NRI: ಕೆನಡಾಕ್ಕೆ ವಲಸೆ ಹೋಗಲು ಬಯಸುತ್ತೀದ್ದೀರಾ? ಹಾಗಾದ್ರೆ ಈ ಗುಡ್ ನ್ಯೂಸ್ ನಿಮಗಾಗಿ…

ಆಗಸ್ಟ್ 22 ರ ಹೊತ್ತಿಗೆ, ಕೆನಡಾದಲ್ಲಿ ಸುಮಾರು 3,00,000 ಜನರಿಗೆ ಶಾಶ್ವತ ಪೌರತ್ವವನ್ನು ನೀಡಲಾಗಿದೆ. 2022 ರ ವೇಳೆಗೆ 431,000 ಖಾಯಂ ನಿವಾಸಿಗಳ ಗುರಿಯನ್ನು ನಿಗದಿಪಡಿಸಲಾಗಿದೆ.

Written by - Bhavishya Shetty | Last Updated : Sep 4, 2022, 04:05 PM IST
    • ಶಾಶ್ವತ ರೆಸಿಡೆನ್ಸಿ ಮತ್ತು ವೀಸಾ ಅರ್ಜಿಗಳ ಬ್ಯಾಕ್‌ಲಾಗ್ ಅನ್ನು ತೆಗೆದುಹಾಕಲು ಹೊಸ ಕ್ರಮ

    • ಕೆನಡಾದ ವಲಸೆ ಸಚಿವ ಸೀನ್ ಫ್ರೇಸರ್ ತಮ್ಮ ಟ್ವೀಟ್‌ನಲ್ಲಿ ಹೇಳಿಕೆ

    • ಕೆನಡಾಗೆ ವಲಸೆ ಹೋಗುವವರಿಗೆ ಈ ಕ್ರಮ ಸಹಾಯಕ

NRI: ಕೆನಡಾಕ್ಕೆ ವಲಸೆ ಹೋಗಲು ಬಯಸುತ್ತೀದ್ದೀರಾ? ಹಾಗಾದ್ರೆ ಈ ಗುಡ್ ನ್ಯೂಸ್ ನಿಮಗಾಗಿ… title=
NRI

ಕೆನಡಾ ಸರ್ಕಾರವು ತನ್ನ ವಲಸೆ ವಲಯವನ್ನು ಆಧುನೀಕರಿಸಲು ಮತ್ತು ಕೆನಡಾಕ್ಕೆ ಶಾಶ್ವತ ರೆಸಿಡೆನ್ಸಿ ಮತ್ತು ವೀಸಾ ಅರ್ಜಿಗಳ ಬ್ಯಾಕ್‌ಲಾಗ್ ಅನ್ನು ತೆಗೆದುಹಾಕಲು ಹೊಸ ಕ್ರಮಗಳನ್ನು ಘೋಷಿಸಿದೆ. ಕೆನಡಾದ ವಲಸೆ ಇಲಾಖೆಯನ್ನು ಆಧುನೀಕರಿಸಲು ಮತ್ತು ಡಿಜಿಟಲೀಕರಣಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೆನಡಾದ ವಲಸೆ ಸಚಿವ ಸೀನ್ ಫ್ರೇಸರ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.  

ಇದನ್ನೂ ಓದಿ: ವಿಮಾನ ದರ ಹೆಚ್ಚಳಕ್ಕೆ ಕಂಗಾಲಾದ ಎನ್ಆರ್ಐಗಳು: ತಾಯ್ನಾಡಿನಲ್ಲೇ ಉಳಿಯುತ್ತಿದ್ದಾರೆ ಅನಿವಾಸಿ ಜನರು

ಆಗಸ್ಟ್ 22 ರ ಹೊತ್ತಿಗೆ, ಕೆನಡಾದಲ್ಲಿ ಸುಮಾರು 3,00,000 ಜನರಿಗೆ ಶಾಶ್ವತ ಪೌರತ್ವವನ್ನು ನೀಡಲಾಗಿದೆ. 2022 ರ ವೇಳೆಗೆ 431,000 ಖಾಯಂ ನಿವಾಸಿಗಳ ಗುರಿಯನ್ನು ನಿಗದಿಪಡಿಸಲಾಗಿದೆ.

ವೀಸಾ ಅರ್ಜಿ ಪ್ರಕ್ರಿಯೆಗೆ ಅನುಕೂಲವಾಗುವಂತೆ ಕೆನಡಾ ಕೆಲವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿದೆ. ಕಾಯುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಈಗಾಗಲೇ ಕೆನಡಾದಲ್ಲಿರುವ ಶಾಶ್ವತ ಮತ್ತು ತಾತ್ಕಾಲಿಕ ರೆಸಿಡೆನ್ಸಿ ಅರ್ಜಿದಾರರಿಗೆ ಕೆಲವು ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ.

“ಮುಂಬರುವ ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಸರಳಗೊಳಿಸುವುದರಿಂದ ಸುಮಾರು 180,000 ಜನರು ವೈದ್ಯಕೀಯ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಸಮಯ ಮತ್ತು ಹಣವನ್ನು ಉಳಿಸಲು ಸಹಾಯ ಮಾಡುತ್ತಾರೆ. ಇದು ಅವರ ಅರ್ಜಿಗಳಿಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ" ಎಂದು ವಲಸೆ ಮತ್ತು ಪೌರತ್ವ ಕೆನಡಾ (IRCC) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಬೇರ್ಪಟ್ಟ ಕುಟುಂಬಗಳನ್ನು ಮತ್ತೆ ಒಂದುಗೂಡಿಸಲು ಬಯಸುವ ಪ್ರಾಯೋಜಕರು, ಅರ್ಜಿದಾರರೊಂದಿಗೆ IRCC ದೂರವಾಣಿ ಮತ್ತು ವೀಡಿಯೊ ಸಂದರ್ಶನಗಳನ್ನು ನಡೆಸಲು ಪ್ರಾರಂಭಿಸಿದೆ.

ಇದನ್ನೂ ಓದಿ: NRIಗಳಿಗೆ ಸಿಹಿಸುದ್ದಿ: ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ನೋಡಲ್ ಅಧಿಕಾರಿ ನೇಮಿಸಿದ ಸರ್ಕಾರ

2021 ರಲ್ಲಿ  ಸುಮಾರು 69,000 ವೀಸಾಗಳನ್ನು ಜನರಿಗೆ ನೀಡಲಾಗಿದೆ.  ಪೌರತ್ವ ಯೋಜನೆಯನ್ನು ಆಧುನೀಕರಿಸುವ ಪ್ರಯತ್ನದಲ್ಲಿ, ಆಗಸ್ಟ್ 2021 ರಲ್ಲಿ, IRCC ಕೆಲವು ಪೌರತ್ವ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅನುಮತಿಸುವ ಸೌಲಭ್ಯವನ್ನು ಪರಿಚಯಿಸಿತು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News