Human and Universe: ಮಾನವ ದೇಹದಲ್ಲಿ ಅಡಗಿದೆ ‘ಬ್ರಹ್ಮಾಂಡ’: ಈ ಫೋಟೋಗಳನ್ನು ಕಂಡರೆ ಆಶ್ಚರ್ಯವಾಗೋದು ಖಂಡಿತ

Human and Universe: ಬಾಹ್ಯಾಕಾಶ ಸಂಬಂಧಿತ ರಹಸ್ಯಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ. ಇನ್ನು ಇವೆಲ್ಲದರ ನಡುವೆ ಮನುಷ್ಯನ ದೇಹದ ಕೆಲ ಅಂಗಗಳು ಮತ್ತು ಬ್ರಹ್ಮಾಂಡದ ರಚನೆಗಳೊಂದಿಗೆ ಹೋಲಿಕೆ ಇವೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ. ಈ ಚಿತ್ರಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ.

1 /5

ನೀವು ಸೂಕ್ಷ್ಮದರ್ಶಕದ ಅಡಿಯಲ್ಲಿ ಮೆದುಳಿನ ನರಕೋಶವನ್ನು ನೋಡಿದಾಗ, ಅದರ ರಚನೆಯು ಬ್ರಹ್ಮಾಂಡದ ರಚನೆಗೆ ಹೋಲಿಕೆಯಾಗುತ್ತದೆ. ಗ್ಯಾಲಕ್ಸಿ ಎಲ್ಲೆಡೆ ಹರಡಿದಂತೆ ಕಾಣುತ್ತದೆ

2 /5

ಡಿಎನ್‌ಎಯ ಡಬಲ್ ಹೆಲಿಕಲ್ ರಚನೆಯನ್ನು ನೀವು ನೋಡಿದಾಗ ಅದು ಬಾಹ್ಯಾಕಾಶದ ಡಬಲ್ ಹೆಲಿಕಲ್ ನೆಬ್ಯುಲಾದಂತೆ ಕಾಣುತ್ತದೆ. ಡಿಎನ್ಎ ಆವಿಷ್ಕಾರದ ಶ್ರೇಯಸ್ಸು ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಅವರಿಗೆ ಸಲ್ಲುತ್ತದೆ.

3 /5

ಕಣ್ಣುಗಳು ನಮ್ಮ ದೇಹದ ಮೃದುವಾದ ಮತ್ತು ಅಗತ್ಯವಾದ ಭಾಗಗಳಲ್ಲಿ ಒಂದಾಗಿದೆ. ಇದರಿಂದಾಗಿ ನಾವು ಜಗತ್ತನ್ನು ನೋಡಲು ಸಾಧ್ಯವಾಗುತ್ತದೆ. ಇದು ಪಂಚೇಂದ್ರಿಯಗಳಲ್ಲಿ ಸೇರಿದೆ. ಕಣ್ಣುಗಳ ರೆಟಿನಾ ಮತ್ತು ಬಾಹ್ಯಾಕಾಶದಲ್ಲಿರುವ ಹೆಲಿಕ್ಸ್ ನೀಹಾರಿಕೆ ಒಂದೇ ರೀತಿ ಕಾಣುತ್ತದೆ.

4 /5

ಜೀವಶಾಸ್ತ್ರದ ವಿದ್ಯಾರ್ಥಿಗಳು ಕೋಶ ವಿಭಜನೆಯ ಪದವನ್ನು ಚೆನ್ನಾಗಿ ತಿಳಿದಿರುತ್ತಾರೆ. ಕೋಶ ವಿಭಜನೆಯಿಂದ ಹೊಸಕೋಶ ಹುಟ್ಟುತ್ತದೆ ಎಂಬುದು ತಿಳಿದಿರುವ ಸಂಗತಿ. ಇನ್ನು ಈ ರಚನೆಯನ್ನು ಜನನ ಮರಣದ ವಿದ್ಯಮಾನಕ್ಕೆ ಹೋಲಿಸಲಾಗುತ್ತದೆ.

5 /5

ಕಣ್ಣುಗಳಲ್ಲಿ ಸೂಕ್ಷ್ಮ ರಕ್ತನಾಳಗಳು ಇರುತ್ತವೆ. ಈ ನರಗಳನ್ನು ಆಪ್ಟಿಕಲ್ ನರಗಳು ಎಂದೂ ಕರೆಯುತ್ತಾರೆ. ಆಪ್ಟಿಕಲ್ ನರಗಳು ಆಕಾಶದಿಂದ ಬೀಳುವ ಮಿಂಚಿನಂತೆ ಕಾಣುತ್ತವೆ.