ಐಪಿಎಲ್‌ ಇತಿಹಾಸದ ಅದ್ಭುತ ಕ್ಯಾಚ್‌: ಮೈದಾನದಲ್ಲಿ 'ಸೂಪರ್‌ಮ್ಯಾನ್' ಆದ ಆಟಗಾರರು

IPL 2022 ರಲ್ಲಿ ಪ್ರತಿ ವರ್ಷದಂತೆ, ಈ ಬಾರಿಯೂ ಹೆಚ್ಚಿನ ಕ್ಯಾಚ್‌ಗಳು ಕಂಡುಬಂದಿವೆ. ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ಎವಿನ್ ಲೂಯಿಸ್ ಹಿಡಿದ ಉತ್ತಮ ಕ್ಯಾಚ್ ಈ ಸೀಸನ್‌ನ ಅತ್ಯುತ್ತಮ ಕ್ಯಾಚ್ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇದನ್ನು ಹೊರತುಪಡಿಸಿ, ಅನೇಕ ಅದ್ಭುತ ಕ್ಯಾಚ್‌ಗಳು ಈ ಸೀಸನ್‌ನಲ್ಲಿ ಕಂಡುಬಂದವು. 

1 /5

ಎವಿನ್ ಲೂಯಿಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಓಡಿ ಒಂದು ಕೈಯಿಂದ ಅತ್ಯುತ್ತಮ ಕ್ಯಾಚ್ ಪಡೆದರು. ಈ ಕ್ಯಾಚ್ ಅನ್ನು ಐಪಿಎಲ್‌ನ ಅತ್ಯುತ್ತಮ ಕ್ಯಾಚ್ ಎಂದು ಪರಿಗಣಿಸಲಾಗಿದೆ. ರಿಂಕು ಸಿಂಗ್ ಎವಿನ್ ಲೂಯಿಸ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಕ್ಯಾಚ್‌ನಿಂದಾಗಿ ಲಖನೌ ಪಂದ್ಯದಲ್ಲೂ ಗೆಲುವು ಪಡೆಯಿತು.

2 /5

ಈ ಋತುವಿನ 27ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಹಿಡಿದರು. ಕೊಹ್ಲಿ ಗಾಳಿಯಲ್ಲಿ ಜಿಗಿದು ಒಂದೇ ಕೈಯಿಂದ ಈ ಕ್ಯಾಚ್ ಅನ್ನು ತೆಗೆದುಕೊಂಡರು.

3 /5

ಋತುವಿನ 52 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ (RR) ಆರಂಭಿಕ ಆಟಗಾರ ಜೋಸ್ ಬಟ್ಲರ್ ಒಂದು ಕೈಯಿಂದ ಆಶ್ಚರ್ಯಕರ ಕ್ಯಾಚ್ ಪಡೆದರು. ಧವನ್ ಮಿಡ್ ಆನ್‌ನಲ್ಲಿ ದೊಡ್ಡ ಹೊಡೆತವನ್ನು ನೀಡಿದಾಗ, ಬಟ್ಲರ್ ಎತ್ತರಕ್ಕೆ ಜಿಗಿದು ಒಂದು ಕೈಯಿಂದ ಚೆಂಡನ್ನು ಕ್ಯಾಚ್ ಹಿಡಿದರು.

4 /5

ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ನ 'ಸೂಪರ್‌ಮ್ಯಾನ್' ಅವತಾರ ಕಂಡುಬಂದಿದೆ. 

5 /5

IPL 2022 ರ 22 ನೇ ಪಂದ್ಯದಲ್ಲಿ, CSK ತಂಡದ ಆಟಗಾರ ಅಂಬಟಿ ರಾಯುಡು ತಮ್ಮ ಚಾಣಾಕ್ಷತನದಿಂದ ಎಲ್ಲರ ಹೃದಯವನ್ನು ಗೆದ್ದರು. ರಾಯುಡು ಗಾಳಿಯಲ್ಲಿ ಡೈವಿಂಗ್ ಮಾಡಿ ಅದ್ಭುತ ಕ್ಯಾಚ್ ಪಡೆದರು. ಇದನ್ನು ನೋಡಿ ಆರ್‌ಸಿಬಿ ತಂಡದ ಆಟಗಾರರೂ ಅಚ್ಚರಿಗೊಂಡಿದ್ದಾರೆ.