Best Foods For Weight Loss: ಸುಲಭವಾಗಿ ತೂಕ ಕಳೆದುಕೊಳ್ಳಲು ಈ ಆಹಾರ ಸೇವಿಸಿರಿ

Best Foods For Weight Loss: ಬೀನ್ಸ್ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಬೀನ್ಸ್ ಹೆಚ್ಚಿನ ಫೈಬರ್ ಹೊಂದಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ನಿಧಾನವಾಗುತ್ತದೆ. ಇದರರ್ಥ ನೀವು ಹೆಚ್ಚು ಸಮಯ ಹೊಟ್ಟೆ ತುಂಬಿನ ಅನುಭವ ಪಡೆಯುತ್ತೀರಿ. ನಿಯಮಿತವಾಗಿ ಬೀನ್ಸ್ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.    ​

ನವದೆಹಲಿ: ಇಂದು ಅನೇಕರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ತೂಕ ಕಳೆದುಕೊಳ್ಳಲು ನಿತ್ಯವೂ ವಿವಿಧ ರೀತಿಯ ಡಯಟ್, ವ್ಯಾಯಾಮ ಮಾಡುತ್ತಾರೆ. ಆದರೆ ಏನೇ ಸರ್ಕಸ್ ಮಾಡಿದರೂ ಅವರಿಗೆ ತೂಕ ಕಳೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ ಹೇಗೆ ತೂಕ ನಷ್ಟ ಮಾಡಿಕೊಳ್ಳುವುದು ಅನ್ನೋದರ ಬಗ್ಗೆ ಚಿಂತಿತರಾಗಿರುತ್ತಾರೆ. ಸುಲಭವಾಗಿ ತೂಕ ನಷ್ಟ ಮಾಡಲು ಸಹಕಾರಿಯಾಗುವ ಆಹಾರ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಬೀನ್ಸ್ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಬೀನ್ಸ್ ಹೆಚ್ಚಿನ ಫೈಬರ್ ಹೊಂದಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ನಿಧಾನವಾಗುತ್ತದೆ. ಇದರರ್ಥ ನೀವು ಹೆಚ್ಚು ಸಮಯ ಹೊಟ್ಟೆ ತುಂಬಿನ ಅನುಭವ ಪಡೆಯುತ್ತೀರಿ. ನಿಯಮಿತವಾಗಿ ಬೀನ್ಸ್ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.    

2 /5

ನಿಮ್ಮ ಆಹಾರಕ್ರಮದಲ್ಲಿ ಹೆಚ್ಚು ತರಕಾರಿಗಳನ್ನು ಸೇರಿಸಬಹುದು. ಇದರಿಂದ ನೀವು ತಿನ್ನುತ್ತಿರುವ ಕ್ಯಾಲೊರಿಗಳನ್ನು ಒಂದೇ ಸಮಯದಲ್ಲಿ ಕಡಿತಗೊಳಿಸಬಹುದು. ಹೂಕೋಸು, ಕುಂಬಳಕಾಯಿ, ಸೌತೆಕಾಯಿ ಮುಂತಾದ ಹಸಿರು ತರಕಾರಿ ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ಕಡಿಮೆ ಕ್ಯಾಲೊರಿ ಹೊಂದಿರುವ ತರಕಾರಿಗಳು ಆರೋಗ್ಯದ ಜೊತೆಗೆ ತೂಕ ನಷ್ಟಕ್ಕೂ ಸಹಕಾರಿಯಾಗಿವೆ.

3 /5

ಪ್ರತಿದಿನದ ಆಹಾರದ ಜೊತೆಗೆ ನಿಯಮಿತವಾಗಿ ಹಣ್ಣುಗಳ ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ಸೇಬು, ದ್ರಾಕ್ಷಿ, ಮೊಸಂಬಿ ಮುಂತಾದ ಹಣ್ಣುಗಳ ಸೇವನೆಯಿಂದ ಉತ್ತಮ ಆರೋಗ್ಯದ ಜೊತೆಗೆ ತೂಕವನ್ನು ಸಹ ಕಳೆದುಕೊಳ್ಳಬಹುದು.

4 /5

ಬಾದಾಮಿ, ಕಡಲೆಕಾಯಿ, ವಾಲ್‌ನಟ್ಸ್ ಅಥವಾ ಪೆಕನ್‌ಗಳಂತಹ ಯಾವುದೇ ಬೀಜಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿರಿ. ಈ ಒಣಬೀಜಗಳನ್ನು ಸೇವಿಸುವ ಜನರು ಕಡಿಮೆ ಆಹಾರ ಸೇವಿಸುತ್ತಾರೆ. ಇದರಿಂದ ಅವರು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

5 /5

ಮೊಸರು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆಹಾರದ ಜೊತೆಗೆ ನಿಯಮಿತವಾಗಿ ಮೊಸರು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಜೊತೆಗೆ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ತೂಕ ನಷ್ಟ ಮಾಡಿಕೊಳ್ಳಲು ನೀವು ಮೊಸರನ್ನು ನಿಮ್ಮ ಡಯಟ್‍ನ ಭಾಗವಾಗಿರಿಸಿ.