ಚು ಸಹಕಾರಿ. ದಿನಕ್ಕೆ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿಯುತ್ತಿದ್ದರೆ ರಕ್ತದಲ್ಲಿನ ಸಕ್ಕರೆ ಅಥವಾ ಬ್ಲಡ್ ಶುಗರ್ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ. 

5 /6

ಮಧುಮೇಹವನ್ನು ನಿಯಂತ್ರಿಸುವುದರ ಜೊತೆಗೆ ಮೂತ್ರಪಿಂಡದ ಕಾಯಿಲೆಗಳನ್ನು ಕೂಡಾ  ಗುಣಪಡಿಸುತ್ತದೆ. ಈ ರಸವನ್ನು ಸ್ವಲ್ಪ ನಿಂಬೆ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ಮೂತ್ರನಾಳದ ಸೋಂಕು ನಿವಾರಣೆಯಾಗುತ್ತದೆ.  

6 /6

ಇದರಲ್ಲಿರುವ  ಫೈಬರ್ ಆಮ್ಲೀಯತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.ಕುಂಬಳಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಕೋಲೀನ್ ಇದ್ದು ಇದು ನಮ್ಮ ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ  ಜ್ಯೂಸ್ ಕುಡಿಯುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ ಮತ್ತು ದಟ್ಟ ಕೂದಲು ಬೆಳೆಯುತ್ತದೆ.