ಬಿಗ್‌ಬಾಸ್‌ ಸ್ಪರ್ಧಿ ಅಬ್ದು ರೋಜಿಕ್ ನಿಶ್ಚಿತಾರ್ಥ..! ಫೋಟೋಸ್‌ ವೈರಲ್‌

Abdu Rozik engagement : 'ಬಿಗ್ ಬಾಸ್ 16' ಮೂಲಕ ಜನಪ್ರಿಯತೆ ಗಳಿಸಿದ ಗಾಯಕ ಅಬ್ದು ರೋಜಿಕ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತ ಫೊಟೋಗಳನ್ನು ಅಬ್ದು ತಮ್ಮ  ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು, ಸಿನಿರಂಗದ ಗಣ್ಯರು ಶುಭ ಕೋರುತ್ತಿದ್ದಾರೆ.

1 /7

'ಬಿಗ್ ಬಾಸ್ 16' ಮೂಲಕ ಗಮನ ಸೆಳೆದಿರುವ ಗಾಯಕ ಅಬ್ದು ರೋಝಿಕ್ ಸದಾ ಯಾವುದಾದರೊಂದು ಕಾರಣಕ್ಕಾಗಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ.  

2 /7

3 ಅಡಿ ಎತ್ತರದ ಅಬ್ದು ರೋಜಿಕ್ ಶೀಘ್ರದಲ್ಲೇ ಮದುವೆಯಾಗಲಿದ್ದು, ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  

3 /7

ಈ ಕುರಿತ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರೂ ಅಬ್ದುಗೆ ವಿಶ್‌ ಮಾಡುತ್ತಿದ್ದಾರೆ.  

4 /7

ಅಬ್ದು ಜತೆ ಅವರ ಭಾವಿ ಪತ್ನಿ ಬಿಳಿ ಬಣ್ಣದ ಉಡುಪಿನಲ್ಲಿ ಕುಳಿತಿರುವುದನ್ನು ಚಿತ್ರಗಳಲ್ಲಿ ಕಾಣಬಹುದು.   

5 /7

ಅಬ್ದು ತನ್ನ ಸಂಗಾತಿಗೆ ಹಾರ್ಟ್‌ ಆಕಾರದ ವಜ್ರದ ಉಂಗುರವನ್ನು ತೊಡಿಸಿರುವುದನ್ನು ಫೋಟೋದಲ್ಲಿ ಕಾಣಬಹುದು.  

6 /7

ಆದರೆ, ಫೋಟೋಗಳಲ್ಲಿ ಹುಡುಗಿಯ ಮುಖ ಕಾಣಿಸುತ್ತಿಲ್ಲ. ಏಪ್ರಿಲ್ 24 ರಂದು ಅಬ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.  

7 /7

ಅಬ್ದು ಭಾವಿ ಪತ್ನಿಯ ಹೆಸರು ಅಮೀರಾ ಎಂದು ತಿಳಿದು ಬಂದಿದೆ. ಈ ಜೋಡಿ ಮೇ 8 ರಂದು ಮದುವೆಯಾಗುವುದಾಗಿ ಘೋಷಿಸಿದ್ದಾರೆ.