ಪ್ರಧಾನಿ ಮೊಮ್ಮಗಳು.. 12 ಜನರೊಂದಿಗೆ ಅಫೇರ್..! ಕೊನೆಗೂ ಒಂಟಿಯಾಗಿ ಉಳಿದಕೊಂಡ ಸ್ಟಾರ್ ಹೀರೋಯಿನ್

Manisha Koirala : ಚಿತ್ರರಂಗದಲ್ಲಿ ಪ್ರೇಮ ಪ್ರಕರಣಗಳು, ವಿಚ್ಛೇದನಗಳು ಸಾಮಾನ್ಯವಾಗಿವೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಈ ಟ್ರೆಂಡ್ ಸ್ವಲ್ಪ ಹೆಚ್ಚು ಅಂತ ಹೇಳಬಹುದು. ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದ ಸ್ಟಾರ್‌ ನಟಿ, 12 ಮಂದಿಯೊಂದಿಗೆ ಡೇಟ್ ಮಾಡಿ, ಕೊನೆಗೆ ಒಂಟಿಯಾಗಿದ್ದ ಉಳಿದು ಕೊಂಡಿದ್ದಾರೆ.. ಯಾರದು ನಟಿ..? ಬನ್ನಿ ತಿಳಿಯೋಣ.. 

1 /8

ಅದ್ಯಾರೂ ಅಲ್ಲ, ಸಂಜಯ್ ಲೀಲಾ ಬನ್ಸಾಲಿ ವೆಬ್ ಸರಣಿ 'ಹಿರಾಮಾಂಡಿ' 'ಮಲ್ಲಿಕಾ ಜಾನ್' ಅಲಿಯಾಸ್ ನಟಿ ಮನಿಶಾ ಕೊಯಿರಾಲಾ. ಹಿರಾಮಂಡಿ ವೆಬ್ ಸೀರೀಸ್ ಮೂಲಕ ಮತ್ತೆ ಟ್ರೆಂಡ್ ಆಗಿದ್ದಾರೆ. 1970 ರಲ್ಲಿ ನೇಪಾಳದಲ್ಲಿ ಜನಿಸಿದ ಮನಿಶಾ ಕೊಯಿರಾಲಾ 1991 ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.   

2 /8

ಬಾಲಿವುಡ್‌ನಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿರುವ ಮನಿಶಾ, ತಮಿಳು ಸಿನಮಾಗಳಲ್ಲಿಯೂ ನಟಿಸಿದ್ದಾರೆ. ಕಳೆದ 33 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಮನಿಶಾ ಕೊಯಿರಾಲಾ ಅವರು ಪ್ರಮುಖ ರಾಜಕೀಯ ಕುಟುಂಬದಲ್ಲಿ ಜನಿಸಿದರು. ಪ್ರಕಾಶ್ ಕೊಯಿರಾಲ ಅವರ ಪುತ್ರಿ. ನೇಪಾಳದ ಮಾಜಿ ಪ್ರಧಾನಿ ಬಿಶೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಮೊಮ್ಮಗಳು.  

3 /8

ಮನೀಶಾ ನೇಪಾಳಿ ಚಿತ್ರ ಫೆರಿ ಭೆಟೌಲಾ (1989) ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದರ್ಪಾಣೆ ಮಾಡಿದರು. ಹಿಂದಿ ಚಲನಚಿತ್ರ ತರ್ವತ ಸೌದಾಗರ್ (1991) ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ದಿಲೀಪ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ಮನೀಶಾ ಹಿಂದಿ, ತಮಿಳು, ತೆಲುಗು, ಬೆಂಗಾಲಿ, ಮಲಯಾಳಂ, ಕನ್ನಡ, ನೇಪಾಳಿ ಮತ್ತು ಇಂಗ್ಲಿಷ್ ಸಿನಿಮಾಗಳಲ್ಲಿ ಕೆಲಸ ಮಾಡಿದರು.  

4 /8

ಮನೀಶಾ ತಮ್ಮ 33 ವರ್ಷಗಳ ಚಿತ್ರರಂಗದಲ್ಲಿ ಸುಮಾರು 70 ಚಿತ್ರಗಳಲ್ಲಿ ನಟಿಸಿದ್ದಾರೆ. ಅಮೀರ್ ಖಾನ್ ಜೊತೆ ಮ್ಯಾನ್, ಸಲ್ಮಾನ್ ಖಾನ್ ಜೊತೆ ಮಜ್ಧಾರ್, ಅಜಯ್ ದೇವಗನ್ ಜೊತೆ ಕಚ್ಚೆ ಧಾಗೇ ಧನ್ವಾನ್, 1942: ಎ ಲವ್ ಸ್ಟೋರಿ ವಿಥ್ ಅನಿಲ್ ಕಪೂರ್, ಮಹಾರಾಜ ವಿಥ್ ಗೋವಿಂದ, ಶಾರುಖ್ ಖಾನ್ ಜೊತೆ ದಿಲ್ ಸೇ, ನಾನಾ ಪಾಟೇಕರ್ ಜೊತೆ ಅಗ್ನಿ ಸಾಕ್ಷಿ ಮುಂತಾದ ಸಿನಿಮಾಗಳನ್ನು ಮನೀಶಾ ಮಾಡಿದ್ದಾರೆ.  

5 /8

ಸಿನಿಮಾಗಳಂತೆ ಮನೀಶಾ ಕೊಯಿರಾಲಾ ಅವರ ವೈಯಕ್ತಿಕ ಜೀವನವೂ ಸಖತ್‌ ಸುದ್ದಿಯಲ್ಲಿದೆ. ಮನಿಶಾ ನೇಪಾಳಿ ಉದ್ಯಮಿ ಸಾಮ್ರಾಟ್ ದಹಲ್ ಅವರನ್ನು 2010 ರಲ್ಲಿ ವಿವಾಹವಾದರು. ಆದರೆ ದುರದೃಷ್ಟವಶಾತ್ 2 ವರ್ಷಗಳಲ್ಲಿ ವಿಚ್ಛೇದನ ಪಡೆದರು. 2012ರಲ್ಲಿ ಪತಿಯಿಂದ ಬೇರ್ಪಟ್ಟ ಮನಿಷಾ ಈಗ 53ನೇ ವಯಸ್ಸಿನಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ.  

6 /8

ಉದ್ಯಮಿ ಸಾಮ್ರಾಟ್ ದಹಲ್ ಅವರನ್ನು ಮದುವೆಯಾಗುವ ಮೊದಲು, ಮನಿಶಾ ಕೊಯಿರಾಲಾ 11 ಜನರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ನಡೆಸಿದ್ದರು. ಅವರು ನಟರು, ಉದ್ಯಮಿಗಳು ಮತ್ತು ರಾಯಭಾರಿಗಳೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂದು ಸುದ್ದಿಯಾಗಿದೆ.  

7 /8

ಮನೀಶಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ವಿವೇಕ್ ಮುಶ್ರಾನ್, ನಾನಾ ಪಾಟೇಕರ್, ಡಿಜೆ ಹುಸೇನ್, ನೈಜೀರಿಯಾದ ಉದ್ಯಮಿ ಸೆಸಿಲ್ ಆಂಥೋನಿ, ಆರ್ಯನ್ ವೈದ್, ಪ್ರಶಾಂತ್ ಚೌಧರಿ ಮತ್ತು ಆಸ್ಟ್ರೇಲಿಯಾದ ರಾಯಭಾರಿ ಕ್ರಿಸ್ಪಿನ್ ಕಾನ್ರಾಯ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿಗಳಿವೆ. ಮಾಧ್ಯಮ ವರದಿಗಳ ಪ್ರಕಾರ, ನಾನಾ ಪಾಟೇಕರ್ ಅವರನ್ನು ಮದುವೆಯಾಗಲು ಪ್ರಯತ್ನಿಸಿದರು ಎನ್ನಲಾಗಿದೆ.  

8 /8

ಉದ್ಯಮಿ ಅಜೀಂ ಪ್ರೇಮ್‌ಜಿ ಅವರ ಪುತ್ರ ತಾರಿಕ್ ಪ್ರೇಮ್‌ಜಿ, ಮಾಡೆಲ್ ರಾಜೀವ್ ಮೂಲಚಂದಾನಿ, ಸಂಗೀತ ಸಂಯೋಜಕ ಸಂದೀಪ್ ಚೌತಾ ಮತ್ತು ಕ್ರಿಸ್ಟೋಫರ್ ಡೋರಿಸ್ ಅವರೊಂದಿಗೆ ಮನೀಶಾ ಕೊಯಿರಾಲಾ ಡೇಟಿಂಗ್ ಮಾಡಿದ್ದರು ಎಂಬ ಮಾತಿಗೆ. ಆದರೆ ಇಷ್ಟೇಲ್ಲಾ ಹಿನ್ನೆಲೆ ಇರುವ ನಟಿ ಇದೀಗ ಒಂಟಿಯಾಗಿದ್ದಾಳೆ.