ಉತ್ತಮ ಸೌಂದರ್ಯವರ್ಧಕ ಅಲೋವೆರಾ

ಅಲೋವೆರಾ ಜೆಲ್ ಅನ್ನು ಹೆಚ್ಚಾಗಿ ಕೂದಲು, ತ್ವಚೆ ಆರೈಕೆಗೆ ಬಳಸಲಾಗುತ್ತದೆ. 

ಅಲೋವೆರಾ ಜೆಲ್ ಉತ್ತಮ ಸೌಂದರ್ಯವರ್ಧಕವಾಗಿದೆ. ಅಲೋವೆರಾ ಜೆಲ್ ಅನ್ನು ಹೆಚ್ಚಾಗಿ ಕೂದಲು, ತ್ವಚೆ ಆರೈಕೆಗೆ ಬಳಸಲಾಗುತ್ತದೆ. ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸ್ಕಿನ್ ಟ್ಯಾನಿಂಗ್ ತೆಗೆದುಹಾಕಲು ಅಲೋವೆರಾವನ್ನು ಉತ್ತಮ ಔಷಧ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಅಲೋವೆರಾವನ್ನು ಮದ್ಯಕ್ಕೆ ಕತ್ತರಿಸಿ ಅದರ ಜೆಲ್ ಅನ್ನು ಟ್ಯಾನಿಂಗ್ ಹೆಚ್ಚಾಗಿರುವ ಜಾಗದಲ್ಲಿ ನಿಯಮಿತವಾಗಿ ಅನ್ವಯಿಸಿ.

2 /5

ಅಲೋವೆರಾ ಮೊಡವೆಗಳನ್ನು ನಿವಾರಿಸಲೂ ಕೂಡ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ ಆಲೋವೆರಾ ಜೆಲ್ ಜೊತೆಗೆ ಜೇನುತುಪ್ಪವನ್ನು ಬೆರೆಸಿ ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ನಿಮಗೆ ಪರಿಣಾಮ ಗೋಚರಿಸುತ್ತದೆ.

3 /5

ನೀವು ಪದೇ ಪದೇ ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ತಪ್ಪಿಸಲು ಅಲೋವೆರಾ ಜೆಲ್ ಅನ್ನು ತೆಗೆದು ಅದನ್ನು ಒಂದು ತೆಳುವಾದ ಬಟ್ಟೆಯಲ್ಲಿ ಕಟ್ಟಿ ನೋವಿರುವ ಜಾಗದಲ್ಲಿ ಬ್ಯಾಂಡೇಜ್ ಮಾಡಿದರೆ ಶೀಘ್ರದಲ್ಲೇ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ. 

4 /5

ಪ್ರಸ್ತುತ ಒತ್ತಡಭರಿತ ಜೀವನದಲ್ಲಿ ಬಹುತೇಕ ಜನರಿಗೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲುದುರುವ ಸಮಸ್ಯೆ ಇರುತ್ತದೆ. ಇದನ್ನು ತಪ್ಪಿಸಲು ನಿಯಮಿತವಾಗಿ ಕೂದಲಿನ ಬುಡಕ್ಕೆ ಅಲೋವೆರಾ ಜೆಲ್ ಲೇಪಿಸಿ ಬೆಚ್ಚಗಿಯ ನೀರಿನಿಂದ ತಲೆಗೆ ಸ್ನಾನ ಮಾಡಿ. ಇದರಿಂದ ಸೊಂಪಾದ ಕೂದಲು ಬೆಳೆಯಲು ಸಹಕಾರಿ ಆಗುತ್ತದೆ. 

5 /5

ಹೊಳೆಯುವ ಕಾಂತಿಯುತ ಚರ್ಮ ನಿಮ್ಮದಾಗಬೇಕೆಂದರೆ ಇದಕ್ಕಾಗಿ ಆಲೋವೆರಾವನ್ನು ಮುಖಕ್ಕೆ ಅನ್ವಯಿಸಿ. ಇದರಿಂದ ಮುಖದ ಮೇಲಿನ ಕಲೆಗಳು ಮಾಯವಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.  ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.