NRI ಸಂಶೋಧಕರಿಗಾಗಿ ‘ವೈಭವ್ ಫೆಲೋಶಿಪ್’ ಅನಾವರಣ: ಏನಿದರ ಕಾರ್ಯ?

Vaibhav Fellowship: ಫೆಲೋಶಿಪ್ ಎನ್‌ ಆರ್‌ ಐ ಸಂಶೋಧಕರಿಗೆ ಭಾರತದಲ್ಲಿ ಸಂಶೋಧನಾ ಸಂಸ್ಥೆ ಅಥವಾ ಶೈಕ್ಷಣಿಕ ಸಂಸ್ಥೆಯೊಂದಿಗೆ ವರ್ಷಕ್ಕೆ ಕನಿಷ್ಠ ಒಂದು ತಿಂಗಳಿಂದ ಗರಿಷ್ಠ ಎರಡು ತಿಂಗಳವರೆಗೆ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ. ಫೆಲೋಶಿಪ್‌ನ ಅವಧಿಯು ಮೂರು ವರ್ಷಗಳಾಗಿದ್ದು, ಸರ್ಕಾರವು ಸಂಶೋಧಕರಿಗೆ ಸಂಪೂರ್ಣ ಅವಧಿಗೆ ರೂ 37 ಲಕ್ಷದವರೆಗೆ ಮೊತ್ತವನ್ನು ನೀಡುತ್ತದೆ.

Written by - Bhavishya Shetty | Last Updated : Mar 2, 2023, 01:17 AM IST
    • ‘ವೈಭವ್ ಫೆಲೋಶಿಪ್’ ಅನಾವರಣಗೊಳಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್
    • ವರ್ಷಕ್ಕೆ ಕನಿಷ್ಠ ಒಂದು ತಿಂಗಳಿಂದ ಗರಿಷ್ಠ ಎರಡು ತಿಂಗಳವರೆಗೆ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ
    • ಸರ್ಕಾರವು ಸಂಶೋಧಕರಿಗೆ ಸಂಪೂರ್ಣ ಅವಧಿಗೆ ರೂ 37 ಲಕ್ಷದವರೆಗೆ ಮೊತ್ತವನ್ನು ನೀಡುತ್ತದೆ
NRI ಸಂಶೋಧಕರಿಗಾಗಿ ‘ವೈಭವ್ ಫೆಲೋಶಿಪ್’ ಅನಾವರಣ: ಏನಿದರ ಕಾರ್ಯ? title=
Vaibhav Fellowship

Vaibhav Fellowship: ವರ್ಷಕ್ಕೆ ಗರಿಷ್ಠ ಎರಡು ತಿಂಗಳ ಅವಧಿಗೆ ಭಾರತೀಯ ಮೂಲದ ಸಂಶೋಧಕರನ್ನು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕರೆತರುವ ಫೆಲೋಶಿಪ್ ಅನ್ನು ಸರ್ಕಾರ ಮಂಗಳವಾರ ಅನಾವರಣಗೊಳಿಸಿದೆ.

ಇದನ್ನೂ ಓದಿ: Ram Charan: ತಮ್ಮ  ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿಗಳಿಗೆ ತೆರೆ ಎಳೆದ  ರಾಮ್ ಚರಣ್ ಪತ್ನಿ

ಫೆಲೋಶಿಪ್ ಎನ್‌ ಆರ್‌ ಐ ಸಂಶೋಧಕರಿಗೆ ಭಾರತದಲ್ಲಿ ಸಂಶೋಧನಾ ಸಂಸ್ಥೆ ಅಥವಾ ಶೈಕ್ಷಣಿಕ ಸಂಸ್ಥೆಯೊಂದಿಗೆ ವರ್ಷಕ್ಕೆ ಕನಿಷ್ಠ ಒಂದು ತಿಂಗಳಿಂದ ಗರಿಷ್ಠ ಎರಡು ತಿಂಗಳವರೆಗೆ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ. ಫೆಲೋಶಿಪ್‌ನ ಅವಧಿಯು ಮೂರು ವರ್ಷಗಳಾಗಿದ್ದು, ಸರ್ಕಾರವು ಸಂಶೋಧಕರಿಗೆ ಸಂಪೂರ್ಣ ಅವಧಿಗೆ ರೂ 37 ಲಕ್ಷದವರೆಗೆ ಮೊತ್ತವನ್ನು ನೀಡುತ್ತದೆ.

‘ವೈಭವ್ ಫೆಲೋಶಿಪ್’ ಅನಾವರಣಗೊಳಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, “ಸಾಗರೋತ್ತರ ಸಂಸ್ಥೆಗಳಿಂದ ಭಾರತಕ್ಕೆ ಸಂಶೋಧಕರ ಚಲನವಲನದ ಮೂಲಕ ವಿಶ್ವದ ಅತ್ಯುತ್ತಮ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗವನ್ನು ಸುಗಮಗೊಳಿಸುವ ಹಾಗೂ ಈ ಮೂಲಕ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ಗುರಿಯನ್ನು ‘ವೈಭವ್ ಫೆಲೋಶಿಪ್’ ಹೊಂದಿದೆ” ಎಂದು ಹೇಳಿದರು.

ಇದನ್ನೂ ಓದಿ: Viral Video: ಹಿಂದೆಂದೂ ಕಂಡಿರದ ಸರೀಸೃಪಗಳ ರಣಕಾಳಗ: ಈ ಭೀಕರ ಕಾದಾಟದಲ್ಲಿ ಗೆದ್ದದ್ದು….!! ವಿಡಿಯೋ ನೋಡಿ

ಟಾಪ್ 500 QS ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳಲ್ಲಿ ಒಳಗೊಂಡಿರುವ ಸಂಸ್ಥೆಗಳ ಸಂಶೋಧಕರು ಫೆಲೋಶಿಪ್‌ಗೆ ಅರ್ಹರಾಗಿರುತ್ತಾರೆ. ‘ವೈಭವ್ ಫೆಲೋಶಿಪ್’ ಅರ್ಜಿಗಳ ಆಹ್ವಾನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೆಬ್‌ಸೈಟ್ ಮೂಲಕ ಸೂಚಿಸಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News