ಅಭಿನಯದ ಜೊತೆ ಬ್ಯುಸಿನೆಸ್‌ನಲ್ಲೂ ತೊಡಗಿಸಿಕೊಂಡ ಬಾಲಿವುಡ್ ನಟಿಯರು!

ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಹಲವರು. ನಟನಾ ಕಲೆ, ಬ್ಯೂಟಿ ಜೊತೆಗೆ ತಮ್ಮ ಜಾಣತನದಿಂದಲೂ ಹಲವು ನಟಿಮಣಿಯರು ಗುರುತಿಸಿಕೊಂಡಿದ್ದಾರೆ. 

ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಹಲವರು. ನಟನಾ ಕಲೆ, ಬ್ಯೂಟಿ ಜೊತೆಗೆ ತಮ್ಮ ಜಾಣತನದಿಂದಲೂ ಹಲವು ನಟಿಮಣಿಯರು ಗುರುತಿಸಿಕೊಂಡಿದ್ದಾರೆ. ಕೆಲವರ ಬದುಕು ಕೇವಲ ಸಿನಿರಂಗಕ್ಕೆ ಸೀಮಿತವಾದರೆ, ಮತ್ತೆ ಕೆಲವು ಬಾಲಿವುಡ್‌ ಬೆಡಗಿಯರು ನಟನೆಯ ಜೊತೆ ಜೊತೆಗೆ ಬ್ಯುಸಿನೆಸ್‌ ಕೂಡ ನಡೆಸುತ್ತಾರೆ. ಇತ್ತೀಚೆಗೆ ಸ್ಟಾರ್ಟ್‌ಅಪ್‌ಗಳು ಹೆಚ್ಚಾಗಿ ಹುಟ್ಟಿಕೊಳ್ಳುತ್ತಿವೆ. ಬ್ಯೂಟಿ, ಲೈಫ್‌ಸ್ಟೈಲ್‌, ಆರೋಗ್ಯ ಕ್ಷೇತ್ರಗಳ ಜತೆಗೆ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿರುವ ಬಾಲಿವುಡ್‌ ನಟಿಯರ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ. 

1 /9

ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ನಟಿ ಕತ್ರಿನಾ ಕೈಫ್ ಹೂಡಿಕೆ ಮಾಡಿದ್ದು, ಉತ್ತಮ ಲಾಭವನ್ನು ಸಹ ಕಂಡಿದ್ದರು. ಇದೀಗ ಅವರು ಕಾಸ್ಮೆಟಿಕ್‌ ಬ್ರಾಂಡ್‌ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡಿದ್ದಾರೆ. 

2 /9

ಬಾಲಿವುಡ್‌ ನಟಿ ಕೃತಿ ಸನೂನ್‌ ಇವರು ಇತ್ತೀಚೆಗೆ ಫಿಟ್‌ನೆಸ್‌ ಸ್ಟಾರ್ಟ್‌ಅಪ್‌ನಲ್ಲಿ ಹಣ ತೊಡಗಿಸಿದ್ದಾರೆ. 

3 /9

ಶಿಲ್ಪಾ ಶೆಟ್ಟಿ ಅವರು ಯೋಗಾಭ್ಯಾಸದ ಮೂಲಕವೇ ತಮ್ಮ ಫಿಟ್ನೆಸ್‌ ಕಾದುಕೊಂಡಿರುವ ಶಿಲ್ಪಾ ಶೆಟ್ಟಿ ನಾನಾ ಬ್ರ್ಯಾಂಡ್‌ಗಳ ಮೇಲೆ ಹೂಡಿಕೆ ಮಾಡುತ್ತಾರೆ.  ಯೋಗ, ವ್ಯಾಯಾಮ, ಇಮ್ಯುನಿಟಿ, ಡಯಟ್‌, ಆರೋಗ್ಯ ಸಂಬಂಧಿ ಬ್ಯುಸಿನೆಸ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. 

4 /9

ಪಾಪ್‌ ಕಲ್ಚರ್‌ ಬ್ರ್ಯಾಂಡ್‌ವೊಂದರಲ್ಲಿ ಸಾರಾ ಅಲಿ ಖಾನ್ ಹೂಡಿಕೆ ಮಾಡಿದ್ದು, ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ.

5 /9

ಮುಂಬೈ ಮೂಲದ ಸ್ವದೇಶಿ ಆಯುರ್ವೇದ ಬ್ರಾಂಡ್‌ ಮೂಲಕ ಫಿಟ್‌ನೆಸ್‌ ಕ್ವೀನ್‌ ಮಲೈಕಾ ಅರೋರಾ ಉದ್ದಿಮೆಯಲ್ಲಿ ಹೂಡಿಕೆ ಮಾಡಿದ್ದಾರೆ. 

6 /9

ಹಲವು ಪ್ರಾಡಕ್ಟ್ ಸಂಬಂಧಿತ ಕಂಪನಿಗಳಲ್ಲಿ ನಟಿ ದೀಪಿಕಾ ಪಡುಕೋಣೆ ಹೂಡಿಕೆ ಮಾಡಿದ್ದಾರೆ. ಅದರಲ್ಲೂ ಟೆಕ್‌ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸ್ಟಾರ್ಟ್‌ಅಪ್‌ಗಳಲ್ಲಿ ದೀಪಿಕಾ ಹೆಚ್ಚಿನ ಹೂಡಿಕೆ ಮಾಡಿರುವುದು ವಿಶೇಷ.

7 /9

ಬಾಲಿವುಡ್‌ ಸ್ಟಾರ್‌ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ, ಸೋಷಿಯಲ್‌ ಕಾಮರ್ಸ್‌ ಸ್ಟಾರ್ಟ್‌ಅಪ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

8 /9

ಈ ಹಿಂದೆ ಡಿಜಿಟಲ್‌ ಇನ್ಸೂರೆನ್ಸ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದ ನಟಿ ಅನುಷ್ಕಾ ಶರ್ಮಾ, ಇದೀಗ ತಮ್ಮ ಪತಿ ವಿರಾಟ್‌ ಕೊಹ್ಲಿ ಅವರ ಸಹಕಾರದೊಂದಿಗೆ ಫುಟ್‌ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡಿದ್ದಾರೆ.  

9 /9

ಲೈಫ್‌ಸ್ಟೈಲ್‌ ಸಂಬಂಧಿ ಪ್ರಾಡಕ್ಟ್ ಕಂಪನಿಗಳಲ್ಲಿ ಬಾಲಿವುಡ್‌ ಕ್ಯೂಟಿ ಆಲಿಯಾ ಭಟ್‌ ಹೂಡಿಕೆ ಮಾಡಿದ್ದಾರೆ.